ಜನವರಿ 3ಕ್ಕೆ “ರನ್ 2′ ತೆರೆಗೆ
Team Udayavani, Jan 2, 2020, 7:00 AM IST
“ರನ್-2′ ಎಂಬ ಸಿನಿಮಾವೊಂದು ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಆದರೆ, ಈಗ ಸದ್ದಿಲ್ಲದೇ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜನವರಿ 03 ರಂದು ಬಿಡುಗಡೆಯಾಗುತ್ತಿದೆ. ಬಿ.ಎಸ್ ಸಂಜಯ್ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಅವರದ್ದೇ. ಇದೊಂದು ಆ್ಯಕ್ಷನ್ ಹಿನ್ನೆಲೆಯ ಸಿನಿಮಾವಾಗಿದ್ದು, ಆ್ಯಕ್ಷನ್ ಪ್ರಿಯರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.
ಹುಡುಗಿಯೊಬ್ಬಳು ನಾಯಕನ ಬಳಿ ಸಹಾಯ ಕೋರುತ್ತಾಳೆ. ಸಹಾಯ ಮಾಡಲು ಮುಂದಾದ ನಾಯಕನಿಗೆ ಮುಂದೆ ಸಮಸ್ಯೆಗಳು ಎದುರಾಗುತ್ತವೆ. ಅವೆಲ್ಲಾವನ್ನು ಎದುರಿಸಿ ಹೇಗೆ ಹೊರಗೆ ಬರುತ್ತಾನೆ ಎಂಬುದು ಸಿನಿಮಾದ ಸಾರಾಂಶವಾಗಿದೆ.
2015ರ ಮಿಸ್ಟರ್ ವರ್ಲ್ಡ್ ಆಗಿರುವ ಮಂಗಳೂರಿನ ಪವನ್ ಶೆಟ್ಟಿ ಈ ಚಿತ್ರದ ನಾಯಕ. ತಾರಾ ಶುಕ್ಲಾ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಕುರಿರಂಗ, ಜನಾರ್ಧನ್, ಖಳನಾಗಿ ಮಹೇಶ್ ಕುಮಾರ್ ಕುಮಟ ಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ರಮೇಶ್ ಕೋಯಿರಾ ಛಾಯಾಗ್ರಹಣ, ಅಕುಲ್ ನೃತ್ಯ, ಜಗ್ಗು ಸಾಹಸವಿದೆ. ಚಿತ್ರದ ಚಿತ್ರೀಕರಣ ಕುಮಟ, ಹೊನ್ನಾವರ, ಯಾಣ ಸುತ್ತಮುತ್ತ ನಡೆದಿದೆ.