ಅಂದುಕೊಂಡಂತೆ ಆದರೆ…

ಹೊಸಬರ ಚಿತ್ರಕ್ಕೆ ಶಿವಣ್ಣ ಸಾಥ್‌

Team Udayavani, Dec 17, 2019, 6:34 AM IST

Andukondante

ದಿನ ಕಳೆದಂತೆ ಸ್ಯಾಂಡಲ್‌ವುಡ್‌ಗೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ “ಅಂದುಕೊಂಡಂತೆ’ ಸಿನಿಮಾ ತಂಡವೂ ಒಂದು. ಹೌದು, ಈ ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಇದು ಮೊದಲ ಚಿತ್ರ. ಹಾಗಂತ, ಅವರಿಗೆ ಅನುಭವ ಇಲ್ಲವೆಂದಲ್ಲ, ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವದ ಮೇಲೆ “ಅಂದುಕೊಂಡಂತೆ’ ಚಿತ್ರ ಮಾಡಿದ್ದಾರೆ. ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಜನವರಿ ಅಂತ್ಯದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರು ಮಾಡಿಕೊಂಡಿದೆ.

ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಶಿವರಾಜಕುಮಾರ್‌ ಅವರು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಹೊಸಬರ ಆಲೋಚನೆಗಳು ಹೊಸದಾಗಿರಲಿ ಎಂದು ಕಿವಿಮಾತು ಹೇಳಿದ್ದಾರೆ. ಈ ಚಿತ್ರದ ಮೂಲಕ ಶ್ರೇಯಸ್‌ ನಿರ್ದೇಶಕರಾಗುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಈ ಹಿಂದೆ ಶ್ರೇಯಸ್‌, ಬಿ.ರಾಮಮೂರ್ತಿ ಹಾಗು ಶರಣ್‌ ಕಬ್ಬೂರು ಬಳಿ ಕೆಲಸ ಮಾಡಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ. ಇನ್ನು, ಶುಕ್ರ ಫಿಲಂಸ್‌ ಬ್ಯಾನರ್‌ನಡಿ ರಮೇಶ್‌ ಕೊಯಿರ ಅವರೊಂದಿಗೆ ಶ್ರೇಯಸ್‌ ಕೂಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಶ್ರೇಯಸ್‌, “ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರ. ಜನರ ಪ್ರತಿ ದಿನದ ಲೈಫ್ ಹೇಗೆಲ್ಲಾ ಇರುತ್ತೆ, ಹೇಗೆಲ್ಲಾ ನಡೆದು ಹೋಗುತ್ತೆ ಎನ್ನುವುದರ ಸುತ್ತ ಕಥೆ ಸಾಗುತ್ತದೆ. ಟ್ರಾಫಿಕ್‌ ಮಧ್ಯೆ ಏನೋ ಯೋಚಿಸುತ್ತಾ, ಅಲ್ಲೇನೋ ಅಂದುಕೊಂಡಂತೆಯೇ ಆಗುತ್ತೆ ಎಂಬ ಭರವಸೆಯಲ್ಲಿ ಹೋದರೆ, ಅಲ್ಲಿ ಅಂದುಕೊಂಡಂತೆ ನಡೆಯೋದಿಲ್ಲ.

ಇಂತಹ ಅನೇಕ ಘಟನೆಗಳು ಚಿತ್ರದ ಹೈಲೈಟ್‌. ಪ್ರೇಕ್ಷಕರು ಕೂಡ ಕ್ಲೈಮ್ಯಾಕ್ಸ್‌ನಲ್ಲಿ ಹೀಗೆ ಆಗುತ್ತೆ ಅಂದುಕೊಂಡರೆ, ಅಲ್ಲಿ ಆಗುವುದೇ ಬೇರೆ. ಒಟ್ಟಾರೆ, ಈಗಿನ ವಾಸ್ತವ ಅಂಶಗಳು ಚಿತ್ರದಲ್ಲಿವೆ’ ಎಂಬುದು ಶ್ರೇಯಸ್‌ ಮಾತು. ಚಿತ್ರದಲ್ಲಿ ಪ್ರಮೋದ್‌ ಬೋಪಣ್ಣ ಹೀರೋ ಆಗಿ ಕಾಣಿಸಿಕೊಂಡರೆ, ರಿಷ್ವಿಭಟ್‌ ನಾಯಕಿಯಾಗಿದ್ದಾರೆ. ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ವಿಶ್ರುತ್‌ರಾಜ್‌ ನಟಿಸಿದ್ದಾರೆ. ಉಳಿದಂತೆ, ಲೋಕೇಶ್‌, ಲೋಕೇಶ್‌ಗೌಡ, ಕಿರಣ್‌, ವಿನಯ್‌ರಾಜ್‌, ಎಂ.ಡಿ.ಕೌಶಿಕ್‌, “ಉಗ್ರಂ’ ರೆಡ್ಡಿ, ಗಿರೀಶ್‌ ಜತ್ತಿ, ರಾಜು ಹೆಮ್ಗೆಪುರ, ಡಾನ್‌ಬಾಬು ಇತರರು ನಟಿಸಿದ್ದಾರೆ.

ಅನಂತ ಕಾಮತ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್‌, ಚೇತನ್‌ ಅನಿಕೇತ್‌ ಸಾಹಿತ್ಯವಿದೆ. ರಮೇಶ್‌ ಕೊಯಿರ ಛಾಯಾಗ್ರಹಣವಿದೆ. ಕಿರಣ್‌ ಕುಮಾರ್‌ ಸಂಕಲನವಿದೆ. ನಾಗ್‌ ಕೀರ್ತಿ ಅವರು ಚಿತ್ರದಲ್ಲಿ ಮೂರು ಫೈಟ್ಸ್‌ ಸಂಯೋಜಿಸಿದ್ದಾರೆ. ಬೆಂಗಳೂರು, ಕನಕಪುರ, ಮಾಗಡಿ ಸುತ್ತಮುತ್ತ ಚಿತ್ರೀಕರಣಗೊಂಡಿರುವ “ಅಂದುಕೊಂಡಂತೆ’ ಚಿತ್ರದ ಹಾಡುಗಳನ್ನು ಡಿಸೆಂಬರ್‌ ಅಂತ್ಯದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

ಟಾಪ್ ನ್ಯೂಸ್

ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

Mangaluru: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

Mangaluru: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

wrestlers

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

MARSH RANSHAW

AUSTRALIA ಫೈನಲ್‌ ತಂಡ: ಮಾರ್ಷ್‌, ರೆನ್‌ಶಾ ಹೊರಕ್ಕೆ

SCHOOL TEA-STUDENTS

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ವೃಥಾ ವಿವಾದ ಬೇಡ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

darbar

ಜೂ.09ಕ್ಕೆ ವಿ.ಮನೋಹರ್‌ ನಿರ್ದೇಶನದ ‘ದರ್ಬಾರ್‌’ ತೆರೆಗೆ

ಅಭಿಮಾನಿಗಳ ಸರಣೆಯಲ್ಲಿ ಅಂಬಿ ಬರ್ತ್‌ಡೇ

ಅಭಿಮಾನಿಗಳ ಸ್ಮರಣೆಯಲ್ಲಿ ಅಂಬಿ ಬರ್ತ್‌ಡೇ

Abhi-ramachandra

ಸೆನ್ಸಾರ್ ಪಾಸಾದ ‘ಅಭಿರಾಮಚಂದ್ರ’

hatya kannada movie

ನೈಜ ಘಟನೆಗಳ ಸುತ್ತ ‘ಹತ್ಯ’

ಈಗ ಹೊಸ ರೂಪದಲ್ಲಿ ‘ರಾಜನ್‌ ನಾಗೇಂದ್ರ’ ಸಂಗೀತ

ಈಗ ಹೊಸ ರೂಪದಲ್ಲಿ ‘ರಾಜನ್‌ ನಾಗೇಂದ್ರ’ ಸಂಗೀತ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

Mangaluru: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

Mangaluru: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

wrestlers

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ

MARSH RANSHAW

AUSTRALIA ಫೈನಲ್‌ ತಂಡ: ಮಾರ್ಷ್‌, ರೆನ್‌ಶಾ ಹೊರಕ್ಕೆ