ಬ್ರಹ್ಮಚಾರಿಗಾಗಿ ಸಂಜಿತ್‌ ಹೆಗ್ಡೆ, ಸುಪ್ರಿಯಾ ಲೈವ್‌ ಶೋ

Team Udayavani, Nov 21, 2019, 3:26 PM IST

ಈಗಾಗಲೇ ತನ್ನ ಹಾಡುಗಳು ಮತ್ತು ಟೀಸರ್‌ ಮೂಲಕ ಗಾಂಧಿನಗರದ ಒಂದಷ್ಟು ಸಿನಿಮಂದಿಯ ಗಮನ ಸೆಳೆದಿರುವ, ನೀನಾಸಂ ಸತೀಶ್‌ ಮತ್ತು ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಬ್ರಹ್ಮಚಾರಿ’ ಚಿತ್ರ ಮತ್ತೂಂದು ವಿಷಯಕ್ಕೆ ಸುದ್ದಿಯಾಗುತ್ತಿದೆ.

“ಬ್ರಹ್ಮಚಾರಿ’ ಚಿತ್ರದ ಬರುವ ಹಾಡೊಂದಕ್ಕೆ ಗಾಯಕ ಸಂಜಿತ್‌ ಹೆಗ್ಡೆ ಹಾಗೂ ಸುಪ್ರಿಯಾ ರಾಮ್‌ ಧ್ವನಿಯಾಗಲಿದ್ದು, ಈ ಹಾಡನ್ನು ಲೈವ್‌ ಶೋ ಮೂಲಕ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಮಂತ್ರಿ ಮಾಲ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಾಡು ಅದ್ಧೂರಿಯಾಗಿ
ಬಿಡುಗಡೆಯಾಗಿದೆ.

ಇನ್ನು ಈ ಹಾಡಿಗೆ ಬ್ರಹ್ಮ ವಿಶ್‌ ಸಂಗೀತ ಸಂಯೋಜಿಸಿದ್ದಾರೆ. “ಸೋಶಿ ಯಲ್‌ ಮೀಡಿಯಾ ಅಥವಾ
ರೇಡಿಯೊ ದಲ್ಲಿ ಅನಾವರಣಗೊಳ್ಳುವ ಹಾಡನ್ನು, ಲೈವ್‌ ಪ್ರದರ್ಶನದೊಂದಿಗೆ ಟ್ರ್ಯಾಕ್ ಬಿಡುಗಡೆ
ಯಾಗುತ್ತಿರುವುದು ಇದೇ ಮೊದಲು, ಇದು ಒಂದು ಅನನ್ಯ ಅನುಭವವಾಗಿದೆ. ಗಾಯಕರು ಕೇಳುಗರಿಗೆ ರೋಮ್ಯಾಂಟಿಕ್‌ ಮಧುರ ಅನುಭವವನ್ನು ನೀಡಿದ್ದಾರೆ’ ಎಂಬುದು ಚಿತ್ರದ
ನಿರ್ಮಾಪಕ ಉದಯ್‌ ಕೆ. ಮೆಹ್ತಾ ಅಭಿಪ್ರಾಯ. ಸದ್ಯ ಸೆನ್ಸಾರ್‌ ಮುಂದಿರುವ “ಬ್ರಹ್ಮಚಾರಿ’, ಸೆನ್ಸಾರ್‌ ಗ್ರೀನ್‌ ಸಿಗ್ನಲ್‌ ಸಿಗುತ್ತಿದ್ದಂತೆ, ತೆರೆಗೆ ಬರಲು ಪ್ಲಾನ್‌ ಮಾಡಿಕೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ