ಪಿಚ್ಚೈಕಾರನ್‌ ಬಿಟ್ಟು ಮೀಸೆ ತಿರುಗಿಸಿದ ಶ್ರೇಯಸ್‌

Team Udayavani, Mar 12, 2018, 11:18 AM IST

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ “ಪಡ್ಡೆಹುಲಿ’ ಎಂಬ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಪ್ರೋಮೋ ಶೂಟ್‌ ಕೂಡಾ ಆಗಿದೆ. ಚಿತ್ರಕ್ಕೆ ಇಂದು ಮುಹೂರ್ತ ನಡೆಯಲಿದೆ. ನಿರ್ಮಾಪಕ ಮಂಜು ಅವರು ತಮಿಳಿನ “ಪಿಚ್ಚೈಕಾರನ್‌’ ಸಿನಿಮಾದ ರೀಮೇಕ್‌ನಲ್ಲಿ ನಟಿಸುವಂತೆ ಮಗನಿಗೆ ಹೇಳಿದ್ದರಂತೆ. ಮೊದಲು ಒಪ್ಪಿಕೊಂಡಿದ್ದ ಶ್ರೇಯಸ್‌, ನಂತರ ಆ ಸಿನಿಮಾ ಮಾಡಲ್ಲ ಎಂದರಂತೆ. 

“ಅನೇಕರು ಶ್ರೇಯಸ್‌ನ ಹೀರೋ ಮಾಡಿ, ಸಿನಿಮಾ ಮಾಡುತ್ತೀನಿ ಎಂದು ಬಂದರು. ಮೊದಲು ಶ್ರೇಯಸ್‌ಗೆ ಸಿನಿಮಾದ ಆಸಕ್ತಿ ಬರಬೇಕೆಂದು ಸುಮ್ಮನಿದ್ದೆ. ಈಗ ಅವನಿಗೆ ಆಸಕ್ತಿ ಬಂದು, ಸಾಕಷ್ಟು ತಯಾರಿ ಮಾಡಿಕೊಂಡಿದ್ದಾನೆ. “ಪಿಚ್ಚೈಕಾರನ್‌’ ರೀಮೇಕ್‌ನಲ್ಲಿ ನಟಿಸಲು ಹೇಳಿದ್ದೆ. ಆ ನಂತರ ಬೇಡ ಅಂದ. ನಾನು ವಿಷ್ಣುವರ್ಧನ್‌ ಅವರನ್ನು ಹೇಗೆ ಫಾಲೋ ಮಾಡುತ್ತಿದ್ದೇನೋ ಅದೇ ರೀತಿ ಶ್ರೇಯಸ್‌, ಸುದೀಪ್‌ ಅವರನ್ನು ಫಾಲೋ ಮಾಡುತ್ತಿದ್ದಾನೆ.

ಸುದೀಪ್‌ ಅವರು ಮೊದಲ ಸಿನಿಮಾ ರೀಮೇಕ್‌ ಬೇಡ ಎಂದರಂತೆ. ಆಗ ಗೊತ್ತಾಯಿತು, ಸ್ವಿಚ್‌ ಅಲ್ಲಿದೆ ಎಂದು. ಒಬ್ಬ ಹೀರೋ ಆಗಿ ಆತ ಯಾವ ನಿರ್ಮಾಪಕನಿಗೂ ತೊಂದರೆ ಕೊಡಬಾರದು, ನಿರ್ಮಾಪಕರ ಕಣ್ಣಲ್ಲಿ ಕಣ್ಣೀರು ಹಾಕಿಸಬಾರದು ಎಂದು ಬಯಸುತ್ತೇನೆ’ ಎಂದು ತಮ್ಮ ಮಗನ ಸಿನಿಮಾ ಬಗ್ಗೆ ಹೇಳುತ್ತಾರೆ. ಹಾಗಾದರೆ “ಪಡ್ಡೆಹುಲಿ’ ಚಿತ್ರ ಸ್ವಮೇಕಾ ಎಂದು ನೀವು ಕೇಳಬಹುದು.

ಚಿತ್ರತಂಡ ಹೇಳುವಂತೆ ಇದು ಸ್ವಮೇಕ್‌ ಸಿನಿಮಾ. ಚಿತ್ರದುರ್ಗದ ಹಿನ್ನೆಲೆಯಲ್ಲಿ ಕಥೆ ಆರಂಭವಾಗುತ್ತದೆ. ಇಲ್ಲಿ ನಾಯಕನದು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಹಿಪ್‌ಆಪ್‌ ಸಿಂಗರ್‌ ಆಗಬೇಕೆಂದು ಕನಸು ಕಾಣುತ್ತಾ ಮುಂದೆ ಸಾಗುವ ಪಾತ್ರವಂತೆ. “ಪಡ್ಡೆಹುಲಿ’ ಸ್ವಮೇಕ್‌ ಸಿನಿಮಾ ಎಂದು ಚಿತ್ರತಂಡ ಹೇಳುತ್ತಿದ್ದಂತೆ ಗಾಂಧಿನಗರದಲ್ಲಿ ಇದು ರೀಮೇಕ್‌ ಸಿನಿಮಾ ಎಂಬ ಮಾತೂ ಓಡಾಡುತ್ತಿದೆ.

ತಮಿಳಿನ “ಮಿಸೈ ಮುರುಕ್ಕು’ ಸಿನಿಮಾದಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ರೀಮೇಕ್‌ ಎಂಬ ಮಾತೂ ಕೇಳಿಬರುತ್ತಿದೆ. ಆ ಚಿತ್ರದ ನಾಯಕ ಕೂಡಾ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ ಕೊನೆಗೆ ಖ್ಯಾತ ಹಿಪ್‌ಆಪ್‌ ಸಿಂಗರ್‌ ಆಗುವ ಕಥೆಯೊಂದಿಗೆ ಸಾಗುತ್ತದೆ. ಅಂದಹಾಗೆ, “ಪಡ್ಡೆಹುಲಿ’ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ ನಟ ಕಂ ರಾಜಕಾರಣಿ ನಿಖಿಲ್‌ ಕುಮಾರ್‌ ಇಂದು (ಜ. 22) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮೂವತ್ತನೇ ವರ್ಷಕ್ಕೆ...

  • "ಆ ದಿನಗಳು' ಖ್ಯಾತಿಯ ಚೇತನ್‌ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಿತ್ರರಂಗದ ಬಹುತೇಕರಿಗೆ ಗೊತ್ತಿದೆ. ಆದರೆ, ಯಾವಾಗ ಎಂಬುದು ಗೊತ್ತಿರಲಿಲ್ಲ. ಅವರ ಮದುವೆ...

  • ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಜ್ವಲ್‌ ದೇವರಾಜ್‌ ಅಭಿನಯದ "ಜಂಟಲ್‌ಮನ್‌' ಚಿತ್ರ ಜನವರಿ 31 ರಂದು ತೆರೆಕಾಣಬೇಕಿತ್ತು. ಆದರೆ, ಈಗ ಕಾರಣಾಂತರಗಳಿಂದ ಚಿತ್ರದ...

  • ಮೈಸೂರಿನ ಹೂಟಗಳ್ಳಿ ಹೊರವಲಯದ "ಒಡನಾಡಿ ಕೇಂದ್ರ'ದಲ್ಲಿ ಇತ್ತೀಚೆಗೆ ರಘು ಎಸ್‌.ಪಿ. ನಿರ್ದೇಶನವಿರುವ "ಗಿಫ್ಟ್ಬಾಕ್ಸ್‌' ಚಿತ್ರದ ಲಿರಿಕಲ್‌ ವೀಡಿಯೋ ಹಾಡನ್ನು ಅಲ್ಲಿನ...

  • ನಟ ಕಿಚ್ಚ ಸುದೀಪ್‌ ಅಭಿನಯಕ್ಕೆ ಈಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. 2020ನೇ ಸಾಲಿನ "ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌...

ಹೊಸ ಸೇರ್ಪಡೆ