ರೆಟ್ರೋ ಲುಕ್‌ನಲ್ಲಿ ಸಂಜನಾ

ಮತ್ತೆ ಮತ್ತೆ ಚಿತ್ರದಲ್ಲಿ ಗೆಸ್ಟ್‌ ಅಪಿಯರೆನ್ಸ್‌

Team Udayavani, Dec 11, 2019, 7:02 AM IST

ಇಲ್ಲಿಯವರೆಗೆ ತನ್ನ ಹಾಟ್‌ ಆ್ಯಂಡ್‌ ಬೋಲ್ಡ್‌ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ “ಗಂಡ ಹೆಂಡತಿ’ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಈಗ ರೆಟ್ರೋ ಲುಕ್‌ನಲ್ಲಿ, ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಹೌದು, ಈ ಬಾರಿ ಸಂಜನಾ ಐವತ್ತು-ಅರವತ್ತರ ದಶಕದ ಹೀರೊಯಿನ್‌ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾ. ಅರುಣ್‌ ಹೊಸಕೊಪ್ಪ ನಿರ್ದೇಶನದ “ಮತ್ತೆ ಮತ್ತೆ’ ಚಿತ್ರದಲ್ಲಿ ಸಂಜನಾ ಗೆಸ್ಟ್‌ ಅಪಿಯರೆನ್ಸ್‌ ಮಾಡುತ್ತಿದ್ದು, ಇದರಲ್ಲಿ ಹಿರಿಯ ನಟಿ ಆರತಿ, ಕಲ್ಪನಾ ಅವರನ್ನು ಹೋಲುವಂಥ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಈ ಬಗ್ಗೆ ಮಾತನಾಡುವ ನಿರ್ದೇಶಕ ಡಾ. ಅರುಣ್‌ ಹೊಸಕೊಪ್ಪ, “ಇದೊಂದು ಕಂಪ್ಲೀಟ್‌ ಕಾಮಿಡಿ ಶೈಲಿಯ ಚಿತ್ರ. ಇದರಲ್ಲಿ ಬರುವ ಪ್ರಮುಖ ಸನ್ನಿವೇಶವೊಂದರಲ್ಲಿ ಸಂಜನಾ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಭಿಮಾನಿಯೊಬ್ಬನ ಕನಸಿನಲ್ಲಿ ಐವತ್ತು-ಅರವತ್ತರ ದಶಕದ ಜನಪ್ರಿಯ ಹೀರೊಯಿನ್‌ ಒಬ್ಬಳು ಹೇಗೆ ಕಾಣಿಸಿಕೊಳ್ಳುತ್ತಾಳೆ ಅನ್ನೋ ಕಲ್ಪನೆಯ, ಕನಸಿನ ಪಾತ್ರದಲ್ಲಿ ಸಂಜನಾ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಚಿತ್ರದಲ್ಲಿ ಸಂಜನಾ ಅವರ ಲುಕ್‌ ಸಂಪೂರ್ಣ ರೆಟ್ರೋ ಶೈಲಿಯಲ್ಲಿರಲಿದೆ.

ಸಂಜನಾ ಅವರನ್ನ ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರದ ಹೊಸ ಲುಕ್‌ನಲ್ಲಿ ತೆರೆಮೇಲೆ ಕಾಣಲಿಸದ್ದಾರೆ’ ಎಂದು ಸಂಜನಾ ಪಾತ್ರದ ಬಗ್ಗೆ ವಿವರಣೆ ಕೊಡುತ್ತಾರೆ. ಸದ್ಯ ಬಿಡುಗಡೆಗೆ ತಯಾರಾಗುತ್ತಿರುವ “ಮತ್ತೆ ಮತ್ತೆ’ ಚಿತ್ರ ಮುಂದಿನ ವರ್ಷದ ಜನವರಿ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ಹಿರಿಯ ನಟ ಎಂ.ಎಸ್‌ ಉಮೇಶ್‌, ಮುಖ್ಯಮಂತ್ರಿ ಚಂದ್ರು, ಮನದೀಪ್‌ ರಾಯ್‌, ಡಿಂಗ್ರಿ ನಾಗರಾಜ್‌, ಕೋಟೆ ಪ್ರಭಾಕರ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ