ಮೊದಲ ಹಾಡಲ್ಲಿ ನಮ್ಮ ಹುಡುಗರು ಎಂಟ್ರಿ…


Team Udayavani, Oct 13, 2021, 12:22 PM IST

ಮೊದಲ ಹಾಡಲ್ಲಿ ನಮ್ಮ ಹುಡುಗರು ಎಂಟ್ರಿ…

ರಿಯಲ್‌ಸ್ಟಾರ್‌ ಉಪೇಂದ್ರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ನಾಯಕನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ “ನಮ್ಮ ಹುಡುಗರು’ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಈಗಾಗಲೇ “ನಮ್ಮ ಹುಡುಗರು’ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ದಸರಾ ಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ವಿಡಿಯೋ ಹಾಡನ್ನು ಬಿಡುಗಡೆಗೊಳಿಸಿದೆ.

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಧ್ವನಿಯಾಗಿರುವ ಈ ಹಾಡಿಗೆ ಅಭಿಮಾನ್‌ ರಾಯ್‌ ಸಂಗೀತ ಸಂಯೋಜಿಸಿದ್ದಾರೆ. ಬಹದ್ದೂರ್‌ ಚೇತನ್‌ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ನಿರಂಜನ್‌ ಸುಧೀಂದ್ರ, “ಕೆಲವು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನನಗೆ “ನಮ್ಮ ಹುಡುಗರು’ ಹೀರೋ ಆಗಿ ಮೊದಲ ಸಿನಿಮಾ.

ಈ ಸಿನಿಮಾದಲ್ಲಿ ನಾನು ಮಂಡ್ಯದ ಕಡೆಯು ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಭರಮ ಅನ್ನೋದು ನನ್ನ ಪಾತ್ರದ ಹೆಸರು. ಪಾತ್ರದ ಪೋಷಣೆ ಚೆನ್ನಾಗಿದೆ. ಇದೊಂದು ಇನೋಸೆಂಟ್‌ ಲವ್‌ ಸ್ಟೋರಿ, ಫ್ಯಾಮಿಲಿ ಡ್ರಾಮಾ ಇರುವಂತಹ ಸಿನಿಮಾ. ಸುಮಾರು ಮೂರು ವರ್ಷದ ಹಿಂದೆ ಶುರುವಾದ ಸಿನಿಮಾ ಈಗ ರಿಲೀಸ್‌ ಹಂತಕ್ಕೆ ಬಂದಿದೆ. ಈಗಾಗಲೇ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ರಿಲೀಸ್‌ಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಇದನ್ನೂ ಓದಿ;- ಕಸದ ತೊಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಪ್ರಮೋಶನ್‌ ಭಾಗವಾಗಿ “ಐ ಲವ್‌ ಯು…’ ಎಂಬ ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದ್ದೇವೆ’ ಎಂದರು. ನವ ನಿರ್ದೇಶಕ ಹೆಚ್‌. ಬಿ ಸಿದ್ಧು “ನಮ್ಮ ಹುಡುಗರು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಸಿದ್ಧು, “ಸಿನಿಮಾದ ಹೆಸರೇ ಹೇಳುವಂತೆ ಇದು ನಮ್ಮ ಹುಡುಗರ ಕಥೆ. ಪ್ರತಿಯೊಬ್ಬರ ಜೀವನದಲ್ಲೂ ನಡೆದ, ನೋಡಿದ ಘಟನೆಗಳನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ.

ಒಂದು ಸುಳ್ಳಿನಿಂದ ಆಗುವ ಅನಾಹುತದ ಬಗ್ಗೆ ಸಿನಿಮಾವಿದೆ. ಹಾಗಾಗಿ ಎಲ್ಲರಿಗೂ ಈ ಸಿನಿಮಾ ಕನೆಕ್ಟ್ ಆಗುತ್ತದೆ. “ನಮ್ಮ ಹುಡುಗರು’ ಅನ್ನೋದೆ ಏನೋ ಒಂದು ಆಶಾವಾದ, ಆತ್ಮೀಯತೆ, ಭರವಸೆ, ಬೆಂಬಲ ಎಲ್ಲವನ್ನೂ ಕೊಡುತ್ತದೆ. ಹಾಗಾಗಿ ಸಿನಿಮಾದ ಟೈಟಲ್‌ನ “ನಮ್ಮ ಹುಡುಗರು’ ಅಂಥ ಇಟ್ಟಿದ್ದೇವೆ. ಸದ್ಯ ಸಿನಿಮಾದ ಪ್ರಮೋಶ್‌ ನಡೆಯುತ್ತಿದ್ದು, ಇದೇ ನವೆಂಬರ್‌ ವೇಳೆಗೆ ರಿಲೀಸ್‌ ಮಾಡುವ ಯೋಚನೆ ಇದೆ’ ಎಂದರು.

ಚಿತ್ರದ ನಾಯಕಿ ರಾಧ್ಯಾ, ನಿರ್ಮಾಪಕ ಕೆ.ಕೆ ಅಶ್ರಫ್ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಇನ್ನು “ನಮ್ಮ ಹುಡುಗರು’ ಚಿತ್ರದಲ್ಲಿ ಶರತ್‌ ಲೋಹಿತಾಶ್ವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್‌, ಆಲ…ಓಕೆ ಅಲೋಕ್‌ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಪ್ರಮೋಶನ್‌ ಕೆಲಸದಲ್ಲಿ ಬಿಝಿಯಾಗಿರುವ “ನಮ್ಮ ಹುಡುಗರು’ ತೆರೆಮೇಲೆ ಎಷ್ಟರ ಮಟ್ಟಿಗೆ ಮನರಂಜಿಸುತ್ತಾರೆ ಅನ್ನೋದು ಇದೇ ನವೆಂಬರ್‌ ವೇಳೆಗೆ ಗೊತ್ತಾಗಲಿದೆ.

ಟಾಪ್ ನ್ಯೂಸ್

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

aditi prabhudeva

ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

love mocktail 2

ಲವ್‌ ಮಾಕ್ಟೇಲ್‌-2ಗೆ “ಯು’ ಪ್ರಮಾಣ ಪತ್ರ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಬಂಧನ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಆರೋಪಿಸಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.