ತಮಿಳಿಗೆ ಟಗರು ರೀಮೇಕ್
Team Udayavani, Oct 25, 2018, 3:19 PM IST
ಸೂರಿ ನಿರ್ದೇಶನದ ಶಿವರಾಜ ಕುಮಾರ್ ಅಭಿನಯದ “ಟಗರು’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿರೋದು ನಿಮಗೆ ಗೊತ್ತಿರುವ ವಿಚಾರ. ಈ ಮೂಲಕ ಇಡೀ ಚಿತ್ರತಂಡ ಖುಷಿಯಾಗಿರುವಾಗಲೇ ಮತ್ತೂಂದು ಖುಷಿಯಲ್ಲಿದೆ ಚಿತ್ರತಂಡ. ಅದು ಚಿತ್ರದ ತಮಿಳು ರೀಮೇಕ್
ಮಾರಾಟವಾಗಿರೋದು. ಹೌದು, “ಟಗರು’ ಚಿತ್ರದ ತಮಿಳು ರೀಮೇಕ್ ತಮಿಳಿಗೆ ಮಾರಾಟವಾಗಿದ್ದು, ತಮಿಳು ನಿರ್ದೇಶಕ ಮುತ್ತಯ್ಯ ಚಿತ್ರದ ರೀಮೇಕ್ ಹಕ್ಕು ಪಡೆದಿದ್ದಾರೆ. ಮುತ್ತಯ್ಯ ಅವರು ಕಾರ್ತಿ, ವಿಶಾಲ್ ಹಾಗೂ ಶಶಿಕುಮಾರ್ ನಾಯಕರಾಗಿರುವ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಈಗ “ಟಗರು’ ಚಿತ್ರವನ್ನು ರೀಮೇಕ್ ಮಾಡಲು ಮುಂದೆ ಬಂದಿದ್ದಾರೆ. ಎಲ್ಲಾ ಓಕೆ, “ಟಗರು’ ರೀಮೇಕ್ನಲ್ಲಿ ಯಾರು ನಟಿಸುತ್ತಾರೆ, ಯಾವಾಗ ಆರಂಭವಾಗುತ್ತದೆ ಎಂಬೆಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಅಂದಹಾಗೆ, “ಟಗರು’ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದು, ಶಿವರಾಜಕುಮಾರ್, ಭಾವನಾ, ಮಾನ್ವಿತಾ, ಧನಂಜಯ್ ಸೇರಿದಂತೆ ಅನೇಕರು ನಟಿಸಿದ್ದಾರೆ.