ಮಾಸ್ ಲುಕ್’ನಲ್ಲಿ “ಅಯೋಗ್ಯ’ನಾಗಿ ಸತೀಶ್‌ ನೀನಾಸಂ

Team Udayavani, Mar 19, 2018, 4:31 PM IST

“ಗುಂಪಲ್ಲಿದ್ರೂ ಗುರ್ತಿಡಿಯೋ ಹೈಟು, ಕಬ್ಬಿಣದ ಮೈಕಟ್ಟು, ಹುರಿ ಮೀಸೆ, ಹದ್ದಿನ ಕಣ್ಣು, ಸೊಗಡು ತುಂಬಿರೋ ರಗಡು ಬಾಡಿ, ಮೈ ನೇಮ್ ಈಸ್’…. ಎಂಬ ಡೈಲಾಗ್​ನಿಂದ ಮಾಸ್ ಎಂಟ್ರಿ ಕೊಟ್ಟಿರುವ ಸತೀಶ್‌ ನೀನಾಸಂ ಅಭಿನಯದ ಬಹುನಿರೀಕ್ಷಿತ “ಅಯೋಗ್ಯ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಕ್ಕತ್ ಮಾಸ್ ಲುಕ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಟೀಸರ್​ನಿಂದಾಗಿ ಸಿನಿಮಾದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಇನ್ನು ಈ ಚಿತ್ರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಪಾತ್ರದಲ್ಲಿ ಸತೀಶ್‌ ನೀನಾಸಂ ಕಾಣಿಸಿಕೊಂಡಿದ್ದು, ಅಯೋಗ್ಯನೊಬ್ಬ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಹೇಗೆ ಯೋಗ್ಯನಾಗಿ ಬದಲಾಗುತ್ತಾನೆ ಎನ್ನುವುದು ಕಥೆ. ರಚಿತಾ ರಾಮ್‌ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. ಸತೀಶ್​, ಸಿದ್ದೇಗೌಡನ ಪಾತ್ರದಲ್ಲಿ ನಟಿಸಿದರೆ, ಖಡಕ್ ವಿಲನ್ ಬಚ್ಚೇಗೌಡನಾಗಿ ರವಿಶಂಕರ್ ನಟಿಸಿದ್ದಾರೆ.

ರವಿಶಂಕರ್‌ರಂತಹ ದೈತ್ಯ ನಟನ ಎದುರು ನಟಿಸಬೇಕಾದರೆ, ಹೈಟ್‌ ಇಲ್ಲದಿದ್ದರೂ, ಫಿಟ್‌ ಆಗಿರಬೇಕು ಎನ್ನುವ ಕಾರಣಕ್ಕೆ, ಸತೀಶ್‌ ನೀನಾಸಂ ದೇಹವನ್ನು ಹುರಿಗೊಳಿಸಿರುವುದು ವಿಶೇಷ. ಚಿತ್ರಕ್ಕೆ ಯೋಗರಾಜ್‌ ಭಟ್‌ ಶಿಷ್ಯ ಮಹೇಶ್‌ ಕುಮಾರ್‌ ಕಥೆ ಬರೆದು ನಿರ್ದೇಶಿಸಿದರೆ, ಟಿ.ಆರ್‌. ಚಂದ್ರಶೇಖರ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಅಲ್ಲದೇ ಶರತ್ ಚಕ್ರವರ್ತಿ ಸಂಭಾಷಣೆ, ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದ್ದು, ಪ್ರೀತಮ್‌ ತೆಗ್ಗಿನಮನೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ, ಸರಿತ, ರವಿಶಂಕರ್‌, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲ, ಬುಲೆಟ್‌ ಪ್ರಕಾಶ್‌, ಕುರಿ ಪ್ರತಾಪ್‌ ಸೇರಿದಂತೆ ದೊಡ್ಡ ತಾರಾಬಳಗವಿದೆ.


ಈ ವಿಭಾಗದಿಂದ ಇನ್ನಷ್ಟು

  • ನಟ ಉಪೇಂದ್ರ ಅವರು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಆಗಿನ್ನೂ ಶೀರ್ಷಿಕೆ ಪಕ್ಕಾ...

  • ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಚಿತ್ರ ಯಾವಾಗ ತೆರೆಗೆ ಬರಬಹುದು ಎಂಬ ಲೆಕ್ಕಚಾರದಲ್ಲಿ ಸುದೀಪ್‌ ಅಭಿಮಾನಿಗಳಿದ್ದಾರೆ. ಮತ್ತೂಂದೆಡೆ ಅಭಿಮಾನಿಗಳ ಕುತೂಹಲವನ್ನು...

  • ಚಿರಂಜೀವಿ ಸರ್ಜಾ "ಖಾಕಿ' ಚಿತ್ರದ ಹೀರೋ ಎಂದು ಈ ಹಿಂದೆ ಇದೇ "ಬಾಲ್ಕನಿ'ಯಲ್ಲಿ ಹೇಳಲಾಗಿತ್ತು. ಅವರಿಗೆ ತಾನ್ಯಾ ಹೋಪ್‌ ನಾಯಕಿಯಾಗಿದ್ದಾರೆ ಅಂತಾನೂ ತಿಳಿಸಲಾಗಿತ್ತು....

  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜೂನ್‌ 29 ರಂದು ಬಹುತೇಕ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಿದ್ದು,...

  • "ಡಾಟರ್‌ ಆಫ್ ಪಾರ್ವತಮ್ಮ', ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ...

ಹೊಸ ಸೇರ್ಪಡೆ