ಸಂಚಿತ್ ಹೆಗ್ಡೆ ಕಂಠದಲ್ಲಿ ‘ಮಳೆಯೇ ಮಳೆಯೇ’: ಸಲಗದ ಮತ್ತೊಂದು ಹಾಡು ರಿಲೀಸ್ !
Team Udayavani, Sep 5, 2020, 3:59 PM IST
ಬೆಂಗಳೂರು: ಸಲಗ ಚಿತ್ರತಂಡ ಇದೀಗ ಮತ್ತೊಂದು ಅದ್ಬುತ ಹಾಡನ್ನು ಹೊರತಂದಿದ್ದು ಯೂಟ್ಯೂಬ್ ನಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಸಂಚಿತ್ ಹೆಗ್ಡೆ ಕಂಚಿನ ಕಂಠದಿಂದ ಮೂಡಿಬಂದಿರುವ ಮಳೆಯೇ ಮಳೆಯೇ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ದುನಿಯಾ ವಿಜಯ್ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬರುತ್ತಿರವ ಸಲಗ ಈಗಾಗಲೇ ಬಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ಇತ್ತೀಚಿಗಷ್ಟೆ ಬಿಡುಗಡೆಯಾದ, ಆ್ಯಂಟೋನಿ ದಾಸ್ ಹಾಡಿರುವ ಸೂರಿ ಅಣ್ಣ ಹಾಡು ಕೂಡ ಭರ್ಜರಿ ಮೆಚ್ಚುಗೆ ಪಡೆದಿತ್ತು.
‘ಮಳೆಯೇ ಮಳೆಯೇ’ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಚಿತ್ ಹೆಗ್ಡೆ ಮತ್ತು ಐಶ್ವರ್ಯಾ ರಂಗರಾಜನ್ ತಮ್ಮ ಕಂಚಿನ ಕಂಠದಿಂದ ಹಾಡಿನ ಮೂಲಕ ಮೋಡಿ ಮಾಡಿದ್ದು A2 ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಚಿಕ್ಕಮಗಳೂರು, ಮುಳ್ಳಯ್ಯನಗಿರಿ ಮತ್ತು ಸಕಲೇಶಪುರದ ಸುತ್ತಮುತ್ತಲಿನಲ್ಲಿ ಈ ಹಾಡು ಚಿತ್ರಣಗೊಂಡಿದೆ. ದುನಿಯಾ ವಿಜಯ್ ಜೊತೆಗೆ ನಟ ಡಾಲಿ ಧನಂಜಯ್ ಕೂಡ ಸಲಗದಲ್ಲಿ ಬಣ್ಣ ಹಚ್ಚಿದ್ದಾರೆ. ವಿಜಯ್ ಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು