ಕೆಜಿಎಫ್ ನಿರೀಕ್ಷೆಯಲ್ಲಿ ಶ್ರೀನಿಧಿ ಶೆಟ್ಟಿ

Team Udayavani, Nov 19, 2018, 12:10 PM IST

srinidhi-shetty.jpg

ಕೆಲವು ಸಿನಿಮಾಗಳೇ ಹಾಗೆ. ತಂಡದ ಸದಸ್ಯರಿಗೆಲ್ಲಾ ಅದೃಷ್ಟ ತಂದುಕೊಡುತ್ತವೆ. ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಈಗ ಈ ಮಾತು ಯಾಕೆ ಎಂದು ಕೇಳಿದರೆ ಅದಕ್ಕೆ ಉತ್ತರ “ಕೆಜಿಎಫ್’ ಚಿತ್ರ. ಯಶ್‌ ನಟನೆಯ “ಕೆಜಿಎಫ್’ ಚಿತ್ರದ ಟ್ರೇಲರ್‌ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ.

ಇಷ್ಟಕ್ಕೆ “ಕೆಜಿಎಫ್’ ಟ್ರೇಲರ್‌ ಪರಿಣಾಮ ಮುಗಿದಿಲ್ಲ, ಆ ಚಿತ್ರದಲ್ಲಿ ದುಡಿದ ಕಲಾವಿದರಿಗೆ, ತಾಂತ್ರಿಕ ವರ್ಗದವರಿಗೆ ಮೆಚ್ಚುಗೆಯ ಜೊತೆಗೆ ಅವಕಾಶಗಳನ್ನು ಕೂಡಾ ತರುತ್ತಿದೆ. ಆ ಸಾಲಿನಲ್ಲಿ ಮೊದಲು ನಿಲ್ಲುವವರು ಶ್ರೀನಿಧಿ ಶೆಟ್ಟಿ. “ಕೆಜಿಎಫ್’ಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬೆಡಗಿ. ಮಂಗಳೂರು ಮೂಲದ ಶ್ರೀನಿಧಿ ಶೆಟ್ಟಿ 2016 ರಲ್ಲಿ ಮಿಸ್‌ ಸುಪ್ರ ಇಂಟರ್‌ನ್ಯಾಶನಲ್‌ ಕಿರೀಟ ಮುಡಿಗೇರಿಸಿಕೊಂಡವರು.

ಈಗ “ಕೆಜಿಎಫ್’ ಮೂಲಕ ಬಣ್ಣದ ಲೋಕ ಎಂಟ್ರಿಯಾಗಿದ್ದು, ಈ ಚಿತ್ರದಲ್ಲಿ ರೀನಾ ಎಂಬ ಪಾತ್ರ ಮಾಡಿದ್ದಾರೆ. ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಶ್ರೀನಿಧಿ ಶೆಟ್ಟಿಯವರಿಗೆ ಸಾಕಷ್ಟು ಅವಕಾಶಗಳು ಬರಲಾರಂಭಿಸಿದೆ. ಬಾಲಿವುಡ್‌ ಸೇರಿದಂತೆ ತಮಿಳು, ತೆಲುಗಿನಿಂದಲೂ ಶ್ರೀನಿಧಿಗೆ ಅವಕಾಶಗಳು ಬರುತ್ತಿವೆ. ಆದರೆ, ಶ್ರೀನಿಧಿ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ.

ಅದಕ್ಕೆ ಕಾರಣ, “ಕೆಜಿಎಫ್’. ಮೊದಲ ಚಿತ್ರ ಬಿಡುಗಡೆಯಾಗಿ, ಜನ ಹೇಗೆ ಸ್ವೀಕರಿಸುತ್ತಾರೆಂಬ ನಿರೀಕ್ಷೆಯಲ್ಲಿರುವ ಶ್ರೀನಿಧಿ, ಆ ನಂತರವೇ ಬೇರೆ ಸಿನಿಮಾ ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ. ಜೊತೆಗೆ ಸಿನಿಮಾ ಬಿಡುಗಡೆಯಾದ ಮೇಲೆ ಇನ್ನಷ್ಟು ಅವಕಾಶಗಳು ಬರುವ ನಿರೀಕ್ಷೆ ಶ್ರೀನಿಧಿ ಶೆಟ್ಟಿಯವರದು. ಅಂದಹಾಗೆ, ಯಶ್‌ ಅಭಿನಯದ “ಕೆಜಿಎಫ್’ ಚಿತ್ರ ಡಿಸೆಂಬರ್‌ 21 ರಂದು ತೆರೆಕಾಣಲಿದೆ. ಈ ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದು, ವಿಜಯ್‌ ಕಿರಗಂದೂರು ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

thumb 1

ಹೈದರಾಬಾದ್‌-ಪಂಜಾಬ್‌ ಲಾಸ್ಟ್‌ ಶೋ; ಇಂದು ಕೊನೆಯ ಲೀಗ್‌ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

astrology

ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷ

ಮಂಗಳೂರಿನಲ್ಲಿ ವಿಮಾನ ಮಹಾದುರಂತಕ್ಕೆ 12 ವರ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

‘ಬಘೀರ’ನಿಗೆ ಮುಹೂರ್ತ; ಶ್ರೀಮುರಳಿ ನಟನೆ- ಹೊಂಬಾಳೆ ನಿರ್ಮಾಣ

‘ಬಘೀರ’ನಿಗೆ ಮುಹೂರ್ತ; ಶ್ರೀಮುರಳಿ ನಟನೆ- ಹೊಂಬಾಳೆ ನಿರ್ಮಾಣ

ಪುರೋಹಿತ್‌ ಪ್ರೇಮ ಪುರಾಣ ‘ಸಿಂಧೂರ’ ಕಾವ್ಯ

ಪುರೋಹಿತ್‌ ಪ್ರೇಮ ಪುರಾಣ ‘ಸಿಂಧೂರ’ ಕಾವ್ಯ

ಬೇಜಾರು ಮಾಡ್ಕೊಂಡ್ರು ಸಂಹಿತಾ!

ಬೇಜಾರು ಮಾಡ್ಕೊಂಡ್ರು ಸಂಹಿತಾ!

11

ಸತೀಶ್‌ ಕೈಯಲ್ಲಿ ಅಶೋಕ ಬ್ಲೇಡ್

MUST WATCH

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಹೆಲ್ಮೆಟ್‌ ಸಡಿಲವಾಗಿ ಧರಿಸಿದ್ದರೂ ದಂಡ!

thumb 1

ಹೈದರಾಬಾದ್‌-ಪಂಜಾಬ್‌ ಲಾಸ್ಟ್‌ ಶೋ; ಇಂದು ಕೊನೆಯ ಲೀಗ್‌ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಳೆ ಹಾನಿ ಸಮೀಕ್ಷಾ ವರದಿಗೆ ಸಿಎಂ ಬೊಮ್ಮಾಯಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.