ಶಾನ್ವಿ ಲಕ್ಷ್ಮೀ ಅವತಾರ

ಅವನೇ ಶ್ರೀಮನ್ನಾರಾಯಣ ಹೊಸ ಪೋಸ್ಟರ್‌ ಬಂತು

Team Udayavani, Dec 9, 2019, 6:03 AM IST

ನಟಿ ಶಾನ್ವಿ ಶ್ರೀವಾತ್ಸವ್‌ ಸಖತ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಮುಖ್ಯವಾಗಿ ಎರಡು ಕಾರಣ. ಮೊದಲನೇಯದಾಗಿ ಅವರ ನಟನೆಯ “ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆಗೆ ರೆಡಿಯಾಗಿರುವುದು ಒಂದಾದರೆ, ತನ್ನ ಹುಟ್ಟುಹಬ್ಬಕ್ಕೆ ಚಿತ್ರತಂಡವೊಂದು ಕಲರ್‌ಫ‌ುಲ್‌ ಪೋಸ್ಟರ್‌ ರಿಲೀಸ್‌ ಮಾಡಿರುವುದು. ಹೌದು, ನಟಿ ಶಾನ್ವಿಗೆ ಭಾನುವಾರ ಹುಟ್ಟುಹಬ್ಬದ ಸಂಭ್ರಮ.

ಈ ಸಂಭ್ರಮವನ್ನು ಹೆಚ್ಚಿಸಿದ್ದು “ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆ ಮಾಡಿದ ಪೋಸ್ಟರ್‌. ಶಾನ್ವಿ, ಲಕ್ಷ್ಮೀ ಅವತಾರದಲ್ಲಿರುವ ಜೊತೆಗೆ ನಾಯಕ ನಟ ರಕ್ಷಿತ್‌ ಶೆಟ್ಟಿ ಇರುವ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿ ಶಾನ್ವಿಗೆ ಶುಭ ಕೋರಿದೆ. ಈ ಚಿತ್ರದಲ್ಲಿ ಶಾನ್ವಿ, ಲಕ್ಷ್ಮೀ ಎಂಬ ಪಾತ್ರ ಮಾಡಿದ್ದಾರೆ. ಶಾನ್ವಿ ಕೂಡಾ ಈ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ಕಳೆದ ಎರಡು ವರ್ಷಗಳಿಂದ ಚಿತ್ರತಂಡ ಜೊತೆ ಸತತವಾಗಿ ತೊಡಗಿಕೊಂಡಿದ್ದಾರೆ.

ಅಂದಹಾಗೆ, ಪುಷ್ಕರ್‌ ನಿರ್ಮಾಣದ “ಅವನೇ ಶ್ರೀಮನ್ನಾರಾಯಣ’ ಚಿತ್ರ ಐದು ಭಾಷೆಗಳ ಮೂಲಕ ಪ್ಯಾನ್‌ ಇಂಡಿಯಾ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಶಾನ್ವಿ ಕೂಡಾ ಐದು ಭಾಷೆಗಳಲ್ಲಿ ಲಾಂಚ್‌ ಆಗುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಟ್ರೇಲರ್‌ ನೋಡಿದವರಿಂದ ಚಿತ್ರದ ಮೇಕಿಂಗ್‌ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಚಿತ್ರ ಡಿಸೆಂಬರ್‌ 27 ರಂದು ತೆರೆಕಾಣುತ್ತಿದೆ. ಶೀಘ್ರದಲ್ಲೇ ಚಿತ್ರದ ಹಾಡೊಂದು ಬಿಡುಗಡೆಯಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಟ ನಿಖೀಲ್‌ ಕುಮಾರ್‌ ಅಭಿನಯದ "ಜಾಗ್ವಾರ್‌' ಚಿತ್ರದಲ್ಲಿ ಬೋಲ್ಡ್‌ ಆಗಿ ಅಭಿನಯಿಸಿ ಸಿನಿ ಪ್ರಿಯರ ಗಮನ ಸೆಳೆದಿದ್ದ ನಾಯಕ ನಟಿ ದೀಪ್ತಿ ಸತಿ, ಈಗ ಮತ್ತೂಂದು ಚಿತ್ರದ...

  • ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಮಿಂಚಿರುವ ಭಾಮಾ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಕೇರಳದ ಮೂಲದ ಭಾಮಾ...

  • ಕನ್ನಡದಲ್ಲಿ ನೈಜ ಘಟನೆ ಕುರಿತ ಅನೇಕ ಚಿತ್ರಗಳು ಬಂದು ಹೋಗಿವೆ. ಆ ಸಾಲಿಗೆ ಈಗ "ನಾನು ಮತ್ತು ಗುಂಡ' ಚಿತ್ರವೂ ಸೇರಿದೆ. ಹೌದು, ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ,...

  • "ಬೆಂಕಿಯಲ್ಲಿ ಅರಳಿದ ಹೂವು...' ಬಹುಶಃ ಈ ಶೀರ್ಷಿಕೆ ಓದಿದಾಗ ನೆನಪಾಗೋದೇ ನಟಿ ಸುಹಾಸಿನಿ ಹಾಗು ಕಮಲಹಾಸನ್‌ ಕಣ್ಣ ಮುಂದೆ ಹಾದು ಹೋಗುತ್ತಾರೆ. ಕೆ.ಬಾಲಚಂದರ್‌ ನಿರ್ದೇಶನದ...

  • "ಪ್ರತಿಯೊಬ್ಬರೂ ಪ್ರೀತಿಸಿ. ಪ್ರೀತಿಸಿಲ್ಲ ಅಂದರೆ, ಪ್ರೀತಿಸಲು ಪ್ರಯತ್ನಿಸಿ. ಪ್ರೀತಿ ಮಾಡಿಲ್ಲ ಅಂದರೆ, ಜೀವನದಲ್ಲಿ ಏನನ್ನೋ ಕಳೆದುಕೊಳ್ಳುತ್ತೀರಾ. ಎಲ್ಲದ್ದಕ್ಕೂ...

ಹೊಸ ಸೇರ್ಪಡೆ