ರಮೇಶ್‌ ಅರವಿಂದ್‌ ಜನ್ಮದಿನಕ್ಕೆ “ಶಿವಾಜಿ ಸುರತ್ಕಲ್‌’ ಟೀಸರ್‌

ಸೆ.10 ರಂದು 101 ನೇ ಚಿತ್ರದ ಸ್ಪೆಷಲ್‌ ಗಿಫ್ಟ್

Team Udayavani, Sep 9, 2019, 3:03 AM IST

ರಮೇಶ್‌ ಅರವಿಂದ್‌ ನಟರಾಗಿ, ನಿರ್ದೇಶಕರಾಗಿ, ನಿರೂಪಕರಾಗಿ ಸೈ ಎನಿಸಿಕೊಂಡವರು. ನೋಡ ನೋಡುತ್ತಲೇ ಅವರು ಸೆಂಚುರಿ ಬಾರಿಸಿದ್ದಾಗಿದೆ. ಅವರೀಗ “ಶಿವಾಜಿ’ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಹೌದು, “ಶಿವಾಜಿ ಸುರತ್ಕಲ್‌’ ರಮೇಶ್‌ ಅರವಿಂದ್‌ ಅಭಿನಯದ 101 ನೇ ಚಿತ್ರ ಎಂಬುದು ವಿಶೇಷ. ಇನ್ನೊಂದು ವಿಶೇಷವೆಂದರೆ, ಸೆಪ್ಟೆಂಬರ್‌ 10 ರಂದು (ನಾಳೆ) ಅವರ ಹುಟ್ಟುಹಬ್ಬ. ಅಂದು ಚಿತ್ರತಂಡ ಅವರ ಬರ್ತ್‌ಡೇ ಅಂಗವಾಗಿ “ಶಿವಾಜಿ ಸುರತ್ಕಲ್‌’ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ನಿರ್ಧರಿಸಿದೆ.

“ಶಿವಾಜಿ ಸುರತ್ಕಲ್‌’ ಶೀರ್ಷಿಕೆ ಜೊತೆಗೆ “ದ ಕೇಸ್‌ ಆಫ್ ರಣಗಿರಿ ರಹಸ್ಯ’ ಎಂಬ ಬರಹವಿದೆ. ಅಲ್ಲಿಗೆ ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಅನ್ನೋದು ಪಕ್ಕಾ. ಇನ್ನು, ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಗಿದಿದ್ದು, ಡಬ್ಬಿಂಗ್‌ ಕೆಲಸ ಕೊನೆಯ ಹಂತದಲ್ಲಿದೆ. ರಾಧಿಕಾ ಚೇತನ್‌ ಹಾಗು ಆರೋಹಿ ನಾರಾಯಣ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಆಕಾಶ್‌ ಶ್ರೀವತ್ಸ ನಿರ್ದೇಶಿಸಿದ್ದಾರೆ. ರೇಖಾ ಕೆ.ಎನ್‌ ಮತ್ತು ಅನೂಪ್‌ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತವಿದೆ.

ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ. ಅಭಿಜಿತ್‌, ಆಕಾಶ್‌ ಶ್ರೀವತ್ಸ ಚಿತ್ರಕಥೆ ಬರೆದರೆ, ಜಯಂತ್‌ ಕಾಯ್ಕಿಣಿಯವರ ಸಾಹಿತ್ಯವಿದೆ. ರಮೇಶ್‌ ಅರವಿಂದ್‌ ನಿರ್ದೇಶನದ “ಬಟರ್‌ ಫ್ಲೈ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನಲ್ಲೆ ಅವರು “100′ ಎಂಬ ಚಿತ್ರವನ್ನೂ ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಈಗ “ಶಿವಾಜಿ ಸುರತ್ಕಲ್‌’ ಚಿತ್ರದ ಜಪದಲ್ಲಿದ್ದಾರೆ. ಸದ್ಯಕ್ಕೆ ರಮೇಶ್‌ ಅರವಿಂದ್‌ ಹೊಸ ಹೊಸ ಪಾತ್ರ, ಕಥೆಗಳ ಮೂಲಕ ಹೊಸತನ್ನ ಕೊಡಲು ಮುಂದಾಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ