ಪೋಲ್ಯಾಂಡ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಿಚ್ಚ
Team Udayavani, Sep 28, 2019, 4:01 AM IST
ಸುದೀಪ್ ಅಭಿನಯದ “ಕೋಟಿಗೊಬ್ಬ-3′ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. “ಪೈಲ್ವಾನ್’ ಚಿತ್ರದ ಬಿಡುಗಡೆ, ಪ್ರಮೋಶನ್ನಲ್ಲಿ ಬಿಝಿಯಾಗಿದ್ದ ಸುದೀಪ್ ಈಗ ಪೋಲ್ಯಾಂಡ್ನಲ್ಲಿ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ತೊಡಗಿದ್ದಾರೆ.
ಚಿತ್ರೀಕರಣದ ನಡುವೆಯೇ ಸುದೀಪ್ ಹಾಗೂ ಚಿತ್ರತಂಡ ಪೋಲ್ಯಾಂಡ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿದ್ದಾರೆ. ಇವರಿಗೆ ನಟ ರವಿಶಂಕರ್ ಕೂಡಾ ಜೊತೆಯಾಗಿದ್ದಾರೆ. ಪೋಲ್ಯಾಂಡ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸುದೀಪ್ ನಿಂತಿರುವ ಫೋಟೋ ಸದ್ಯಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.