ಈ ಸಿನಿಮಾಕ್ಕಾಗಿ ದೇಹದ ತೂಕವನ್ನು 20kg ಕಡಿಮೆ ಮಾಡಿಕೊಂಡ ಶುಭಾ ಪೂಂಜಾ
Team Udayavani, Nov 25, 2021, 10:39 AM IST
ಸ್ಯಾಂಡಲ್ ವುಡ್ ಬ್ಯೂಟಿ ಶುಭಾ ಪೂಂಜಾ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದರು. ದೊಡ್ಮನೆಯಿಂದ ಹೊರ ಬಂದ ಮೇಲೆ ಹೆಚ್ಚಾಗಿ ಕಣ್ಣಿಗೆ ಬೀಳದ ನಟಿ ಸದ್ದಿಲ್ಲದೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಹೌದು ಬಿಗ್ ಮನೆಯಲ್ಲಿ ಎಲ್ಲರನ್ನೂ ನಕ್ಕು ನಗಿಸಿ ಹೊರ ಬಂದ ನಟಿ ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಶುಭಾ ಪೂಂಜಾ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಹಾಗಾದ್ರೆ ಶುಭಾ ಪೂಂಜಾ ನಟಿಸುತ್ತಿರುವ ಈ ಸಿನಿಮಾ ಯಾವುದು ಅಂದ್ರಾ.. ‘ಅಂಬುಜ’. ಈ ಚಿತ್ರಕ್ಕಾಗಿ ಶುಭಾ 20 ಕೆಜಿಯಷ್ಟು ತಮ್ಮ ದೇಹದ ತೂಕವನ್ನು ಇಳಿಸಿಕೊಂಡಿದ್ದಾರಂತೆ. ವಿಶೇಷ ಅಂದ್ರೆ ಅಂಬುಜ ಸಿನಿಮಾದಲ್ಲಿ ಲಂಬಾಣಿ ಹುಡುಗಿಯಾಗಿ ಶುಭಾ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಪತ್ರಕರ್ತೆಯಾಗಿಯೂ ಬಣ್ಣ ಹಚ್ಚಲಿದ್ದಾರಂತೆ.
ಅಂಬುಜ ಚಿತ್ರದಲ್ಲಿ ಶುಭಾ ಜೊತೆ ಅಮೃತ ವರ್ಷಿಣಿ ಧಾರಾವಾಹಿ ಖ್ಯಾತಿಯ ರಜನಿ ಕೂಡ ನಟಿಸುತ್ತಿದ್ದಾರೆ. ಇನ್ನು ಸೈಕಾಲಜಿಕಲ್ ಥ್ರಿಲ್ಲರ್ ಆಗಿರುವ ‘ಅಂಬುಜ’ ಚಿತ್ರ ನವೆಂಬರ್ 8 ರಿಂದ 10 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರು ಹಾಗೂ ಗದಗದಲ್ಲಿ ಮುಗಿಸಿದೆ. ಇನ್ನು ಎರಡನೇ ಹಂತದ ಚಿತ್ರೀಕರಣ ನವೆಂಬರ್ 30ರಿಂದ ಶುರುವಾಗಲಿದೆ.
ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡ್ತಿದ್ದು, ಚಿತ್ರದಲ್ಲಿ ಶುಭಾ ಪೂಂಜಾ, ಕಾಮಿಡಿ ಕಿಲಾಡಿ ಗೋವಿಂದೇ ಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪದ್ಮಜಾರಾವ್, ದೀಪಕ್ ಸುಬ್ರಮಣ್ಯ, ಜಗದೀಶ್ ಹಲ್ಕುಡೆ ಬೇಬಿ ಆಕಾಂಕ್ಷ, ಹಾಗೂ ಸಂದೇಶ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?