ಸ್ನೇಹರ್ಷಿ ಹಾಡುಗಳಿಗೆ ಮೆಚ್ಚುಗೆ: ಶೀಘ್ರದಲ್ಲೇ ಟೀಸರ್ ರಿಲೀಸ್
Team Udayavani, Aug 27, 2021, 2:57 PM IST
ಕಿರಣ್ ನಾರಾಯಣ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ “ಸ್ನೇಹರ್ಷಿ’ ಚಿತ್ರ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಈಗಾಗಲೇ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿ ಹಿಟ್ ಲಿಸ್ಟ್ ಸೇರಿವೆ. “ಮೊದಲ ಹೆಜ್ಜೆಗೆ…’ ಎಂಬ ನಾಯಕನ ಇಂಟ್ರೊಡಕ್ಷನ್ ಸಾಂಗ್ ಹಾಗೂ “ಅರಿವಿಲ್ಲದೇ ಶುರುವಾದಂತಿದೆ…’ ಎಂಬ ಹಾಡುಗಳು ಒಂದು ಮಿಲಿಯನ್ ಹಿಟ್ಸ್ ಪಡೆಯುವ ಮೂಲಕ ಚಿತ್ರತಂಡ ಖುಷಿಗೆಕಾರಣವಾಗಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಶೀಘ್ರದಲ್ಲಿಯೇ ಚಿತ್ರದ ಟೀಸರ್ ರಿಲೀಸ್ ಮಾಡಲಿದೆ.
ಇದನ್ನೂ ಓದಿ:ಇಂದು ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಮರುಬಿಡುಗಡೆ
“ಸ್ನೇಹರ್ಷಿ’ ಬಗ್ಗೆ ಮಾತನಾಡುವ ನಾಯಕ ನಟ ಕಿರಣ್ ನಾರಾಯಣ್, “ಇದು ನಮ್ಮ ನಡುವೆಯೇ ನಡೆಯುವ ಕಥೆ. ಇಲ್ಲಿಯವರೆಗೂ ಯಾರೂ ಹೇಳದ ಕೆಲವೊಂದು ವಿಷಯವನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಪ್ರತಿನಿತ್ಯ ಎಲ್ಲರೂ ಅನುಭವಿಸುವ ಆದರೆ ಯಾರೂ ಮಾತನಾಡದ ಸಮಸ್ಯೆಯೊಂದರ ಬಗ್ಗೆ ನಮ್ಮ ಸಿನಿಮಾ ಮಾತಾಡುತ್ತದೆ. ಮೆಟ್ರೋ ಪಾಲಿಟನ್ನಂಥ ಸಿಟಿಯಲ್ಲಿ ಪ್ರತಿನಿತ್ಯ ಬಹುತೇಕರು ಅನುಭವಿಸುವ ಬ್ಲೂಕಾಲರ್ ಪ್ರಾಬ್ಲಿಂ ಸುತ್ತ ನಮ್ಮ ಸಿನಿಮಾದ ಕಥೆ ನಡೆಯುತ್ತದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ