Rummy aata; ಟ್ರೇಲರ್ ನಲ್ಲಿ ʼರಮ್ಮಿ ಆಟʼ
Team Udayavani, Sep 5, 2024, 12:33 PM IST
ರಮ್ಮಿ ಆಡುವುದರಿಂದ ಏನೇನು ತೊಂದರೆಗಳಾಗುತ್ತವೆ, ಜನ ಹೇಗೆಲ್ಲ ಮೋಸ ಹೋಗುತ್ತಾರೆ ಎಂಬುದನ್ನು ಬಿಡುಗಡೆಗೆ ಸಿದ್ದವಾಗಿರುವ ರಮ್ಮಿ ಆಟ ಚಿತ್ರದಲ್ಲಿ ಹೇಳಲಾಗಿದೆ. ಉಮರ್ ಷರೀಫ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಟ್ರೇಲರ್ ರಿಲೀಸ್ ಮಾಡಿ ಆನ್ ಲೈನ್ ಗೇಮ್ ಹುಚ್ಚಿಗೆ ಬಲಿಯಾಗಬೇಡಿ ಎಂಬ ಮೆಸೇಜ್ ಇಟ್ಟುಕೊಂಡು ಉಮರ್ ಷರೀಫ್ ಅವರು ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಒಳ್ಳೆದಾಗಲಿ, ಜನ ಇಂಥ ಚಿತ್ರಗಳನ್ನು ನೋಡುವ ಮೂಲಕ ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಈಗಾಗಲೇ ತನ್ನ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ರಮ್ಮಿ ಆಟ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ “ಯು’ ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಅಮೀರ್ ಅವರ ಸಾಹಸವಿದೆ. ರಾಘವ ಸೂರ್ಯ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam ಅಕ್ಟೋಬರ್ 3ಕ್ಕೆ ಪಿಎಸ್‌ಐ ಪರೀಕ್ಷೆ ಮರು ನಿಗದಿ
Renukaswamy Case ದರ್ಶನ್ ಗ್ಯಾಂಗ್ 4 ದಿನ ನ್ಯಾಯಾಂಗ ಬಂಧನ ವಿಸ್ತರಣೆ
High Court ಜಾಮೀನು ಅರ್ಜಿ ವಾಪಸ್ ಪಡೆದ ಪವಿತ್ರಾ ಗೌಡ; ಹೊಸ ಅರ್ಜಿ ಸಲ್ಲಿಕೆ?
High Court ಸುನಿಲ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ರದ್ದತಿಗೆ ನಕಾರ
Congress Govt; ಕರ್ನಾಟಕವೇನು ಇಸ್ಲಾಮಿಕ್ ರಿಪಬ್ಲಿಕ್ಕಾ: ಅಶೋಕ್ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.