ಅಂತಿಮ ಹಂತ ತಲುಪಿದ “ಕೆಜಿಎಫ್-2′ ಶೂಟಿಂಗ್‌

ಫೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಿತ್ರತಂಡ ಅಣಿ

Team Udayavani, Mar 3, 2020, 7:03 AM IST

yash-prasha

ಸದ್ಯ ಈ ವರ್ಷದ ಬಹುನಿರೀಕ್ಷಿತ ಚಿತ್ರ ಯಶ್‌ ಅಭಿನಯದ “ಕೆಜಿಎಫ್-2′ ಚಿತ್ರೀಕರಣ ಹೈದರಾಬಾದ್‌ನಲ್ಲಿ ಭರದಿಂದ ನಡೆಯುತ್ತಿದೆ. ಇಲ್ಲಿಯವರೆಗೆ ಚಿತ್ರದ ಚಿತ್ರೀಕರಣ, ಕಲಾವಿದರು ಮತ್ತಿತರ ಮಾಹಿತಿಯನ್ನು ಇನ್‌ಸ್ಟಾಗ್ರಾಮ್, ಟ್ವಿಟ್ಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದ “ಕೆಜಿಎಫ್-2′ ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌, ಈಗ ಚಿತ್ರದ ಬಗ್ಗೆ ಮತ್ತೂಂದು ಸುದ್ದಿ ಹೊರ ಹಾಕಿದ್ದಾರೆ.

ಪ್ರಶಾಂತ್‌ ನೀಲ್‌ ಹೇಳಿರುವಂತೆ, ಇನ್ಮುಂದೆ “ಕೆಜಿಎಫ್-2′ ಚಿತ್ರದ ಬಗ್ಗೆ ಅಭಿಮಾನಿಗಳು ಕೇಳುವುದನ್ನು ಮಿಸ್‌ ಮಾಡಿಕೊಳ್ಳುತ್ತಾರಂತೆ. ಅಂದಹಾಗೆ, ಪ್ರಶಾಂತ್‌ ನೀಲ್‌ ಸೋಶಿಯಲ್‌ ಮೀಡಿಯಾದಲ್ಲಿ ಇಂಥದ್ದೊಂದು ಮಾತು ಹೇಳಲು ಕಾರಣ,”ಕೆಜಿಎಫ್-2′ ಚಿತ್ರೀಕರಣ ಕೊನೆ ಹಂತಕ್ಕೆ ತಲುಪಿರುವುದು. ಈ ಬಗ್ಗೆ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ ಮಾಡಿರುವ ಪ್ರಶಾಂತ್‌ ನೀಲ್‌, “ಕೊನೆಯ ಹಂತದ ಚಿತ್ರೀಕರಣದಲ್ಲಿದ್ದೀವಿ.

ಹಾಗಾಗಿ ಇನ್ಮುಂದೆ ಅಪ್‌ ಡೇಟ್‌ ಕೇಳುವುದನ್ನು ಮಿಸ್‌ ಮಾಡಿಕೊಳ್ಳುತ್ತೀರಾ’ ಎಂದು ಹೇಳಿಕೊಂಡಿದ್ದಾರೆ. ಹೌದು, ಮೂಲಗಳ ಪ್ರಕಾರ ಈಗಾಗಲೇ ಬಾಲಿವುಡ್‌ ನಟಿ ರವೀನಾ ಟಂಡನ್‌ ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಯಶ್‌ ಮತ್ತು ಸಂಜಯ್‌ ದತ್‌ ಭಾಗದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಪೂರ್ಣವಾಗಲಿದ್ದು, ಬಳಿಕ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ಸಿಗಲಿದೆ.

ಒಟ್ಟಾರೆ ಇಲ್ಲಿಯವರೆಗೆ, “ಕೆಜಿಎಫ್-2′ ಚಿತ್ರದ ಶೂಟಿಂಗ್‌ ಎಲ್ಲಿದೆ ಬಂತು? ಚಿತ್ರಕ್ಕೆ ಹೊಸದಾಗಿ ಯಾರು ಎಂಟ್ರಿಯಾಗಿದ್ದಾರೆ? ಹೊಸ ಬದಲಾವಣೆಗಳೇನಾಗಿದೆ? ಹೀಗೆ ಚಿತ್ರದ ಬಗ್ಗೆ ಮಾಹಿತಿಗಳಿಗಾಗಿ ಸೋಶಿಯಲ್‌ ಮೀಡಿಯಾಗಳಲ್ಲಿ ಹತ್ತಾರು ಪ್ರಶ್ನೆಗಳನ್ನು ಚಿತ್ರತಂಡದ ಮುಂದಿಟ್ಟು, ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ, ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಪಕರು ಉತ್ತರಿಸುವ ಮೂಲಕ ಚಿತ್ರದ ಬಗ್ಗೆ ಕಾತುರವನ್ನು ಹೆಚ್ಚಿಸುತ್ತಿದ್ದರು.

ಈಗ ಅದೆಲ್ಲದಕ್ಕೂ ಬಹುತೇಕ ಫ‌ುಲ್‌ಸ್ಟಾಪ್‌ ಬೀಳುವ ಸಮಯ ಬಂದಿದ್ದು, ಇನ್ನೇನಿದ್ದರೂ, “ಕೆಜಿಎಫ್-2′ ಟೀಸರ್‌, ಟ್ರೇಲರ್‌, ಆಡಿಯೋ ಬಿಡುಗಡೆ ಯಾವಾಗ? ಸಿನಿಮಾ ಯಾವಾಗ ರಿಲೀಸ್‌ ಆಗುತ್ತೆ? ಎಂಬ ಸಿನಿಪ್ರಿಯರ ಪ್ರಶ್ನೆಗಳಿಗಷ್ಟೇ ಚಿತ್ರತಂಡ ಉತ್ತರಿಸೋದು ಬಾಕಿ.

ಟಾಪ್ ನ್ಯೂಸ್

ದೆಹಲಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ಉಸಿರುಗಟ್ಟಿ ನಾಲ್ವರು ಸಾವು

ದೆಹಲಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ಉಸಿರುಗಟ್ಟಿ ನಾಲ್ವರು ಸಾವು

6train

ಬಿರುಕು ಬಿಟ್ಟ ರೈಲ್ವೆ ಹಳಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ!

c-c-patil

ಡಿಸೆಂಬರ್ ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭ: ಸಚಿವ ಸಿ.ಸಿ.ಪಾಟೀಲ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

2019ರಲ್ಲಿ ದಾಳಿಯಾಗಿದ್ದ ಪುಲ್ವಾಮಾ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ಕಳೆದ ಅಮಿತ್ ಶಾ

2019ರಲ್ಲಿ ದಾಳಿಯಾಗಿದ್ದ ಪುಲ್ವಾಮಾ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ಕಳೆದ ಅಮಿತ್ ಶಾ

ಶಶಿಕಲಾ ಜೊಲ್ಲೆ

ಚುನಾವಣೆಯಲ್ಲಿ ಸಚಿವರಿಗೆ ಎರಡು ಜಿ.ಪಂ. ಉಸ್ತುವಾರಿ ಸಮರ್ಥ ನಿಭಾವಣೆ: ಶಶಿಕಲಾ ಜೊಲ್ಲೆ

aditi prabhudeva

ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aditi prabhudeva

ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

love mocktail 2

ಲವ್‌ ಮಾಕ್ಟೇಲ್‌-2ಗೆ “ಯು’ ಪ್ರಮಾಣ ಪತ್ರ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ದೆಹಲಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ಉಸಿರುಗಟ್ಟಿ ನಾಲ್ವರು ಸಾವು

ದೆಹಲಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ಉಸಿರುಗಟ್ಟಿ ನಾಲ್ವರು ಸಾವು

6train

ಬಿರುಕು ಬಿಟ್ಟ ರೈಲ್ವೆ ಹಳಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ!

5protest

ಕಬ್ಬಿನ ದರ ನಿಗದಿಗೆ ರೈತರ ಪಟ್ಟು; ಧರಣಿ ಮುಂದುವರಿಕೆ

c-c-patil

ಡಿಸೆಂಬರ್ ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭ: ಸಚಿವ ಸಿ.ಸಿ.ಪಾಟೀಲ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.