“ದಬಾಂಗ್ 3′ ಕನ್ನಡ ಅವತರಣಿಕೆಗೆ ಸಲ್ಮಾನ್ ಧ್ವನಿ
Team Udayavani, Oct 12, 2019, 3:01 AM IST
ಬಾಲಿವುಡ್ ನಟ ಸಲ್ಮಾನ್ಖಾನ್ ಅಭಿನಯದ “ದಬಾಂಗ್-3′ ಸಿನಿಮಾ ಇನ್ನೇನು ಬಿಡುಗಡೆಗೆ ಸಜ್ಜಾಗುತ್ತಿರುವುದು ಗೊತ್ತೇ ಇದೆ. ಆ ಚಿತ್ರದಲ್ಲಿ ಸುದೀಪ್ ಕೂಡ ನಟಿಸಿದ್ದಾರೆ. ಇದೇ ಮೊದಲ ಸಲ ಸುದೀಪ್ ಅವರು ಸಲ್ಮಾನ್ ಖಾನ್ ಕಾಂಬಿನೇಶನ್ನಲ್ಲಿ ಅಭಿನಯಿಸಿರುವುದು ವಿಶೇಷ. ಈಗ ಈ ಚಿತ್ರದ ಮತ್ತೊಂದು ಹೊಸ ಸುದ್ದಿ ಹೊರಬಂದಿದೆ.
“ದಬಾಂಗ್-3′ ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ ಎಂಬ ವಿಷಯ ಗೊತ್ತು. ಕನ್ನಡದಲ್ಲಿ ಬಿಡುಗಡೆಯಾಗುವ ಚಿತ್ರಕ್ಕೆ ಸ್ವತಃ ಸಲ್ಮಾನ್ ಖಾನ್ ಅವರೇ, ತಮ್ಮ ಪಾತ್ರಕ್ಕೆ ಡಬ್ ಮಾಡಲು ಒಪ್ಪಿದ್ದಾರೆ. ಹೌದು, ಟ್ರೇಲರ್ಗೆ ಡಬ್ ಮಾಡಿದ್ದ ಅವರನ್ನು, ಸುದೀಪ್ ಅವರು, “ನೀವೇ ಕನ್ನಡದಲ್ಲೂ ಡಬ್ ಮಾಡಿದರೆ ಅದಕ್ಕೊಂದು ವ್ಯಾಲ್ಯು ಬರುತ್ತೆ.
ಏನಾದರೂ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ, ಸರಿಪಡಿಸಿಕೊಳ್ಳೋಣ’ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ, ಸಲ್ಮಾನ್ಖಾನ್ ಅವರು ಇಂಟ್ರೆಸ್ಟ್ ತೋರಿಸಿ ಒಪ್ಪಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಡೈಲಾಗ್ ಹೇಳಿಕೊಡಲು ಒಬ್ಬರನ್ನು ನೇಮಿಸಿದ್ದು, ಅವರೊಂದಿಗೆ ಈಗಾಗಲೇ ಮಾತುಕತೆ ಕೂಡ ನಡೆಸಲಾಗಿದೆ’ ಎಂಬುದು ಜಾಕ್ ಮಂಜು ಅವರ ಮಾತು. ಅಂದಹಾಗೆ, “ದಬಾಂಗ್-3′ ಚಿತ್ರವನ್ನು ಕನ್ನಡದಲ್ಲಿ ಜಾಕ್ ಮಂಜು ಅವರು ವಿತರಣೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ