Udayavni Special

ಗಾಯಕ ಹೇಮಂತ್‌ ಈಗ ಸಂಗೀತ ನಿರ್ದೇಶಕ

Team Udayavani, May 15, 2018, 11:14 AM IST

gayaaka.jpg

ಸಂಗೀತ ನಿರ್ದೇಶಕರು ಗಾಯಕರಾಗಿದ್ದಾರೆ. ಗಾಯಕರು ಸಂಗೀತ ನಿರ್ದೇಶಕರೂ ಆಗಿದ್ದಾರೆ. ಈಗ ಆ ಸಾಲಿಗೆ ಗಾಯಕ ಹೇಮಂತ್‌ ಹೊಸ ಸೇರ್ಪಡೆ. ಹೌದು, ಹೇಮಂತ್‌ ಇದುವರೆಗೆ ನೂರಾರು  ಹಾಡುಗಳನ್ನು ಹಾಡಿರುವ ಹೇಮಂತ್‌ ಅಂದಾಕ್ಷಣ ಥಟ್ಟನೆ ನೆನಪಾಗೋದೇ “ಪ್ರೀತ್ಸೆ ಪ್ರೀತ್ಸೆ..’ ಹಾಡು. ಆ ಹಾಡು ಸೂಪರ್‌ ಹಿಟ್‌ ಆಗುತ್ತಿದ್ದಂತೆಯೇ, ಹೇಮಂತ್‌ ಅವರನ್ನು ಹುಡುಕಿ ಬಂದ ಹಾಡುಗಳಿಗೆ ಲೆಕ್ಕವಿಲ್ಲ.

ಆ ಬಳಿಕೆ ಹೇಮಂತ್‌ ಅದೆಷ್ಟೋ ಜನಪ್ರಿಯ ಹಾಡುಗಳಿಗೆ ಧ್ವನಿಯಾದರು. “ಕುರಿಗಳು ಸಾರ್‌ ಕುರಿಗಳು’ ಚಿತ್ರದಲ್ಲಿ “ನಿದಿರೆ ಬರದಿರೆ ಏನಂತೀ…’, “ಕುಟುಂಬ’ ಚಿತ್ರದ “ನೀ ನನ್‌ ಅಪ್ಪಿಕೊಳ್ಳಲ್ವಾ..’, “ದುನಿಯಾ’ ಚಿತ್ರದ “ಪ್ರೀತಿ ಮಾಯೆ ಹುಷಾರು…’ , “ಇಂತಿ ನಿನ್ನ ಪ್ರೀತಿಯ’ ಚಿತ್ರದ “ಓ ಕನಸ ಜೋಕಾಲಿ …’ ಹಾಡುಗಳು ಇಂದಿಗೂ ಗುನುಗುವಂತಿವೆ. ಅದಲ್ಲದೆ ಸಾಕಷ್ಟು ಸ್ಟಾರ್‌ ನಟರ ಚಿತ್ರಗಳಿಗೆ ಹೇಮಂತ್‌ ಹಾಡಿದ್ದಾರೆ.

ಹಿನ್ನೆಲೆ ಗಾಯನಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದ ಅವರೀಗ, ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿದ್ದಾರೆ. “ಕರ್ಷಣಂ’ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ ಹೇಮಂತ್‌. ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್‌ ಅವರು ಗೀತೆಗಳನ್ನು ರಚಿಸಿದ್ದಾರೆ. ಅಂದಹಾಗೆ, ಈ ಚಿತ್ರವನ್ನು “ಮಹಾಭಾರತ’ ಧಾರಾವಾಹಿ ಖ್ಯಾತಿಯ ಶರವಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ಧನಂಜಯ ಅತ್ರೆ ಈ ಚಿತ್ರದ ನಿರ್ಮಾಣದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ನಾಯಕರಾಗಿ ಇದು ಇವರ ಮೊದಲ ಚಿತ್ರ. ಕಿರುತೆರೆಯಲ್ಲಿ ನಟರಾಗಿ ಗುರುತಿಸಿಕೊಂಡಿರುವ ಧನಂಜಯ್‌ ಅತ್ರೆ, “ಚಿತ್ರಲೇಖ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದ ಧನಂಜಯ್‌ ಅತ್ರೆಗೆ “ಕರ್ಷಣಂ’ ಮೊದಲ ಚಿತ್ರ.

ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇತ್ತೀಚೆಗೆ, ಸ್ಲಂ ಒಂದರಲ್ಲಿ “ಹೊಂಬಾಳೆ ಕಟ್ಟು ಗುರು, ಚಪ್ಪಾಳೆ ತಟ್ಟು ಗುರು…’ ಎಂಬ ನಾಯಕನ ಪರಿಚಯಿಸುವ ಹಾಡಿನೊಂದಿಗೆ ಚಿತ್ರಕ್ಕೆ ಕುಂಬಳಕಾಯಿ ಒಡೆಯಲಾಗಿದೆ. ಅಂದಹಾಗೆ, ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ. 

ಚಿತ್ರಕ್ಕೆ ಮೋಹನ್‌ ಎಂ.ಮುಗುಡೇಶ್ವರ ಛಾಯಾಗ್ರಹಣ, ಹೇಮಂತ್‌ ಸಂಗೀತ ನಿರ್ದೇಶನ, ನಾಗೇಂದ್ರ ಪ್ರಸಾದ್‌ ಸಾಹಿತ್ಯ, ಗೌರಿ ಅತ್ರೆ ಕಥೆ, ವೆಂಕಟೇಶ್‌ ಸಂಕಲನ, ಗಿರೀಶ್‌ ನೃತ್ಯ ನಿರ್ದೇಶನ, ಅಶೋಕ್‌ ಸಾಹಸ, ವಸಂತರಾವ್‌ ಕುಲಕರ್ಣಿ ಕಲಾನಿರ್ದೇಶನವಿದೆ. ಧನಂಜಯ ಅತ್ರೆ, ಅನೂಷಾರೈ, ಶ್ರೀನಿವಾಸ ಮೂರ್ತಿ, ಮನಮೋಹನ್‌ ರೈ, ವಿಜಯ ಚಂಡೂರು, ಗೌತಮ್‌ ರಾಜ್‌, ಯಮುನಾ ಶ್ರೀನಿಧಿ ಇನ್ನು ಮುಂತಾದವರ ತಾರಾಬಳಗವಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗುಡ್ ನ್ಯೂಸ್: ಕೋವಿಡ್ ಸೋಂಕು-ಭಾರತದಲ್ಲಿ 53 ಲಕ್ಷ ಮಂದಿ ಗುಣಮುಖ: ಸಚಿವಾಲಯ

ಗುಡ್ ನ್ಯೂಸ್: ಕೋವಿಡ್ ಸೋಂಕು-ಭಾರತದಲ್ಲಿ 53 ಲಕ್ಷ ಮಂದಿ ಗುಣಮುಖ: ಸಚಿವಾಲಯ

ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿಗೆ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ

ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿನತ್ತ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

‘ಉಪಕದನ’ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಬಗ್ಗೆ ಇಂದು ಸಂಜೆ ಕೋರ್ ಕಮಿಟಿ ನಿರ್ಧಾರ:ಸೋಮಶೇಖರ್

‘ಉಪಕದನ’ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಬಗ್ಗೆ ಇಂದು ಸಂಜೆ ಕೋರ್ ಕಮಿಟಿ ನಿರ್ಧಾರ:ಸೋಮಶೇಖರ್

ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿಲು ಸಂಪುಟ ಸಭೆಯಲ್ಲಿ ತೀರ್ಮಾನ

ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿಲು ಸಂಪುಟ ಸಭೆಯಲ್ಲಿ ತೀರ್ಮಾನ

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು

ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏಳು ವರ್ಷಗಳ ನಂತರ ಪೆಟ್ರೋಮ್ಯಾಕ್ಸ್‌ಗೆ ಮರುಜೀವ

ಏಳು ವರ್ಷಗಳ ನಂತರ ಪೆಟ್ರೋಮ್ಯಾಕ್ಸ್‌ಗೆ ಮರುಜೀವ

ಶರ್ಟ್‌ಲೆಸ್‌ ಫೈಟ್‌ಗಾಗಿ ಯಶ್‌ ವರ್ಕೌಟ್‌!

ಶರ್ಟ್‌ಲೆಸ್‌ ಫೈಟ್‌ಗಾಗಿ ಯಶ್‌ ವರ್ಕೌಟ್‌!

Cinema-tdy-1

ಥಿಯೇಟರ್‌ ಓಪನ್‌ ಮಾಡಿ ಸ್ವಾಮಿ…

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ದೀಪ ಬೆಳಗಿ, ಎಸ್ಪಿಬಿ ಆತ್ಮಕ್ಕೆ ಶಾಂತಿ ಕೋರಿದ ಇಳಯರಾಜ

ದೀಪ ಬೆಳಗಿ, ಎಸ್ಪಿಬಿ ಆತ್ಮಕ್ಕೆ ಶಾಂತಿ ಕೋರಿದ ಇಳಯರಾಜ

MUST WATCH

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆಹೊಸ ಸೇರ್ಪಡೆ

ಗುಡ್ ನ್ಯೂಸ್: ಕೋವಿಡ್ ಸೋಂಕು-ಭಾರತದಲ್ಲಿ 53 ಲಕ್ಷ ಮಂದಿ ಗುಣಮುಖ: ಸಚಿವಾಲಯ

ಗುಡ್ ನ್ಯೂಸ್: ಕೋವಿಡ್ ಸೋಂಕು-ಭಾರತದಲ್ಲಿ 53 ಲಕ್ಷ ಮಂದಿ ಗುಣಮುಖ: ಸಚಿವಾಲಯ

ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿಗೆ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ

ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿನತ್ತ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ

ಟಿಇಟಿ ಪರೀಕ್ಷೆ : ಸೋಂಕಿತರಿಗೂ ಪ್ರತ್ಯೇಕ ಅವಕಾಶ

ಟಿಇಟಿ ಪರೀಕ್ಷೆ : ಸೋಂಕಿತರಿಗೂ ಪ್ರತ್ಯೇಕ ಅವಕಾಶ

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

kadugolla

ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.