ಶಿವಣ್ಣ ಸಿನಿಯಾನಕ್ಕೆ 35 ವರ್ಷ: ಅಭಿಮಾನಿಗಳ ಸಂಭ್ರಮ
Team Udayavani, Feb 20, 2021, 8:37 AM IST
ನಟ ಶಿವರಾಜಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು, ಇದೇ ಫೆ. 19ಕ್ಕೆ 35 ವರ್ಷವಾಯಿತು. ಶಿವಣ್ಣ ಚಿತ್ರರಂಗದಲ್ಲಿ ಮೂರುವರೆ ದಶಕ ಪೂರೈಸಿರುವ ಸಂಭ್ರಮದಲ್ಲಿ ಶಿವಣ್ಣ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಕಾಮನ್ ಡಿಪಿ ಯನ್ನು ವಿನ್ಯಾಸಗೊಳಿಸಿ ಬಿಡುಗಡೆಗೊಳಿಸಿದ್ದಾರೆ.
ಜೊತೆಗೆ ಶಿವಣ್ಣ ಅಭಿಮಾನಿಗಳುಕೇಕ್ ಕತ್ತರಿಸಿ 35 ವರ್ಷದ ಪಯಣವನ್ನು ಸಂಭ್ರಮಿಸಿದ್ದಾರೆ. “ಟಗರು’ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರು ಶಿವಣ್ಣ ಅವರ ಕಾಮನ್ ಡಿಪಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆಗೊಳಿಸಿದ್ದು, ಶಿವಣ್ಣ ಅಭಿಮಾನಿಗಳು ಈ ಸಿಡಿಪಿಯನ್ನು ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಹೇಗಿದೆ ಸಿನಿಮಾ: ಪೊಗರು ಶಿವ ಅಡ್ಡದಲ್ಲಿ ಎಲ್ಲವೂ ಹೈವೋಲ್ಟೇಜ್!
ಅಂದಹಾಗೆ, ಶಿವರಾಜಕುಮಾರ್ ಅಭಿನಯದ ಚೊಚ್ಚಲ ಚಿತ್ರ “ಆನಂದ್’ 1986ರ ಫೆ. 19ರಂದು ಬಿಡುಗಡೆಯಾಗಿತ್ತು. ಇನ್ನು ಶಿವಣ್ಣ ಅವರ 35 ವರ್ಷದ ಸಿನಿಜರ್ನಿಯ ಸಂಭ್ರಮ ಕ್ಕಾಗಿ ಅಭಿಮಾನಿಗಳು ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.