ರಮ್ಯಾ ಮೋಹಕ ತಾರೆ ಶುಭಾ ಮೋದಕ ತಾರೆ!
Team Udayavani, Jul 3, 2017, 11:44 AM IST
ರಮ್ಯಾಗೆ ಮೋಹಕ ತಾರೆ ಎಂಬ ಬಿರುದಿರುವುದು ಎಲ್ಲರಿಗೂ ಗೊತ್ತಿದೆ. ಆಕೆ ಮೋಹಕ ನಗೆ ಬೀರುವುದರಿಂದ ಮೋಹಕ ತಾರೆ ಎಂಬ ಬಿರುದನ್ನು ಅವರ ಅಭಿಮಾನಿಗಳು ಕೊಟ್ಟಿದ್ದಾರೆ. ಆದರೆ, ಮೋದಕ ತಾರೆ ಎಂಬ ಬಿರುದು ಗೊತ್ತಿದೆಯಾ? ಗೊತ್ತಿಲ್ಲದಿದ್ದರೆ ಕೇಳಿ. ಅಂಥದ್ದೊಂದು ಬಿರುದನ್ನು ಇದೀಗ ಶುಭಾ ಪೂಂಜಾ ಅವರಿಗೆ ನೀಡಲಾಗಿದೆ.
ಮೋಹಕ ತಾರೆಯೇನೋ ಓಕೆ, ಮೋದಕ ತಾರೆಯೆಂದರೇನು? ಎಂಬ ಪ್ರಶ್ನೆ ಸಹಜ. ಮೋದಕದಷ್ಟೇ ಸಿಹಿಯಾದ ಎಂಬ ಉತ್ತರ ನೀಡುತ್ತಾರೆ ನಿರ್ದೇಶಕ ಮಾಗಡಿ ಪಾಂಡು. ನಿನ್ನೆಯಷ್ಟೇ “ನರಗುಂದದ ಬಂಡಾಯ’ ಎಂಬ ಚಿತ್ರವನ್ನು ಅವರು ನಿರ್ದೇಶಿಸುತ್ತಿರುವುದು ಮತ್ತು ಅದರಲ್ಲಿ ಶುಭ ನಟಿಸುತ್ತಿರುವ ಬಗ್ಗೆ ಓದಿರಬಹುದು. ಆ ಚಿತ್ರದಲ್ಲಿ ಶುಭಾಗೆ ಮೋದಕ ತಾರೆ ಎಂಬ ಬಿರುದು ಕೊಟ್ಟಿದ್ದಾರೆ ನಾಗೇಂದ್ರ ಮಾಗಡಿ.
“ನರಗುಂದ ಬಂಡಾಯ’ ಚಿತ್ರದಲ್ಲಿ ರಕ್ಷಿತ್ ಎದುರು ಶುಭಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕಾಗಿ ಸುಮಾರು 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ಇತ್ತೀಚೆಗೆ ಶುಭಾ ಅವರ ಫೋಟೋಶೂಟ್ ಸಹ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?