“ಇನ್ಸ್‌ಪೆಕ್ಟರ್ ವಿಕ್ರಂ’ಗೆ ಶಿವಣ್ಣ ಸಾಥ್
ಹಾಡು ಬಿಡುಗಡೆ ಮಾಡಿ ಶುಭಹಾರೈಕೆ
Team Udayavani, Mar 9, 2020, 7:02 AM IST
ಪ್ರಜ್ವಲ್ ದೇವರಾಜ್ ಅವರು ಮೊದಲ ಬಾರಿಗೆ ಖಾಕಿ ತೊಟ್ಟು ಖಡಕ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗುತ್ತಿದ್ದಾರೆ ಎಂಬ ವಿಷಯ ಗೊತ್ತೇ ಇದೆ. ಪಕ್ಕಾ ಆ್ಯಕ್ಷನ್ ಚಿತ್ರ ಎನಿಸಿಕೊಂಡಿರುವ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ಇದೀಗ ಮತ್ತೂಂದು ಸುದ್ದಿಗೂ ಕಾರಣವಾಗಿದೆ. ಈಗಾಗಲೇ ತನ್ನ ಮೊದಲ ಟೀಸರ್ ಬಿಡುಗಡೆ ಮಾಡಿ ಒಂದಷ್ಟು ಆ್ಯಕ್ಷನ್ ಪ್ರಿಯರ ಗಮನ ಸೆಳೆದಿದ್ದ ಚಿತ್ರದ ವಿಡಿಯೋ ಹಾಡೊಂದನ್ನು ಶಿವರಾಜಕುಮಾರ್ ಅವರು ಭಾನುವಾರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಅಷ್ಟಕ್ಕೂ “ಇನ್ಸ್‌ಪೆಕ್ಟರ್ ವಿಕ್ರಂ’ ಈ ಹಿಂದೆ ಸೂಪರ್ ಹಿಟ್ ಆಗಿದ್ದ ಶಿವರಾಜಕುಮಾರ್ ಅಭಿನಯದ ಚಿತ್ರ. ಹಾಗಾಗಿ, ಅದೇ ಹೆಸರಲ್ಲಿ ಬರುತ್ತಿರುವ ಈ ಚಿತ್ರದ ಹಾಡನ್ನು ಶಿವರಾಜಕುಮಾರ್ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎಂಬ ಉದ್ದೇಶದಿಂದ ಚಿತ್ರತಂಡ ಹಾಡು ಬಿಡುಗಡೆ ಮಾಡಿಸಿದೆ. ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ “ಹೇ ಗಾಯ್ಸ್ ಕೂಲಿಂಗು ಗ್ಲಾಸು ಹಾಕ್ಕೊಂಡು ಕೂಲಾಗಿರಿ, ಬ್ಯಾಡ್ ಬಾಯ್ಸ್ ಸೈಲಂಟ್ ಮೋಡ್‌ಗೆ ಹಾಕ್ಕಳಿ ಗೂಂಡಾಗಿರಿ…’ ಎಂಬ ಹಾಡನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.
ಬಿಡುಗಡೆಯಾದ ಗಂಟೆಗಳಲ್ಲಿ ಸಾವಿರಾರು ವೀವ್ಸ್ ಪಡೆದ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಸಂಗೀತ ನೀಡಿರುವ ಅನೂಪ್ ಸೀಳಿನ್ ಈ ಹಾಡಿಗೆ ಧ್ವನಿಯಾಗಿದ್ದು, ಪ್ರಮೋದ್ ಮರವಂತೆ ಹಾಡು ಬರೆದಿದ್ದಾರೆ. ಇನ್ನು, ಪೊಲೀಸ್ ಡ್ರೆಸ್‌ನಲ್ಲೇ ಸ್ಟೆಪ್ ಹಾಕಿರುವ ಪ್ರಜ್ವಲ್‌ಗೆ ಮುರಳಿ ಸ್ಟೆಪ್ಸ್ ಹಾಕಿಸಿದ್ದಾರೆ. ಬ್ಯಾಗ್‌ಪೈಪರ್ ಸೋಡಾ ಮತ್ತು ವಿಖ್ಯಾತ್ ಚಿತ್ರ ಸಂಸ್ಥೆಯ ಜಂಟಿ ನಿರ್ಮಾಣದಲ್ಲಿ ಮೂಡಿಬಂದಿರುವ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರಕ್ಕೆ ನಿರ್ದೇಶಕ ನರಸಿಂಹ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ಭಾವನಾ ಮೆನನ್ ಜೋಡಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಹೆಬ್ರಿ ತಾ| ಆಡಳಿತ ಕಟ್ಟಡ ಲೋಕಾರ್ಪಣೆಗೆ ಸಿದ್ಧ
ವಿಜಯಪುರ: ಆಕಸ್ಮಿಕ ಬೆಂಕಿ ಅವಘಡ; 30 ಲಕ್ಷ ಮೌಲ್ಯದ ವಸ್ತುಗಳಿಗೆ ಹಾನಿ
ಕುಷ್ಟಗಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಕಾಂಗ್ರೆಸ್ ನಲ್ಲಿ ಇರ್ತಾರ? ಜೆಡಿಎಸ್ ಸೇರ್ತಾರ!
ಉಸಿರಾಟದ ಸಮಸ್ಯೆ: ಕೇದಾರನಾಥ ನಾಲ್ವರು ಯಾತ್ರಾರ್ಥಿಗಳ ಸಾವು, ಮೃತರ ಸಂಖ್ಯೆ 38ಕ್ಕೆ ಏರಿಕೆ
ಮಳಲಿ ಮಸೀದಿಯ ಸರ್ವೇ ನಡೆಯಬೇಕು, ಜನರು ಸತ್ಯ ತಿಳಿಯಲಿ: ಡಾ ಸುರೇಂದ್ರ ಕುಮಾರ್ ಜೈನ್