“ಟಕ್ಕರ್’ ಹಾಡಲ್ಲಿ ಸ್ಪೆಷಲ್ ಫೈಟ್
ಸೆ.7ಕ್ಕೆ ಹಾಡುಗಳ ಕಲರವ
Team Udayavani, Sep 1, 2019, 3:01 AM IST
ಯುವ ನಟ ಮನೋಜ್ ಅಭಿನಯದ “ಟಕ್ಕರ್’ ಚಿತ್ರದ ಹಾಡುಗಳು ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿವೆ. ದರ್ಶನ್ ಅವರು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಲಿದ್ದಾರೆ. ಕೆ.ಎನ್.ನಾಗೇಶ್ ಕೋಗಿಲು ನಿರ್ಮಾಣದ ಈ ಚಿತ್ರವನ್ನು ರಘುಶಾಸ್ತ್ರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಂಜನಿ ರಾಘವನ್ ಅವರು ನಾಯಕಿಯಾಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ಮೂರು ಹಾಡುಗಳಿವೆ.
ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದಾರೆ. ವಿಜಯಪ್ರಕಾಶ್, ಅನುರಾಧಾ ಭಟ್, ಶಶಾಂಕ್ ಶೇಷಗಿರಿ, ಸಂಜಿತ್ ಹೆಗ್ಡೆ, ಹಾಡಿದ್ದಾರೆ. ಚಿತ್ರದಲ್ಲಿ ನಾಯಕನನ್ನು ಪರಿಚಯಿಸುವ ಹಾಡೊಂದು ಇದ್ದು, ಆ ಹಾಡಲ್ಲಿ ಫೈಟ್ ಅನ್ನೂ ಅಳವಡಿಸಿರುವುದು ವಿಶೇಷ. “ಆನೆ ನಡೆದಿದ್ದೇ ದಾರಿ ಅಲ್ವೇನ್ರಿ, ಯಾರು ಕೊಡಬೇಡಿ ಟಕ್ಕರ್…’ ಎನ್ನುವ ಹಾಡಿಗೆ ಮೋಹನ್ ನೃತ್ಯ ನಿರ್ದೇಶಿಸಿದರೆ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸ್ಟಂಟ್ಸ್ ಮಾಡಿದ್ದಾರೆ.
“ಟಕ್ಕರ್’ ಥ್ರಿಲ್ಲರ್ ಮತ್ತು ಆ್ಯಕ್ಷನ್ ಹೊಂದಿದ್ದು, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ ಮಾಡಿದರೆ, ಕೆ.ಎಂ. ಪ್ರಕಾಶ್ ಸಂಕಲನವಿದೆ. ಈಶ್ವರಿ ಕುಮಾರ್ ಕಲಾ ನಿರ್ದೇಶನವಿದೆ. ಗುರುರಾಜ್ ದೇಸಾಯಿ ಮಾತುಗಳನ್ನು ಪೋಣಿಸಿದ್ದಾರೆ. ಚಿತ್ರದಲ್ಲಿ ಕೆ.ಎಸ್. ಶ್ರೀಧರ್, ಜೈ ಜಗದೀಶ್, ಶಂಕರ್ ಅಶ್ವಥ್, ಸುಮಿತ್ರಾ, “ಭಜರಂಗಿ’ ಸೌರವ್ ಲೋಕಿ, ಸಾಧು ಕೋಕಿಲ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ಕುರಿ ಸುನಿಲ್ ಇತರರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ