“ಶಬ್ಧ’ ಮಾಡಲು ಹೊರಟವರ ಕಥೆ

Team Udayavani, Dec 16, 2019, 7:03 AM IST

ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳನ್ನು ಒಪ್ಪಿಕೊಳ್ಳುವ ನಾಯಕ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಹಳಬರು ಮತ್ತು ಹೊಸಬರು ಎನ್ನದೆ ಎಲ್ಲ ನಿರ್ದೇಶಕರ ಚಿತ್ರಗಳು, ಪಾತ್ರಗಳಿಗೆ ಸೈ ಎನಿಸಿಕೊಳ್ಳುವ ಸೋನು ಗೌಡ ಈಗ ಮತ್ತೊಂದು ಹೊಸ ಪ್ರಯೋಗದ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಸೋನು ಗೌಡ “ಶಬ್ಧ’ ಎನ್ನುವ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಸದ್ಯ ಈ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ.

ಗಡ್ಡ ವಿಜಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕ್ರೈಂ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಈ ಚಿತ್ರದಲ್ಲಿ ಸೋನು ಗೌಡ ಪತ್ತೇಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಮಾತನಾಡುವ ಸೋನು, “ಸುಮಾರು ಐದು ವರ್ಷಗಳ ನಂತರ ಮತ್ತೂಮ್ಮೆ ನಿರ್ದೇಶಕ ಗಡ್ಡ ವಿಜಿ ಅವರ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇಲ್ಲಿಯವರೆಗೂ ಕಾಣಿಸಿಕೊಂಡಿರದ ವಿಭಿನ್ನ ಗೆಟಪ್‌ ಈ ಚಿತ್ರದಲ್ಲಿ ನನಗೆ ಸಿಕ್ಕಿದೆ. ಕಥೆಯಲ್ಲಿ ಬರುವ ನಿಗೂಢ ಸಂಗತಿಗಳನ್ನು ಭೇದಿಸಿಕೊಂಡು ಹೋಗುವ ತನಿಖಾಧಿಕಾರಿ ಪಾತ್ರ ನನ್ನದು.

ಒಂಥರಾ ಪತ್ತೇದಾರಿ ಥರದ ಪಾತ್ರ ಎನ್ನಬಹುದು. ಪೊಲೀಸ್‌ ಹಾಗೆ ಇದ್ರೂ ಯೂನಿಫಾರ್ಮ್ ಹಾಕಿಕೊಂಡಿರುವುದಿಲ್ಲ. ನಿರ್ದೇಶಕ ಗಡ್ಡ ವಿಜಿ ಈ ಪಾತ್ರವನ್ನು ಬರೆಯುವಾಗಲೇ, ನನ್ನನ್ನು ಗಮನದಲ್ಲಿ ಇಟ್ಟುಕೊಂಡೇ ಬರೆದಿದ್ದಾರಂತೆ. ಇನ್ನು ಕಥೆಯನ್ನು ಕೇಳಿದಾಗ ಕೂಡ ಇಷ್ಟವಾಯ್ತು. ಹಾಗಾಗಿ ಈ ಪಾತ್ರ ಮಾಡಲು ಒಪ್ಪಿಕೊಂಡೆ. ಇಡೀ ಸಿನಿಮಾ ಪ್ರಮುಖವಾಗಿ ನಾಲ್ಕು ಪಾತ್ರಗಳ ಸುತ್ತ ನಡೆಯುತ್ತದೆ. ಮಾಮೂಲಿ ಸಿನಿಮಾಕ್ಕಿಂತ ತುಂಬ ವಿಭಿನ್ನವಾಗಿರಲಿದೆ’ ಎಂದು ವಿವರಣೆ ಕೊಡುತ್ತಾರೆ. ಇನ್ನು “ಶಬ್ಧ’ ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್‌. ಮಹೇಂದರ್‌ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಉಳಿದಂತೆ ಅತುಲ್‌ ಕುಲಕರ್ಣಿ, ನಟರಂಗ ರಾಜೇಶ್‌, ಸುಬ್ಬಣ್ಣ ಸೇರಿದಂತೆ ಅನೇಕ ಸೇರಿದಂತೆ ಅನೇಕ ಹೊಸ ಮತ್ತು ಹಳೆಯ ಕಲಾವಿದರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, “ಶಬ್ಧ’ ಚಿತ್ರವನ್ನು ಕನ್ನಡದ ಜೊತೆಗೆ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಹಾಗೂ ಮರಾಠಿಗೆ ಡಬ್‌ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಚಿತ್ರಕ್ಕೆ ಪಿ.ಕೆ.ಹೆಚ್‌ ದಾಸ್‌ ಛಾಯಾಗ್ರಹಣ, ವೀರ್‌ ಸಮರ್ಥ್ ಸಂಗೀತವಿದೆ. ವಿಜಯ್‌ ಕುಮಾರ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ