ಮೈ ನೇಮ್‌ ಇಸ್‌ ಸಿದ್ಧೇಗೌಡನ ಹಿಂದೆ ಸತೀಶ್‌

Team Udayavani, Jan 2, 2019, 5:49 AM IST

ಕೆಲವು ದಿನಗಳ ಹಿಂದಷ್ಟೇ ನೀನಾಸಂ ಸತೀಶ್‌ ತಾವು ನಿರ್ದೇಶನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಜೊತೆಗೆ ಹೊಸ ವರ್ಷದಂದು ಚಿತ್ರದ ಟೈಟಲ್‌ ಅನೌನ್ಸ್‌ ಮಾಡುವುದಾಗಿಯೂ ಸತೀಶ್‌ ಹೇಳಿದ್ದರು. ಅದರಂತೆ ಈಗ ಚಿತ್ರದ ಟೈಟಲ್‌ ಅನೌನ್ಸ್‌ ಆಗಿದೆ. ಚಿತ್ರಕ್ಕೆ “ಮೈ ನೇಮ್‌ ಇಸ್‌ ಸಿದ್ಧೇಗೌಡ’ ಎಂದು ಹೆಸರಿಡಲಾಗಿದೆ. ಜೊತೆಗೆ ಚಿತ್ರಕ್ಕೆ “ದೇರ್‌ ಇಸ್‌ ನೋ ಟುಮಾರೋ’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ. 

ಚಿತ್ರದ ಟೈಟಲ್‌ ಕೇಳಿದಾಗ ಮತ್ತೆ ಸತೀಶ್‌ ಮಂಡ್ಯ ಬ್ಯಾಕ್‌ಡ್ರಾಪ್‌ನಲ್ಲಿ ಸಿನಿಮಾ ಮಾಡುತ್ತಾರಾ ಎಂದು ನೀವು ಕೇಳಬಹುದು. ಆದರೆ, ಈ ಬಗ್ಗೆ ಸತೀಶ್‌ ಈಗಲೇ ಏನು ಹೇಳಲು ಇಚ್ಚಿಸುವುದಿಲ್ಲ. ಒಂದು ವಿಭಿನ್ನ ಸಿನಿಮಾವಾಗುತ್ತದೆಯಷ್ಟೇ ಎಂದು ಹೇಳುತ್ತಾರೆ. ಎಲ್ಲಾ ಓಕೆ, ಈ ಸಿನಿಮಾವನ್ನು ಸತೀಶ್‌ ನಿರ್ದೇಶಿಸಲು ಕಾರಣ ಕಥೆಯಂತೆ. “ತುಂಬಾ ದಿನಗಳಿಂದ ಈ ಕಥೆ ನನ್ನನ್ನು ಕಾಡುತ್ತಿತ್ತು. ಆ ಕಾರಣದಿಂದ ಈ ಚಿತ್ರವನ್ನು ನಾನೇ ನಿರ್ದೇಶಿಸುತ್ತಿದ್ದೇನೆ’ ಎನ್ನುವುದು ಸತೀಶ್‌ ಮಾತು.

ನಿರ್ದೇಶನ, ನಟನೆ ಜೊತೆಗೆ ನಿರ್ಮಾಣದಲ್ಲೂ ಸತೀಶ್‌ ಭಾಗಿಯಾಗುತ್ತಿದ್ದಾರೆ. ಸತೀಶ್‌ ಪಿಕ್ಚರ್‌ಹೌಸ್‌ ಹಾಗೂ ಲೀಡರ್‌ ಫಿಲಂ ಪ್ರೊಡಕ್ಷನ್‌ ಸೇರಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಸದ್ಯ ನೀನಾಸಂ ಸತೀಶ್‌ ಅವರ “ಚಂಬಲ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಜೊತೆಗೆ “ಗೋಧ್ರಾ’ ಚಿತ್ರದ ಚಿತ್ರೀಕರಣವೂ ಮುಗಿದಿದೆ. ಈ ನಡುವೆಯೇ ಸತೀಶ್‌ ತಮಿಳು ಸಿನಿಮಾವೊಂದರಲ್ಲೂ ನಟಿಸುತ್ತಿದ್ದಾರೆ. 

ಅತಿ ಹೆಚ್ಚು ಮಂಡ್ಯ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಬಗ್ಗೆ ಮಾತನಾಡುವ ಸತೀಶ್‌, “ಎಲ್ಲರೂ ನನ್ನನ್ನು ಮಿಡ್ಲ್ಕ್ಲಾಸ್‌ನಲ್ಲೇ ನೋಡೋಕೆ ಇಷ್ಟಪಡ್ತಾರೆ. ಅದರಲ್ಲೂ ಗ್ರಾಮೀಣ ಮಂಡ್ಯ ಭಾಷೆಯಲ್ಲೇ ನನ್ನನ್ನು ಕಾಣುತ್ತಾರೆ. ಅದೇನೋ ಗೊತ್ತಿಲ್ಲ. ನನ್ನ ಹುಡುಕಿ ಬಂದ ಚಿತ್ರಗಳು ಹಾಗೇ ಇದ್ದವು. ಮಂಡ್ಯ ನನ್ನ ತವರೂರು. ಆ ಭಾಷೆ ನನಗೆ ಹಿಡಿತವಿದೆ. ಸದಾ ಅದೇ ನನ್ನ ಬಾಯಲ್ಲಿ ಓಡಾಡುತ್ತಿರುತ್ತೆ. ಹಾಗಾಗಿ ಅದು ಸಲೀಸು. ಹಾಗಂತ, ಬೇರೆ ಭಾಷೆ ಬರಲ್ಲ ಎಂದಲ್ಲ, ನನಗೆ ಮಂಗಳೂರು ಭಾಷೆಯಲ್ಲೂ ಮಾತಾಡಲು ಬರುತ್ತೆ. ಉತ್ತರ ಕರ್ನಾಟಕ ಮಂದಿಯ ಖಡಕ್‌ ಭಾಷೆಯೂ ಬರುತ್ತದೆ’ ಎನ್ನುತ್ತಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ