ಶ್ರುತಿ ಹರಿಹರನ್ ಹೊಸ ಇನ್ನಿಂಗ್ಸ್
Team Udayavani, Sep 8, 2021, 1:06 PM IST
ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿ ಸೌಂಡ್ ಮಾಡಿದ್ದ “ಮಿಟೂ’ ಪ್ರಕರಣದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಶ್ರುತಿ ಹರಿಹರನ್, ಅದಾದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿ ಅದರ ಪಾಲನೆ-ಪೋಷಣೆ ಅಂಥ ಕೌಟುಂಬಿಕ ಜೀವನದಲ್ಲಿ ಬಿಝಿಯಾಗಿದ್ದರು.
ಇನ್ನು ಫ್ಯಾಮಿಲಿ ಲೈಫ್ನಲ್ಲಿ ಎಂಗೇಜ್ ಆಗುತ್ತಿದ್ದಂತೆ, ಶ್ರುತಿ ಹರಿಹರನ್ ಮತ್ತೆ ಚಿತ್ರರಂಗದಲ್ಲಿ ಬರುವುದಿಲ್ಲ, ಪಾತ್ರಗಳಿಗೆ ಬಣ್ಣ ಹಚ್ಚುವುದು ಅನುಮಾನ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬಂದಿದ್ದವು. ಇವೆಲ್ಲದರ ನಡುವೆಯೇ ನಟಿ ಶ್ರುತಿಹರಿಹರನ್ ಸದ್ದಿಲ್ಲದೆ ಮತ್ತೆ ಚಿತ್ರರಂಗಕ್ಕೆ ಮರಳುವ ಸಿದ್ಧತೆಯಲ್ಲಿದ್ದಾರೆ.
ಇದನ್ನೂ ಓದಿ:ಡ್ರಗ್ಸ್ ಕೇಸಿನಲ್ಲಿ ಎಷ್ಟೇ ಪ್ರಭಾವಿಯಾದರೂ ಕಠಿಣ ಕ್ರಮ ಖಚಿತ : ಅರಗ ಜ್ಞಾನೇಂದ್ರ
ಹೌದು, ಡಾಲಿ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ “ಹೆಡ್‌ಆ್ಯಂಡ್‌ಬುಷ್’ ಚಿತ್ರದಲ್ಲಿ ಶ್ರುತಿಹರಿಹರನ್ ಕೂಡ ಪ್ರಮುಖ ಪಾತ್ರದಲ್ಲಿಕಾಣಿಸಿಕೊಳ್ಳುತ್ತಿದ್ದಾರೆ.ಇತ್ತೀಚೆಗಷ್ಟೇಚಿತ್ರತಂಡಅಧಿಕೃತವಾಗಿಶ್ರುತಿ ಹರಿಹರನ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಸುದ್ದಿಯನ್ನು ಖಚಿತಪಡಿಸಿದ್ದು, ಚಿತ್ರದಲ್ಲಿ ಅವರ ಪಾತ್ರದಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಒಟ್ಟಾರೆ ಶ್ರುತಿಹರಿಹರನ್ ರೀ-ಎಂಟ್ರಿ ಚಿತ್ರರಂಗ ಮತ್ತು ಸಿನಿಪ್ರಿಯರಲ್ಲಿ ಒಂದಷ್ಟು ಕುತೂಹಲ, ನಿರೀಕ್ಷೆ ಮುಡಿಸಿದ್ದು, ಚಿತ್ರ ರಿಲೀಸ್ ಆದ ಮೇಲಷ್ಟೇ ಅದೆಲ್ಲದಕ್ಕೂ ತೆರೆ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ
ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ