ತಂದೆಯಾದ ಸಂಭ್ರಮದಲ್ಲಿ ತಾಯಿಗೆ ತಕ್ಕ ಮಗ
Team Udayavani, Nov 23, 2018, 11:36 AM IST
ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಟ ಅಜಯ್ ರಾವ್ ಅವರು ತಂದೆಯಾದ ಸಂಭ್ರಮದಲ್ಲಿದ್ದಾರೆ. ಪತ್ನಿ ಸ್ವಪ್ನ ಅವರು ಶುಕ್ರವಾರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಗು ಮತ್ತು ಪತ್ನಿ ಇಬ್ಬರು ಆರೋಗ್ಯವಾಗಿದ್ದು, ಅಜಯ್ ರಾವ್ ತಂದೆಯಾದ ಸಂಭ್ರಮದ್ಲಲಿ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದಾರೆ.
ಅಜಯ್ರಾವ್ ಅವರು ಗಣೇಶ ಚತುರ್ಥಿ ವೇಳೆ ಪತ್ನಿ ಪತ್ನಿ ಗರ್ಭಿಣಿಯಾಗಿರುವ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
2014 ರ ಡಿಸೆಂಬರ್ ತಿಂಗಳಲ್ಲಿ ಅಜಯ್ ರಾವ್ ಅವರು ಸರಳವಾಗಿ ಸ್ವಪ್ನ ಅವರೊಂದಿಗೆ ಹೊಸ ಬಾಳಿಗೆ ಕಾಲಿರಿಸಿದ್ದರು.
ಅಜಯ್ ರಾವ್ ಅವರ 25 ನೇ ಚಿತ್ರ ತಾಯಿಗೆ ತಕ್ಕ ಮಗ ನವೆಂಬರ್ 16 ರಂದು ರಾಜ್ಯಾದ್ಯಂತ ಬಿಡಗುಡೆಯಾಗಿದೆ.