ಶಿವಾಜಿ ಸುರತ್ಕಲ್‌ 2 ಟ್ರೇಲರ್‌ ಮಾ.31ಕ್ಕೆ ರಿಲೀಸ್


Team Udayavani, Mar 29, 2023, 2:12 PM IST

ಶಿವಾಜಿ ಸುರತ್ಕಲ್‌ 2 ಟ್ರೇಲರ್‌ ಮಾ.31ಕ್ಕೆ ರಿಲೀಸ್

ರಮೇಶ್‌ ಅರವಿಂದ್‌ ನಟನೆಯ “ಶಿವಾಜಿ ಸುರತ್ಕಲ್‌-2′ ಚಿತ್ರ ಚಿತ್ರೀಕರಣ ಪೂರೈಸಿದ್ದು, ಏಪ್ರಿಲ್‌ 14ರಂದು ಬಿಡುಗಡೆಯಾಗಲಿದೆ ಎಂಬ ವಿಚಾರ ನಿಮಗೆ ಗೊತ್ತೇ ಇದೆ.

ಈಗ ಮೊದಲ ಹಂತವಾಗಿ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಲು ಮುಂದಾಗಿದ್ದು, ಮಾರ್ಚ್‌ 31ರಂದು ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಆಕಾಶ್‌ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್‌ ಮೂಲಕ ಅನೂಪ್‌ ಗೌಡ ಮತು ರೇಖಾ ಕೆ ಎನ್‌ ನಿರ್ಮಾಣ ಮಾಡಿದ್ದಾರೆ.

ಚಿತ್ರದ ಕೊನೆಯ ಒಂದು ಹಾಡಿನ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಚಿತ್ರತಂಡ ಮುಗಿಸಿದೆ. ಈ ಹಾಡಿನಲ್ಲಿ ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌, ರಾಧಿಕಾ ನಾರಾಯಣ್‌, ಮೇಘನಾ ಗಾಂವ್ಕರ್‌, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.

ಭಿನ್ನ ಶೈಲಿಯ ಸಿನಿಮಾ “ಶಿವಾಜಿ ಸುರತ್ಕಲ್‌-2′ ಒಂದು ಪತ್ತೆದಾರಿ ಸಿನಿಮಾ. ಹಾಗಂತ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಸ್ಕ್ರಿಪ್ಟ್ ನಲ್ಲಿ ಸಾಕಷ್ಟು ಹೊಸ ಅಂಶಗಳನ್ನು ಸೇರಿಸಿದ್ದಾರಂತೆ. ಈ ಬಗ್ಗೆ ಮಾತನಾಡುವ ನಿರ್ದೇಶಕರು, “ಶಿವಾಜಿ ಸುರತ್ಕಲ್‌ 2 ರೆಗ್ಯುಲರ್‌ ಸ್ಕ್ರಿಪ್ಟ್ ಅಲ್ಲ. ಇಲ್ಲಿ ಮನುಷ್ಯನ ಮನಸ್ಸಿನೊಳಗೆ ಏನಾಗುತ್ತದೆ, ಆತನ ಆಲೋಚನೆಗಳು … ಹೀಗೆ ಹಲವು ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನಾವು ಮೊದಲ ಭಾಗ ಬಿಡುಗಡೆಯಾದಾಗ ಥಿಯೇಟರ್‌ ಮಾಡಿದ್ದೆವು. ಆಗ ಅನೇಕರು, ಚಿತ್ರದ ಕೊನೆಯಲ್ಲಿ ರಮೇಶ್‌ ಹಾಗೂ ರಾಧಿಕಾ ಅವರ ಫೋಟೋ ತೋರಿಸಿದ್ದು ಯಾಕೆ ಹಾಗೂ ಸುರತ್ಕಲ್‌ಗ‌ೂ ಚಿತ್ರಕ್ಕೂ ಸಂಬಂಧವೇನು ಎಂದು ಕೇಳಿದ್ದರು. ಅವೆಲ್ಲದಕ್ಕೂ ಉತ್ತರ ಈ ಚಿತ್ರದಲ್ಲಿದೆ. ಇಲ್ಲಿ ಪತ್ತೆದಾರಿಯಾಗಿ ಕಥೆ ಮುಂದೆ ಸಾಗುವುದಿಲ್ಲ. ಶಿವಾಜಿಯ ಎಮೋಶನಲ್‌ ಜರ್ನಿ ಕೂಡಾ ಇಲ್ಲಿ ಸಾಗಿಬರಲಿದೆ’ ಎನ್ನುತ್ತಾರೆ

ಟಾಪ್ ನ್ಯೂಸ್

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?

police siren

ಹೊಟೇಲ್‌ ಮಾಲಕನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸಿದ ಪ್ರಕರಣ: ಯುವತಿ ಸಹಿತ ನಾಲ್ವರು ವಶಕ್ಕೆ

bill gates

ಹಳೆ ಪ್ರೇಮ ಪ್ರಕರಣದಿಂದ Bill Gates ಗೆ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

agrasena kannada movie

ಟೀಸರ್ ನಲ್ಲಿ ‘ಅಗ್ರಸೇನಾ’

melody drama kannada movie

ಪ್ರೇಕ್ಷಕರ ಜತೆ ‘ಮೆಲೋಡಿ ಡ್ರಾಮಾ’ದ ಹೊಸ ಕಥೆ

naveen shankar’s kshetrapathi

‘ಕ್ಷೇತ್ರಪತಿ’ಯಾದ ನವೀನ್‌ ಶಂಕರ್‌

pinki elli kannada movie

ಥಿಯೇಟರ್‌ನತ್ತ ಪಿಂಕಿ ಎಲ್ಲಿ?: ಜೂ.2ರಂದು ಚಿತ್ರ ತೆರಗೆ

radha

ಜೂ.02ಕ್ಕೆ ‘ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌’

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?