ಬರ್ತ್‌ಡೇಗೆ ಶಿವಣ್ಣ ಗೈರು

ಚಿಕಿತ್ಸೆಗಾಗಿ ಲಂಡನ್‌ ಪಯಣ

Team Udayavani, Jun 12, 2019, 3:03 AM IST

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಸ್ಟಾರ್‌ ನಟರ ಬರ್ತ್‌ಡೇ ಅಂದ್ರೆ ಅವರ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ತಮ್ಮ ನೆಚ್ಚಿನ ನಟನ ಬರ್ತ್‌ಡೇಯನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳು ಕೂಡ ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಯಾವುದೇ ಸ್ಟಾರ್ ಇರಲಿ ತಮ್ಮ ಬರ್ತ್‌ಡೇ ದಿನವನ್ನು ಅಭಿಮಾನಿಗಳ ಜೊತೆ ಆಚರಿಸುವುದು, ಆ ದಿನವನ್ನು ಅಭಿಮಾನಿಗಳಿಗಾಗಿ ಮೀಸಲಿಡುವುದು ಚಿತ್ರರಂಗದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.

ಇನ್ನು ಸುಮಾರು ಮೂರು ದಶಕಗಳಿಂದ ನಟ ಶಿವರಾಜಕುಮಾರ್‌ ಕೂಡ ತಮ್ಮ ಬರ್ತ್‌ಡೇಯನ್ನು ಅಭಿಮಾನಿಗಳ ಸಮ್ಮುಖದಲ್ಲೇ ಆಚರಿಸಿಕೊಂಡು ಈ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಅದ್ಧೂರಿ ಅಲ್ಲದಿದ್ದರೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದೂ ಇದೆ. ಆದರೆ ಈ ಬಾರಿ ಮಾತ್ರ ಈ ಸಂಪ್ರದಾಯ ಸ್ವಲ್ಪ ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೌದು, ಇದೇ ಜುಲೈ 12ರಂದು ಶಿವರಾಜಕುಮಾರ್‌ ಅವರ ಹುಟ್ಟುಹಬ್ಬವಿದ್ದು, ಜುಲೈ ಮೊದಲ ವಾರದಲ್ಲೇ ಶಿವಣ್ಣ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಹಾಗಾಗಿ ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಶಿವಣ್ಣ ಕರ್ನಾಟಕದಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ. ಶಿವರಾಜ್‌ ಕುಮಾರ್‌ ಭುಜದ ನೋವಿನಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಬೇಕಾಗಿದೆ.

ಜುಲೈ 6 ರಂದು ಲಂಡನ್‌ಗೆ ಪ್ರಯಾಣ ಬೆಳೆಸಲಿರುವ ಶಿವರಾಜ ಕುಮಾರ್‌ ಸುಮಾರು 20 ದಿನಗಳ ಕಾಲ ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ. ಜುಲೈ ಕೊನೆವಾರ ಚಿಕಿತ್ಸೆ ಮುಗಿಸಿಕೊಂಡು ಶಿವಣ್ಣ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ. ಹೀಗಾಗಿ ಈ ಬಾರಿ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಶಿವಣ್ಣ ಸಿಗುತ್ತಿಲ್ಲ .

ಇನ್ನು ಈ ವಿಷಯ ಸಹಜವಾಗಿಯೇ ಶಿವರಾಜ್‌ ಕುಮಾರ್‌ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದು, ಕೊನೆ ಕ್ಷಣದಲ್ಲಿ ಶಿವಣ್ಣ ಅವರ ಕಾರ್ಯಕ್ರಮದಲ್ಲಿ ಏನಾದರೂ ಬದಲಾವಣೆಗಳು ಆಗಬಹುದಾ, ಎಂದಿನಂತೆ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

ಈ ಬಾರಿಯ ಹುಟ್ಟುಹಬ್ಬಕ್ಕೆ ನಾನಿರೋದಿಲ್ಲ. ಚಿಕಿತ್ಸೆಗಾಗಿ ಲಂಡನ್‌ಗೆ ಹೋಗುತ್ತಿದ್ದೇನೆ. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಂತರವೇ ಹೋಗಬೇಕೆಂದುಕೊಂಡಿದ್ದೆ. ಆದರೆ, ನನಗೆ ಅಲ್ಲಿನ ವೈದ್ಯರು ಸಿಗೋದು ಜುಲೈ 10ಕ್ಕೆ. ಆ ದಿನ ನಾನು ಅಲ್ಲಿರಲೇಬೇಕು. ಹಾಗಾಗಿ, ಜುಲೈ 6 ರಂದು ಹೋಗಿ, ಜುಲೈ 21 ರಂದು ವಾಪಾಸ್‌ ಬರುತ್ತಿದ್ದೇನೆ.
-ಶಿವರಾಜ್‌ಕುಮಾರ್‌, ನಟ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ