ಸೆಂಟಿಮೆಂಟ್‌ ಸೂರಿ

Team Udayavani, Nov 21, 2017, 10:45 AM IST

ಮಬ್ಬು ಬೆಳಕು, ವೆಲ್ಡಿಂಗ್‌ ಕಿಡಿ, ಮೈ ಜುಮ್ಮೆನ್ನಿಸೋ ಸನ್ನಿವೇಶಗಳು … ಸೂರಿ ಸಿನಿಮಾ ನೋಡಿದಾಗ ಈ ತರಹದ ರಗಡ್‌ ಅಂಶಗಳು ಸಿಕ್ಕೇ ಸಿಗುತ್ತವೆ. ಅದು ಅವರ ಬ್ರಾಂಡ್‌ ಎಂದರೂ ತಪ್ಪಲ್ಲ. ಈ ತರಹ ಸಿನಿಮಾ ಮಾಡೋ ಸೂರಿನೂ ರಗಡ್‌ ಆಗಿರುತ್ತಾರಾ ಎಂದು ನೀವು ಊಹಿಸಿಕೊಳ್ಳುವಂತಿಲ್ಲ. ಏಕೆಂದರೆ ಸೂರಿ ತುಂಬಾ ಸೆಂಟಿಮೆಂಟ್‌ ವ್ಯಕ್ತಿ.

ಅವರ ಸೆಂಟಿಮೆಂಟ್‌ಗೆ  ವೇದಿಕೆಯಾಗಿದ್ದು “ಕನಕ’ ಆಡಿಯೋ ರಿಲೀಸ್‌ ವೇದಿಕೆ. ದುನಿಯಾ ವಿಜಯ್‌ ನಾಯಕರಾಗಿರುವ “ಕನಕ’ ಚಿತ್ರದ ಆಡಿಯೋ ಬಿಡುಗಡೆಗೆ ವಿಜಯ್‌ ಅವರ ಮೂವರು ಮಕ್ಕಳು ಕೂಡಾ ಬಂದಿದ್ದರು. ಆಡಿಯೋ ರಿಲೀಸ್‌ ಮಾಡಿದ ಸೂರಿ, ವಿಜಿಯ ಮೂವರು ಮಕ್ಕಳನ್ನು ವೇದಿಕೆಗೆ ಕರೆದರು.

ಅವರನ್ನು ನೋಡುತ್ತಲೇ ಒಂದು ಕ್ಷಣ ಭಾವುಕರಾದರು. ಅವರಿಗೆ “ದುನಿಯಾ’ ಸಿನಿಮಾದ ದಿನಗಳು ಕಣ್ಣೆದುರಿಗೆ ಬಂದಂತಿತ್ತು. “ನಿಮಗೆ ನನ್ನ ನೆನಪಿದ್ಯಾ’ ಎಂದು ಆ ಮಕ್ಕಳಲ್ಲಿ ಕೇಳುತ್ತಲೇ ಮಾತಿಗಿಳಿದ ಸೂರಿ, “ದುನಿಯಾ ಸಿನಿಮಾ ಮಾಡುವಾಗ ಈ ಮಕ್ಕಳು ತುಂಬಾ ಚಿಕ್ಕವರು. “ದುನಿಯಾ’ ನಂತರ ವಿಜಿಯ ಮಗ ಹುಟ್ಟಿದ. ಆ ಸಿನಿಮಾದ ದಿನಗಳು ಒಂಥರಾ ಚೆನ್ನಾಗಿದ್ದವು.

ಸಿನಿಮಾ ಮಾಡಲು ಕಷ್ಟಪಟ್ಟ ಕ್ಷಣಗಳು ಇವತ್ತಿಗೂ ಕಣ್ಣ ಮುಂದೆ ಹಾಗೇ ಇದೆ. ಆ ಸಿನಿಮಾಕ್ಕಾಗಿ ವಿಜಿಯವರು 15 ಲಕ್ಷ ಹೊಂದಿಸಿದ್ದು, ಚಿತ್ರೀಕರಣ ಅನುಭವ ಎಲ್ಲವೂ ನೆನಪಾಗುತ್ತಿದೆ’ ಎಂದರು. ಅಷ್ಟು ಹೇಳುವಷ್ಟರಲ್ಲಿ ಸೂರಿಯ ಕಣ್ಣುಗಳು ತುಂಬಿದ್ದವು. ಅಷ್ಟಕ್ಕೂ ಸೂರಿ ಭಾವುಕರಾಗಿದ್ದು ಯಾಕೆ ಎಂದರೆ ಫ್ಲ್ಯಾಶ್‌ಬ್ಯಾಕ್‌.

“ನನಗೆ ಈ ತರಹದ ವೇದಿಕೆಗಳಲ್ಲಿ ನಿಂತು ಮಾತನಾಡಲು ಬರೋದಿಲ್ಲ ಮತ್ತು ನನಗೆ ಅದು ಇಷ್ಟನೂ ಇಲ್ಲ. ನಾನು ನೆನಪುಗಳಿಗೆ ತುಂಬಾ ಮಹತ್ವ ಕೊಡುತ್ತೇನೆ. ನಾವು ಎಲ್ಲಿದ್ದೆವು ಮತ್ತು ಹೇಗೆ ಬಂದೆವು ಎಂಬುದನ್ನು ಮರೆಯಬಾರದು. ನಾನು ಅದನ್ನು ಪದೇ ಪದೇ ನೆನಪು ಮಾಡಿಕೊಳ್ಳುತ್ತಿರುತ್ತೇನೆ’ ಎಂದರು ಸೂರಿ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ