ಆ ಬೇಕರಿಗೆ ಪುನೀತ್ ದಿಲ್ ಪಸಂದ್ ತಿನ್ನಲು ಸೈಕಲ್ ಮೇಲೆ ಬರುತ್ತಿದ್ದರು : ಹಾಡು ಬರೆದ ಋಷಿ
Team Udayavani, Nov 23, 2021, 3:24 PM IST
ಪುನೀತ್ ರಾಜ್‌ಅವರ ಅಕಾಲಿಕ ಮರಣದ ನಂತರ ಇಡೀ ಕರುನಾಡಿಗೆ ಮಂಕುಬಡಿದ ಹಾಗೆ ಆಗಿದೆ. ಯಾರು ಕೂಡ ಆ ದುಃಖದಿಂದ ಹೊರಬರಲು ಆಗಿಲ್ಲ.. ಒಳಿತು ಮಾಡು ಮನುಸ ಹಾಡಿನ ಮೂಲಕ ಮನೆಮಾತಾಗಿರುವ ನಮ್ಮ ಋಷಿ ಅವರಿಗೂ ಪುನೀತ್ ಅವರ ಸಾವಿನ ನೋವು ಬಹಳವಾಗಿ ಕಾಡಿದೆಯಂತೆ.
ಈ ನೋವನ್ನು ಅವರು ಅಪ್ಪು ಮಾಡಿದ ತಪ್ಪು ಏನು ಹಾಡು ಬರೆಯುವ ಮೂಲಕ ಹೊರಹಾಕಿದ್ದಾರೆ. ನಮ್ಮ ಋಷಿ ಬರೆದಿರುವ ಈ ಹಾಡನ್ನು ನಾ ಕೋಳಿಕೆ ರಂಗ ಚಿತ್ರದ ನಿರ್ಮಾಪಕ ಸೋಮಶೇಖರ್ ಭಾವಪರವಶರಾಗಿ ಹಾಡಿದ್ದಾರೆ.
ನಾನು ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೂ ಬಲ್ಲೆ. ವಯ್ಯಾಲಿ ಕಾವಲ್ ನಲ್ಲಿ ನಮ್ಮ ಮನೆಯಿತ್ತು. ಅಲ್ಲಿನ ಒಂದು ಬೇಕರಿಗೆ ಪುನೀತ್ ದಿಲ್ ಪಸಂದ್ ತಿನ್ನಲು ಸೈಕಲ್ ಮೇಲೆ ಬರುತ್ತಿದ್ದರು. ಆಗಿನಿಂದಲೂ ಕೊಡುವ ಗುಣ ಅವರಲ್ಲಿತ್ತು.
ತಾವು ತಿನ್ನುವುದಲ್ಲದೇ ಸುತ್ತ ಇರುವವರಿಗೂ ಕೊಡಿಸುತ್ತಿದ್ದರು. ಆನಂತರ ಜಿಮ್ ನಲ್ಲಿ ಅವರೊಂದಿಗೆ ಮಾತನಾಡುತ್ತಿದ್ದೆ. ನನ್ನ ಒಳಿತು ಮಾಡು ಮನುಸ ಹಾಡನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು ಎನ್ನುವುದು ಋಷಿ ಮಾತು.