ಮಲ್ಲಿಗೆ ಮುಡಿದು ಬಂದ ಸೀತಮ್ಮ!

Team Udayavani, Jun 21, 2018, 4:56 PM IST

seethamma-bandalu139-sam.jpg

ತೆಲುಗಿನಲ್ಲಿ ಕೆಲವು ವರ್ಷಗಳ ಹಿಂದೆ “ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು’ ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ಈಗ ಅದೇ ತರಹದ ಹೆಸರಿರುವ ಚಿತ್ರವೊಂದು ಕನ್ನಡದಲ್ಲಿ ಬರುತ್ತಿದೆ. ಅದೇ  “ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’. ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರವಿದು. ಚಿತ್ರದ ಶೀರ್ಷಿಕೆ ಕೇಳಿದಾಗಲೇ, ಇದು ಕಲಾತ್ಮಕ ಜಾತಿಯ ಸಿನಿಮಾ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಿರ್ದೇಶಕ ಅಶೋಕ್‌ ಕೆ. ಕಡಬ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇನ್ನು, ಇಂತಹ ಚಿತ್ರಗಳಿಗೆ ಹಣ ಹಾಕುವ ನಿರ್ಮಾಪಕರ ಸಂಖ್ಯೆ ತೀರಾ ವಿರಳ. 

ಹನುಮಂತರರಾಜು ಬಿ. ಅವರು ನಿರ್ದೇಶಕರ ಕಥೆ ಮೆಚ್ಚಿಕೊಂಡು ಚಿತ್ರಕ್ಕೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಚಿತ್ರ ಪೂರ್ಣಗೊಂಡಿದೆ. ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ತಮ್ಮ ತಂಡದೊಂದಿಗೆ ಆಗಮಿಸಿದ್ದರು ನಿರ್ದೇಶಕರು. ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕ ಪಿ.ಶೇಷಾದ್ರಿ, ಅನಿರುದ್ಧ, ಭಾವನಾ, ಲಹರಿ ಆಡಿಯೋ ಸಂಸ್ಥೆಯ ಮುಖ್ಯಸ್ಥ ವೇಲು ಇತರರು ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು. ಚಿತ್ರತಂಡ ಈ ವೇಳೆ ಸಾ.ರಾ.ಗೋವಿಂದು, ಅನಿರುದ್ಧ, ಪಿ. ಶೇಷಾದ್ರಿ ಅವರನ್ನು ಸನ್ಮಾನಿಸಿ, ಗೌರವಿಸಿತು.

ಆಡಿಯೋ ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “ಕಮರ್ಷಿಯಲ್‌ ಮತ್ತು ಕಲಾತ್ಮಕ ಚಿತ್ರಗಳೆಂಬ ಭೇದಭಾವ ಇರಬಾರದು. ಜನರು ಇಷ್ಟಪಟ್ಟರೆ ಎಂಥಾ ಚಿತ್ರವೂ ಗೆದ್ದು ಬಿಡುತ್ತೆ. ಈ ಚಿತ್ರ ಕಲಾತ್ಮಕವಾದರೂ, ಶೀರ್ಷಿಕೆ ಗಮನ ಸೆಳೆಯುತ್ತೆ. 

ಈಗಂತೂ ಯಾವ ಚಿತ್ರಗಳೂ ಚಿತ್ರಮಂದಿರದಲ್ಲಿ ಹೆಚ್ಚು ಕಾಲ ನಿಲ್ಲುತ್ತಿಲ್ಲ. ವರ್ಷಕ್ಕೆ ಅತೀ ಹೆಚ್ಚು ಚಿತ್ರಗಳ ಬಿಡುಗಡೆಯೇ ಇದಕ್ಕೆ ಕಾರಣ. ತಾಂತ್ರಿಕತೆ ಬೆಳೆದಿದೆ. ಚಿತ್ರರಂಗವೂ ಬೆಳೆಯುತ್ತಿದೆ. ಆದರೆ, ಚಿತ್ರಗಳ ಯಶಸ್ಸು ಮಾತ್ರ ಇಲ್ಲ. ಬಿಡುಗಡೆ ವೇಳೆ ಯಾರೋ ಬಳಿ ಹೋಗಿ ಒದ್ದಾಡುವುದಕ್ಕಿಂತ, ಮಂಡಳಿ ಸಂಪರ್ಕಿಸಿದರೆ, ಸಲಹೆಗಳು ಸಿಗುತ್ತವೆ. 

ಹೊಸಬರು ಎಚ್ಚರಿಕೆಯಿಂದ ಸಿನಿಮಾ ಮಾಡಬೇಕು’ ಎಂಬುದು ಸಾ.ರಾ.ಗೋವಿಂದು ಅವರ ಕಿವಿಮಾತು. ನಿರ್ದೇಶಕ ಅಶೋಕ್‌ ಕೆ ಕಡಬ, “ಚಿತ್ರದ ಹೀರೋ ಇಲ್ಲಿ  ಪತ್ರಕರ್ತ. ಒಂದು ಸುದ್ದಿ ಬೆನ್ನತ್ತಿ ಒಂದು ಊರಿಗೆ ಹೋಗುತ್ತಾನೆ. ಗೆಳಯನ ಹೆಂಡತಿ ವಿಧವೆ ಅನ್ನೋದು ಗೊತ್ತಾಗುತ್ತೆ. ಕೊನೆಗೆ ಅವನು ಹುಡುಕಿ ಹೊರಟ ಸುದ್ದಿ ಸಿಗುತ್ತಾ, ತನ್ನ ಗೆಳೆಯನ ಹೆಂಡತಿಗೆ ಹೊಸ ಬಾಳು ಕಲ್ಪಿಸಿಕೊಡಲು ಮುಂದಾಗುತ್ತಾನಾ ಎಂಬುದು ಕಥೆ.  

ನಂದೀಶ್‌ ಚಿತ್ರದ ಹೀರೋ. ಅವರಿಗೆ ಮೊದಲ ಚಿತ್ರ. ಅವರು ವೃತ್ತಿಯಲ್ಲಿ ವಕೀಲರು. ಇನ್ನು, ನಾಯಕಿ ಸಂಹಿತಾಗೆ ಇದು ಎರಡನೇ ಚಿತ್ರ. ಕಾರ್ತಿಕ್‌ ವೆಂಕಟೇಶ್‌ ಸಂಗೀತ ನೀಡಿದ್ದಾರೆ. ಮೂರು ಹಾಡುಗಳ ಪೈಕಿ ಒಂದು ಹಾಡನ್ನು ಗಾಯಕ ಸಿ.ಅಶ್ವತ್ಥ್ ಅವರಿಗೆ ಅರ್ಪಿಸಲಾಗಿದೆ’ ಎಂದು ವಿವರ ನೀಡಿದರು.

ಟಾಪ್ ನ್ಯೂಸ್

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

ಏಳು ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌

ಕತ್ರೀನಾ – ವಿಕ್ಕಿ ಕೌಶಲ್‌ ವಿವಾಹ :7 ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್‌ ಬಾರಾತ್‌

ರಾಮನಾಥಪುರಂನಿಂದ ಧನುಷ್ಕೋಡಿಗೆ ಹೊಸ ಪಂಬನ್‌ ಬ್ರಿಡ್ಜ್?

ರಾಮನಾಥಪುರಂನಿಂದ ಧನುಷ್ಕೋಡಿಗೆ ಹೊಸ ಪಂಬನ್‌ ಬ್ರಿಡ್ಜ್?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

varada

ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ ಟೀಸರ್‌ ರಿಲೀಸ್‌

1-fddsf

ನಟಿ ಜಾಕ್ವೆಲಿನ್ ಗೆ 10 ಕೋಟಿ ರೂ ಮೌಲ್ಯದ ಉಡುಗೊರೆ ನೀಡಿದ ಸುಕೇಶ್: ವರದಿ

8shivram

ಬಹಳ ಜನರಿಗೆ ಗೊತ್ತಿಲ್ಲ, ಕಲಾವಿದರ ಸಂಘಕ್ಕೆ ಮೂಲ ಪುರುಷ ಶಿವರಾಂ: ಅನಂತ್‍ನಾಗ್

Untitled-2

ಅಜಾತಶತ್ರುವಿನ  ಅಪರೂಪದ ಸಿನೆಯಾನ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ಪಿಎಫ್ ಖಾತೆಯಿಂದ ಎಲ್‌ಐಸಿ ಪ್ರೀಮಿಯಂ ಪಾವತಿಸಿ! ಹೊಸ ಸೌಲಭ್ಯ ಪಡೆಯಲು ಬೇಕು ಫಾರ್ಮ್ ನಂ.14

ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

ದೇಶೀಯ ಡ್ರೋನ್‌ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್‌ ಶಾ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.