Udayavni Special

ಟ್ಯಾಗ್‌ಲೈನ್‌ ಹೇಳಿ 50 ಸಾವಿರ ಗೆಲ್ಲಿ

ಕಾಣದಂತೆ ಮಾಯವಾದನು ಹೀಗೊಂದು ವಿಭಿನ್ನ ಕಂಟೆಸ್ಟ್‌

Team Udayavani, Jul 24, 2019, 3:02 AM IST

Kanadante-Mayavadanu

ಇತ್ತೀಚೆಗಷ್ಟೆ “ಕಾಣದಂತೆ ಮಾಯವಾದನು’ ಚಿತ್ರದ ಟ್ರೇಲರ್‌ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್‌ ವೀಕ್ಷಿಸಿರುವ ನಟ ಪುನೀತ್‌ ರಾಜಕುಮಾರ್‌ ಕೂಡ ಚಿತ್ರದ ಬಗ್ಗೆ ಸಾಕಷ್ಟು ಭರವಸೆಯ ಅಮಾತುಗಳನ್ನಾಡಿದ್ದಾರೆ. ಸದ್ಯ ಭರದಿಂದ ಚಿತ್ರದ ಪ್ರಮೋಶನ್‌ ನಡೆಸುತ್ತಿರುವ “ಕಾಣದಂತೆ ಮಾಯವಾದನು’ ಚಿತ್ರತಂಡ, ಈಗ ಸಿನಿಪ್ರಿಯರನ್ನು ಚಿತ್ರದತ್ತ ಆಕರ್ಷಿಸಲು ಹೊಸದೊಂದು ಕಂಟೆಸ್ಟ್‌ ಏರ್ಪಡಿಸಿದೆ.

ಅದೇನೆಂದರೆ, ಸದ್ಯ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ “ಕಾಣದಂತೆ ಮಾಯವಾದನು’ ಚಿತ್ರದ ಟ್ರೇಲರ್‌ ವೀಕ್ಷಿಸಿ, ಬಳಿಕ ಟ್ರೇಲರ್‌ ಕೆಳಗಿರುವ ಕಾಮೆಂಟ್‌ ಬಾಕ್ಸ್‌ನಲ್ಲಿ ಚಿತ್ರಕ್ಕೊಂದು ಟ್ಯಾಗ್‌ಲೈನ್‌ ಸೂಚಿಸಬೇಕು. ತಮ್ಮ ಚಿತ್ರಕ್ಕೆ ಸೂಕ್ತ ಟ್ಯಾಗ್‌ಲೈನನ್ನು ಊಹಿಸಿ, ಕಾಮೆಂಟ್ಸ್‌ ಬಾಕ್ಸ್‌ನಲ್ಲಿ ಹಾಕಿದರೆ, ಸರಿಯಾದ ಟ್ಯಾಗ್‌ಲೈನ್‌ಗೆ ಚಿತ್ರತಂಡ ಐವತ್ತು ಸಾವಿರ ರೂಪಾಯಿಗಳ ಬಹುಮಾನವನ್ನು ನೀಡಲಿದೆಯಂತೆ.

ಅಂದಹಾಗೆ, ಈ ಕಾಮೆಂಟ್‌ ಬಾಕ್ಸ್‌ನಲ್ಲಿ ಯಾರು ಬೇಕಾದರೂ, ಎಷ್ಟು ಬೇಕಾದರೂ, ಟ್ಯಾಗ್‌ ಲೈನ್‌ ಬರೆಯಬಹುದು. ಆದರೆ ಚಿತ್ರದ ಕಂಟೆಂಟ್‌ಗೆ ಹತ್ತಿರವಾದ ಹಾಗೂ ಸೆಲೆಕ್ಟ್ ಆದ ಟ್ಯಾಗ್‌ಲೈನ್‌ನ್ನು ಮೊದಲು ಸೂಚಿಸಿದವರಿಗೆ 50 ಸಾವಿರ ರೂಗಳನ್ನು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನೀಡಲಾಗುವುದು ಎಂದಿದೆ ಚಿತ್ರತಂಡ.

“ಬ್ಯಾಕ್‌ ಬೆಂಚರ್ಸ್‌ ಮೋಷನ್‌ ಪಿಕ್ಚರ್ಸ್‌’ ಲಾಂಛನದಲ್ಲಿ ಚಂದ್ರಶೇಖರ್‌ನಾಯ್ಡು, ಸೋಮ್‌ಸಿಂಗ್‌ ಹಾಗೂ ಪುಷ್ಪ ಸೋಮ್‌ಸಿಂಗ್‌ ಜಂಟಿಯಾಗಿ ನಿರ್ಮಿಸಿರುವ “ಕಾಣದಂತೆ ಮಾಯವಾದನು’ ಹಾರರ್‌ ಶೈಲಿಯ ಚಿತ್ರವಾಗಿದ್ದು, ರಾಜ್‌ ಪತ್ತಿಪಾಟಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಹಿಂದೆ “ಜಯಮ್ಮನ ಮಗ’ ಚಿತ್ರವನ್ನು ನಿರ್ದೇಶಿಸಿದ್ದ ವಿಕಾಸ್‌ ಈ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ.

ಸಿಂಧು ಲೋಕನಾಥ್‌ ಈ ಚಿತ್ರದ ನಾಯಕಿ. ಅಚ್ಯುತಕುಮಾರ್‌, ವಿನಯಾ ಪ್ರಸಾದ್‌, ಸುಚೇಂದ್ರ ಪ್ರಸಾದ್‌, ರಾಘವ್‌ ಉದಯ್‌, ಭಜರಂಗಿ ಲೋಕಿ, ಧರ್ಮಣ್ಣ, ಸೀತಾಕೋಟೆ, ಸನ್ನಿ ಮಹಿಪಾಲ್‌, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸದ್ಯ ಸೆನ್ಸಾರ್‌ ಮುಂದಿರುವ “ಕಾಣದಂತೆ ಮಾಯವಾದನು’ ಚಿತ್ರದ ಆಡಿಯೋ ಆಗಸ್ಟ್‌ ಮೊದಲವಾರ ಬಿಡುಗಡೆಯಾಗಲಿದ್ದು, ಆಗಸ್ಟ್‌ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Srilanka covid case

ಲಂಕಾದಲ್ಲಿ ಕೋವಿಡ್ ಹೆಚ್ಚಳ; ಭಾರತ ಪ್ರವಾಸ ಅನುಮಾನ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಆನೆಗೊಂದಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪ : ನಾಲ್ವರ ವಿರುದ್ಧ ಪ್ರಕರಣ

ಆನೆಗೊಂದಿ : ವೈದ್ಯರ ಕರ್ತವ್ಯಕ್ಕೆ ಅಡ್ಡಿ ಆರೋಪ ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

cats

ಸಲ್ಲು ಸಿನಿಮಾ ವಿರುದ್ಧ ಸಿಡಿದೆದ್ದ ಸುಶಾಂತ್ ಸಿಂಗ್ ಅಭಿಮಾನಿಗಳು

ಅಲೆಗಳ ಹೊಡೆತಕ್ಕೆ ಟಗ್‌ ಸಮುದ್ರಪಾಲು : ಓರ್ವ ಸಾವು, ಇಬ್ಬರು ಪಾರು, 5 ಮಂದಿ ನಾಪತ್ತೆ

ಅಲೆಗಳ ಹೊಡೆತಕ್ಕೆ ಟಗ್‌ ಸಮುದ್ರಪಾಲು : ಓರ್ವ ಸಾವು, ಇಬ್ಬರು ಪಾರು, 5 ಮಂದಿ ನಾಪತ್ತೆ

ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಧುಮುಕಿದ ಇಬ್ರಾಹಿಂ ರೈಸಿ

ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಧುಮುಕಿದ ಇಬ್ರಾಹಿಂ ರೈಸಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cats

ಕೋವಿಡ್ ಸಂಕಷ್ಟ : ಅನ್ನದಾತರ ನೆರವಿಗೆ ಧಾವಿಸಿದ ನಟ ಉಪೇಂದ್ರ

ZasCac

ಬೆಂಗಳೂರಿಗರಿಗೆ ಸೋನು ಅಭಯ

Berkeley Mass Teaser

ಬರ್ಕ್ಲಿ ಮಾಸ್‌ ಟೀಸರ್‌

The only hope is light

ಭರವಸೆಯೊಂದೇ ಬೆಳಕು

Parul Yadav Positive Talk

ಪಾರುಲ್‌ ಯಾದವ್‌ ಪಾಸಿಟಿವ್‌ ಟಾಕ್‌

MUST WATCH

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

udayavani youtube

ತೌಖ್ತೆ ಚಂಡಮಾರುತ ಎಫೆಕ್ಟ್ ; ಕಡಲ್ಕೊರೆತದ ಅಬ್ಬರಕ್ಕೆ ಸಮುದ್ರ ಪಾಲಾದ ಮನೆ!

udayavani youtube

ಕೋವಿಡ್ ಸೋಂಕಿತರೊಂದಿಗೆ ಡ್ಯಾನ್ಸ್ ಮಾಡಿ ರಂಜಿಸಿದ ಜೆಡಿಎಸ್ ಶಾಸಕ ಅನ್ನದಾನಿ

ಹೊಸ ಸೇರ್ಪಡೆ

Srilanka covid case

ಲಂಕಾದಲ್ಲಿ ಕೋವಿಡ್ ಹೆಚ್ಚಳ; ಭಾರತ ಪ್ರವಾಸ ಅನುಮಾನ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಆನೆಗೊಂದಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪ : ನಾಲ್ವರ ವಿರುದ್ಧ ಪ್ರಕರಣ

ಆನೆಗೊಂದಿ : ವೈದ್ಯರ ಕರ್ತವ್ಯಕ್ಕೆ ಅಡ್ಡಿ ಆರೋಪ ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

cats

ಸಲ್ಲು ಸಿನಿಮಾ ವಿರುದ್ಧ ಸಿಡಿದೆದ್ದ ಸುಶಾಂತ್ ಸಿಂಗ್ ಅಭಿಮಾನಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.