ಸಲ್ಮಾನ್ ಚಿತ್ರದಲ್ಲಿ ಸುದೀಪ್; ದಭಾಂಗ್-3ನಲ್ಲಿ ಕಿಚ್ಚ

Team Udayavani, Jul 16, 2018, 3:48 PM IST

ಚಿರಂಜೀವಿಯವರ “ಸೈರಾ’ದಲ್ಲಿ ಸುದೀಪ್‌ ನಟಿಸಲು ಒಪ್ಪಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಸುದೀಪ್‌ ಅಭಿಮಾನಿಗಳಿಗೆ ಮತ್ತೂಂದು ಖುಷಿಯ ಸುದ್ದಿ. ಸುದೀಪ್‌ ಮತ್ತೂಂದು ಹಿಂದಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅದು ಬಾಲಿವುಡ್‌ನ‌ ಸ್ಟಾರ್‌ ನಟನ ಚಿತ್ರದಲ್ಲಿ ಎಂಬುದು ವಿಶೇಷ. ಹೌದು, ಸಲ್ಮಾನ್‌ ಖಾನ್‌ ಅಭಿನಯದ “ದಭಾಂಗ್‌-3′ ಚಿತ್ರದಲ್ಲಿ ಸುದೀಪ್‌ ಪ್ರಮುಖ ಪಾತ್ರ ಮಾಡುತ್ತಿದ್ದು, ಈಗಾಗಲೇ ಮಾತುಕತೆಯಾಗಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಸುದೀಪ್‌, ಸಲ್ಮಾನ್‌ ಖಾನ್‌ ಚಿತ್ರದಲ್ಲಿ ನಟಿಸಿದಂತಾಗುತ್ತದೆ. ಈಗಾಗಲೇ “ದಭಾಂಗ್‌’ ಹಾಗೂ “ದಭಾಂಗ್‌-2′ ಬಂದಿದ್ದು, ಈಗ ಚಿತ್ರತಂಡ “ದಭಾಂಗ್‌-3′ ಮಾಡಲು ಮುಂದಾಗಿದೆ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು, ಸಲ್ಮಾನ್‌ ಖಾನ್‌ ಸಹೋದರ ಸೋಹಲ್‌ ಖಾನ್‌ ನಿರ್ಮಿಸುತ್ತಿದ್ದಾರೆ. 

ಎಲ್ಲಾ ಓಕೆ, ಚಿತ್ರದಲ್ಲಿ ಸುದೀಪ್‌ ನೆಗೆಟಿವ್‌ ಪಾತ್ರ ಮಾಡುತ್ತಿದ್ದಾರಾ ಎಂದು ನೀವು ಕೇಳಿದರೆ, ಇಲ್ಲ ಎಂಬ ಉತ್ತರ ಬರುತ್ತದೆ. ಏಕೆಂದರೆ ಚಿತ್ರದಲ್ಲಿ ಸುದೀಪ್‌ ಪ್ರಮುಖ ಪಾತ್ರ ಮಾಡುತ್ತಿದ್ದು, ಅದು ನೆಗೆಟಿವ್‌ ಅಲ್ಲ ಎಂಬುದು ಮೂಲಗಳ ಮಾಹಿತಿ. ಈ ಹಿಂದೆ “ಟೈಗರ್‌ ಜಿಂದಾ ಹೇ’ ಸಿನಿಮಾದಲ್ಲಿ ಸುದೀಪ್‌ ನಟಿಸಲಿದ್ದಾರೆಂಬ ಸುದ್ದಿ ಓಡಾಡುತ್ತಿತ್ತು. ಆದರೆ, ಆ ಚಿತ್ರದಲ್ಲಿ ಸುದೀಪ್‌ ನಟಿಸಿರಲಿಲ್ಲ. ಈಗ ಸುದೀಪ್‌, ಸಲ್ಮಾನ್‌ ಖಾನ್‌ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಚಿತ್ರ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ. 

ಇನ್ನು, ಸಲ್ಲು ಸಹೋದರ ಸೋಹಲ್‌ ಹಾಗೂ ಸುದೀಪ್‌ ಇಬ್ಬರು ಒಳ್ಳೆಯ ಸ್ನೇಹಿತರು. ಸಿಸಿಎಲ್‌ ಮೂಲಕ ಇಬ್ಬರು ಸ್ನೇಹ ಆರಂಭವಾಗಿದ್ದು, ಬೆಂಗಳೂರಿಗೆ ಬಂದಾಗ ಈ ಇಬ್ಬರು ಭೇಟಿಯಾಗುತ್ತಿರುತ್ತಾರೆ. ಈಗ ತಮ್ಮ ನಿರ್ಮಾಣದ ಸಿನಿಮಾದಲ್ಲಿ ಸುದೀಪ್‌ ನಟಿಸುವಂತೆ ಸೋಹಾಲ್‌ ಕೇಳಿಕೊಂಡಿದ್ದು, ಸುದೀಪ್‌ ಕೂಡಾ ಒಪ್ಪಿಕೊಂಡಿದ್ದಾರೆ. ಇದು ಸುದೀಪ್‌ ಅವರ ಹಿಂದಿ ಸಿನಿಮಾದ ಸುದ್ದಿಯಾದರೆ ತಮಿಳು ಸಿನಿಮಾವೊಂದರಲ್ಲಿ ನಟಿಸಲು ಸುದೀಪ್‌ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ತಮಿಳು ನಟ ಧನುಶ್‌ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾವೊಂದರಲ್ಲಿ ಸುದೀಪ್‌ ಕೂಡಾ ಪ್ರಮುಖ ಪಾತ್ರ ಮಾಡಲಿದ್ದಾರೆ. ಈ ಚಿತ್ರ ನವೆಂಬರ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. 

ಅತ್ತ ಕಡೆ ಹಾಲಿವುಡ್‌, ಇತ್ತ ಕಡೆ ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಸುದೀಪ್‌ ಬಿಝಿಯಾಗುತ್ತಿದ್ದಾರೆ. ಎಲ್ಲಾ ಓಕೆ, ಸದ್ಯ ಸುದೀಪ್‌ ಅವರು ನಟಿಸುತ್ತಿರುವ “ಕೋಟಿಗೊಬ್ಬ-3′ ಹಾಗೂ “ಪೈಲ್ವಾನ್‌’ ಚಿತ್ರಗಳು ಯಾವಾಗ ಮುಗಿಯುತ್ತದೆ ಎಂದು ನೀವು ಕೇಳಬಹುದು. ಈಗಾಗಲೇ ಸುದೀಪ್‌ ಈ ಎರಡು ಸಿನಿಮಾಗಳ ಒಂದೊಂದು ಶೆಡ್ನೂಲ್‌ ಮುಗಿಸಿದ್ದಾರೆ. ಸದ್ಯ “ಸೈರಾ’ಗೆ ಸುದೀಪ್‌ ಡೇಟ್ಸ್‌ ಕೊಟ್ಟಿದ್ದು, ಅದು ಮುಗಿದ ನಂತರ ಮತ್ತೆ “ಪೈಲ್ವಾನ್‌’ ಆರಂಭವಾಗಲಿದೆ. 


ಈ ವಿಭಾಗದಿಂದ ಇನ್ನಷ್ಟು

  • "ಡಾಟರ್‌ ಆಫ್ ಪಾರ್ವತಮ್ಮ', ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ...

  • ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು, ಅದರಲ್ಲೂ ನಾಯಕ ನಟಿಯರು ಯಾವಾಗಲೂ ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ಪ್ರತಿದಿನ ಯೋಗ, ಜಿಮ್‌,...

  • ಇತ್ತೀಚೆಗಷ್ಟೇ "99' ಚಿತ್ರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ನಟ ಗೋಲ್ಡನ್‌ ಸ್ಟಾrರ್‌ ಗಣೇಶ್‌ ಈಗ ಮತ್ತೆ ಥಿಯೇಟರ್‌ನಲ್ಲಿ 'ಗಿಮಿಕ್‌' ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ....

  • ಪ್ರಿಯಾಂಕ ಅಭಿನಯದ "ದೇವಕಿ' ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. "ದೇವಕಿ' ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿದೆ....

  • "ಆಗಸ್ಟ್‌ 9'... ಕನ್ನಡ ಚಿತ್ರರಂಗದ ಮಟ್ಟಿಗೆ ಹಬ್ಬ. ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಎಲ್ಲಿಲ್ಲದ ಸಡಗರ, ಸಂಭ್ರಮ. ಹಾಗಂತ, ಆಗಸ್ಟ್‌ 9 ರಂದು ಯಾವುದೇ ಚಿತ್ರೋತ್ಸವ ನಡೆಯುತ್ತಿಲ್ಲ....

ಹೊಸ ಸೇರ್ಪಡೆ