Udayavni Special

ಪೈರಸಿ ವಿರುದ್ಧ ಗುಡುಗಿದ ‘ರಾಬರ್ಟ್’ ನಿರ್ಮಾಪಕ ಉಮಾಪತಿ


Team Udayavani, Mar 7, 2021, 10:22 PM IST

Umapati

ಬೆಂಗಳೂರು:  ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಪೈರಸಿ ವಿರುದ್ಧ ಗುಡುಗಿದ್ದಾರೆ. ಸಿನಿಮಾ ಕಳ್ಳರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಇದೇ ಮಾರ್ಚ್ 11 ರಂದು ರಾಬರ್ಟ್ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿರುವ ರಾಬರ್ಟ್ ಚಿತ್ರಕ್ಕೆ ಇದೀಗ ಪೈರಸಿ ಭಯ ಶುರುವಾಗಿದೆ.  ಚಿತ್ರಮಂದಿರದಲ್ಲಿ ನೋಡಬೇಕಾದ ಸಿನಿಮಾ ಮೊಬೈಲ್‍ಗಳಲ್ಲಿ ಹರಿಬಿಟ್ಟು ಚಿತ್ರತಂಡದ ಶ್ರಮ ಹಾಗೂ ಹಣ ನೀರುಪಾಲು ಮಾಡುವುದೇ ಪೈರಸಿ ಮಾಡುವವರ ಕುಕೃತ್ಯ.

ರಾಬರ್ಟ್ ಸಿನಿಮಾ ಪೈರಸಿ ಆಗದಂತೆ ಚಿತ್ರತಂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈ ಬಗ್ಗೆ ಮಾತಾಡಿರುವ ನಿರ್ಮಾಪಕರು, ಪೈರಸಿ ಮಾಡಬೇಡಿ. ಒಂದು ವೇಳೆ ಪೈರಸಿ ಮಾಡಿದ್ರೆ ಕಾನೂನು ಬದ್ಧವಾಗಿ ಕ್ರಮ ಜರುಗಿಸಲಾಗುತ್ತದೆ. ಅವರ ಇಡೀ ಜೀವನ ಕೋರ್ಟ್ ಕಚೇರಿಗೆ ಅಲೆಯುವುದರಲ್ಲೇ ಮುಗಿದು ಹೋಗುವಂತೆ ಮಾಡುತ್ತೇವೆ ಎಂದು ವಾರ್ನ್ ಮಾಡಿದ್ದಾರೆ.

ಇನ್ನ ರಾಬರ್ಟ್ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಖ್ಯ ಭೂಮಿಕೆಯಲ್ಲಿ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಸಾರಥಿಗೆ ಜೋಡಿಯಾಗಿ ಆಶಾ ಭಟ್ ಸಾಥ್ ನೀಡಿದ್ದಾರೆ. ಚೌಕ ಖ್ಯಾತಿಯ ನಿರ್ದೇಶಕ ತರುಣ್ ರಾಬರ್ಟ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗು ಚಿತ್ರರಂಗದ ಖಳನಟ ಜಗಪತಿ ಬಾಬು ರಾಬರ್ಟ್ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಉಮಾಪತಿ ಶ್ರೀನಿವಾಸ್ ಬಹುಬಜೆಟ್ ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ವಿನೋದ್ ಪ್ರಭಾಕರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಬಹುತಾರಾಗಣದ ಈ ಸಿನಿಮಾ ಶಿವರಾತ್ರಿ ನಿಮಿತ್ತ ಮಾರ್ಚ್ 11 ರಂದು ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಸುಮಾರು 1800 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಟಾಪ್ ನ್ಯೂಸ್

nhfh

ಆಕ್ಸಿಜನ್ ಕೊರತೆಯಿಂದ 6 ಜನ ಕೋವಿಡ್ ಸೋಂಕಿತರ ದುರ್ಮರಣ

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

ಲಕಜಹಗ್ರೆಡ

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್

COVID-19 crisis: Kapil Sibal asks PM Narendra Modi to declare National Health Emergency

ಕೋವಿಡ್ 19 : ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ : ಕಪಿಲ್ ಸಿಬಲ್

ghfgfg

24 ಗಂಟೆಯಲ್ಲಿ 25,000 ಕೋವಿಡ್ ಪ್ರಕರಣ : ದೆಹಲಿಯಲ್ಲಿ ಬೆಡ್‍,ಆಕ್ಸಿಜನ್ ಅಭಾವ ಮುಂದುವರಿಕೆ

ಗದಸಸದದ್

ಮೊಬೈಲ್ ಖರೀದಿಸಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕುತ್ತಿಗೆ ಹಿಸುಕಿ ಕೊಂದ ಮೊಮ್ಮಗ!

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

ಮತ್ತೊಂದು ಪ್ರತಿಷ್ಠಿತ ಕಂಪೆನಿಗೆ ರಶ್ಮಿಕಾ ಮಂದಣ್ಣ ರಾಯಭಾರಿ

ಮತ್ತೊಂದು ಪ್ರತಿಷ್ಠಿತ ಕಂಪೆನಿಗೆ ರಶ್ಮಿಕಾ ಮಂದಣ್ಣ ರಾಯಭಾರಿ

ಕ್ಯೂಟ್‌ ಜೋಡಿ ಬೈ ಟು ಲವ್‌: ಗಮನ ಸೆಳೆಯುತ್ತಿದೆ ಫ‌ಸ್ಟ್‌ ಲುಕ್‌ ಪೋಸ್ಟರ್

ಕ್ಯೂಟ್‌ ಜೋಡಿ ಬೈ ಟು ಲವ್‌: ಗಮನ ಸೆಳೆಯುತ್ತಿದೆ ಫ‌ಸ್ಟ್‌ ಲುಕ್‌ ಪೋಸ್ಟರ್

ಬದಲಾಗಲಿದೆ ಶಿವಪ್ಪ ಟೈಟಲ್‌

ಬದಲಾಗಲಿದೆ ಶಿವಪ್ಪ ಟೈಟಲ್‌

ಸಾಹಸ ದೃಶ್ಯಗಳ ಹಿಂದೆ ಅಣ್ಣಾವ್ರ ಶ್ರಮ

ಸಾಹಸ ದೃಶ್ಯಗಳ ಹಿಂದೆ ಅಣ್ಣಾವ್ರ ಶ್ರಮ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

nhfh

ಆಕ್ಸಿಜನ್ ಕೊರತೆಯಿಂದ 6 ಜನ ಕೋವಿಡ್ ಸೋಂಕಿತರ ದುರ್ಮರಣ

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

The Isaac Library Burning Secret CC Camera

ಇಸಾಕ್‌ ಲೈಬ್ರರಿ ಭಸ್ಮ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ

ಲಕಜಹಗ್ರೆಡ

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್

Widespread respect for Indian astrology

ಭಾರತೀಯ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶ್ಯಾದ್ಯಂತ ಗೌರವ, ಮಾನ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.