ರೆಟ್ರೋ ಲುಕ್‌ನಲ್ಲಿ ಸತೀಶ್‌

ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ

Team Udayavani, Jun 19, 2019, 3:00 AM IST

ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ನಾಯಕ ನಟರ ಬರ್ತ್‌ಡೇ ಸಂದರ್ಭದಲ್ಲಿ ಅವರ ಹೊಸ ಚಿತ್ರಗಳು ಅನೌನ್ಸ್‌ ಆಗೋದು, ಮುಂಬರುವ ಚಿತ್ರಗಳ ಪೋಸ್ಟರ್‌, ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌, ಸಾಂಗ್ಸ್‌ ಬಿಡುಗಡೆಯಾಗೋದು ವಾಡಿಕೆ. ಈಗ ಯಾಕೆ ಈ ಪೀಠಿಕೆ ಅಂತೀರಾ? ಅದಕ್ಕೂ ಒಂದು ಕಾರಣವಿದೆ.

ಇದೇ ತಿಂಗಳು ನಟ ನೀನಾಸಂ ಸತೀಶ್‌ ಅವರ ಹುಟ್ಟುಹಬ್ಬವಿದೆ. ಇದೇ ವೇಳೆ ಸತೀಶ್‌ ಅಭಿನಯಿಸುತ್ತಿರುವ ಮುಂಬರುವ ಚಿತ್ರ “ಬ್ರಹ್ಮಚಾರಿ’ಯ ಟೀಸರ್‌ ಬಿಡುಗಡೆಯಾಗುತ್ತಿದೆ. ಅದೇ ದಿನ ಸತೀಶ್‌ ಅಭಿನಯಿಸುತ್ತಿರುವ ಹೊಸಚಿತ್ರವೊಂದು ಕೂಡ ಅದ್ಧೂರಿಯಾಗಿ ಸೆಟ್ಟೇರುತ್ತಿದೆ.

ಅಂದಹಾಗೆ, ಈ ಹಿಂದೆ “ಕಿನಾರೆ’ ಎನ್ನುವ ಸಿನಿಮಾ ಮಾಡಿದ್ದ ದೇವರಾಜ್‌, ಸತೀಶ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಇನ್ನು ಈ ಚಿತ್ರದ ಕಥೆಯನ್ನು ಕೇಳಿ ಮೆಚ್ಚಿಕೊಂಡಿರುವ ನೀನಾಸಂ ಸತೀಶ್‌ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ವಿಭಿನ್ನವಾದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಸತೀಶ್‌ ರೆಟ್ರೋಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು,

ಇದುವರೆಗೂ ಕಾಣಿಸಿಕೊಂಡಿರದಂತಹ ಗೆಟಪ್‌ನಲ್ಲಿ ಮಿಂಚಲಿದ್ದಾರೆ. ಅಲ್ಲದೆ ಬಿಗ್‌ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರದ ಟೈಟಲ್‌, ಇತರೆ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಚಿತ್ರ ಸೆಟ್ಟೇರಿದ ಮೇಲಷ್ಟೇ ಗೊತ್ತಾಗಬೇಕಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ