Udayavni Special

ದರ್ಶನ್ ಮಾತಿಗೆ ಸುದೀಪ್ ಅಭಿಮಾನಿಗಳ ಆಕ್ರೋಶ

ಮತ್ತೆ ಶುರುವಾಗುತ್ತಾ ಫ್ಯಾನ್ಸ್ ವಾರ್?

Team Udayavani, Aug 5, 2019, 3:00 AM IST

sudeep

ದರ್ಶನ್ ಹೇಳಿದ ಆ ಒಂದು ಮಾತಿಗೆ ಇದೀಗ ಸುದೀಪ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡುವಲ್ಲಿ ನಿರತರಾಗಿದ್ದಾರೆ. ‘ಇಷ್ಟಾದ ಮೇಲೂ ದರ್ಶನ್ ಅವರ ಬಗ್ಗೆ ಇನ್ನು ಮೇಲೆ ಏನನ್ನೂ ಹೇಳಬೇಡಿ…’ ಎಂದು ಅನೇಕ ಅಭಿಮಾನಿಗಳು ಟ್ವೀಟರ್ ಮೂಲಕ ಸುದೀಪ್ ಅವರಿಗೆ ಹೇಳುತ್ತಿದ್ದಾರೆ. ಸದ್ಯಕ್ಕೆ ಸುದೀಪ್ ಅಭಿಮಾನಿಗಳು ಹಾಕುತ್ತಿರುವ ಕಾಮೆಂಟ್ಸ್ ನೋಡಿದರೆ, ಪುನಃ ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ವಾರ್ ಶುರುವಾಗುತ್ತಾಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮನೆ ಮಾಡಿದೆ.

ಅಷ್ಟಕ್ಕೂ ನಡೆದಿದ್ದೇನು? ‘ಕುರುಕ್ಷೇತ್ರ’ ಚಿತ್ರದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ‘ಅಂಬರೀಶ್ ಹಾಗೂ ವಿಷ್ಣುವರ್ಧನ್ ರೀತಿಯೇ, ಸುದೀಪ್ ಮತ್ತು ದರ್ಶನ್ ಕೂಡ ಇರಬೇಕು ಎಂಬುದು ಇಂಡಸ್ಟ್ರಿಯ ಆಸೆ. ಆದರೆ, ಇಬ್ಬರ ನಡುವೆ ಮುನಿಸಿತ್ತು. ಇತ್ತೀಚೆಗೆ ಸುದೀಪ್ ಅವರು ಕೂಡ ನಿಮ್ಮ ಗೆಳೆತನ ಬಗ್ಗೆ ಮಾತನಾಡಿದ್ದರು. ನೀವು ಅವರ ಸ್ನೇಹದ ಬಗ್ಗೆ ಏನು ಹೇಳ್ತೀರಿ?’ ಎಂಬ ಪ್ರಶ್ನೆಯನ್ನು ದರ್ಶನ್ ಅವರ ಮುಂದಿಡಲಾಗಿತ್ತು. ಆ ಪ್ರಶ್ನೆಗೆ ದರ್ಶನ್ ಉತ್ತರ ಹೀಗಿತ್ತು.

‘ಇನ್ಮೇಲೆ ದರ್ಶನ್ ಬೆಳಗ್ಗೆ ಎಷ್ಟೊತ್ತಿಗೆ ಎದ್ದೇಳಬೇಕು, ಏನೇನು ತಿನ್ನಬೇಕು, ಯಾರ ಫೋನ್ ಎತ್ತಬೇಕು, ಯಾರ ಫೋನ್ ಎತ್ತಬಾರದು, ಯಾರ ಜೊತೆ ಫ್ರೆಂಡ್‌ಶಿಪ್ ಮಾಡಬೇಕು, ಮಾಡಬಾರದು, ರಾತ್ರಿ ಅವನ ಹೆಂಡತಿ ಜೊತೆ ಮಲಗಬೇಕಾ? ಮಲಗಬಾರದಾ ಎನ್ನುವುದನ್ನು ಮಾಧ್ಯಮದವರು ಡಿಸೈಡ್ ಮಾಡ್ತೀರಾ? ಅದು ನನ್ನ ವೈಯಕ್ತಿಕ ವಿಷಯ. ನನಗೆ ಗೊತ್ತು.’ ಎಂದು ಪ್ರತಿಕ್ರಿಯಿಸಿದ್ದರು.

ದರ್ಶನ್ ಅವರ ಈ ಮಾತು ಹೊರಬರುತ್ತಿದ್ದಂತೆಯೇ, ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗೋಯ್ತು. ಸಾಕಷ್ಟು ಚರ್ಚೆಗಳು ನಡೆದವು. ಅತ್ತ ಸುದೀಪ್ ಅಭಿಮಾನಿಗಳು ಸಹ, ಮೆಲ್ಲನೆ, ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಮಾತಿಗೆ ಬೇಸರ ವ್ಯಕ್ತಪಡಿಸಿದ್ದಲ್ಲದೆ, ಸುದೀಪ್ ಅವರಿಗೂ, ‘ಅಣ್ಣಾ ಇನ್ನು ಮುಂದೆ ಅವರ ಕುರಿತು ಏನನ್ನೂ ಮಾತನಾಡಬೇಡಿ. ಸ್ನೇಹದ ಬಗ್ಗೆ ಕೇಳಿದರೆ, ಏನೇನೋ ಮಾತಾಡುತ್ತಾರೆ.

ದಯವಿಟ್ಟು, ತೀರಾ ಒಳ್ಳಯರಾಗಬೇಡಿ’ ಎಂದು ಮನವಿ ಮಾಡಿದ್ದಾರೆ. ಅದೇನೆ ಇರಲಿ, ‘ಫ್ರೆಂಡ್‌ಶಿಪ್ ಡೇ’ ಸಂದರ್ಭದಲ್ಲೇ ಪುನಃ ಹೀಗೆಲ್ಲಾ ಆಗೋಯ್ತಾ ಎಂಬ ಪ್ರಶ್ನೆಯೊಂದು ಅನೇಕರಲ್ಲಿ ಗಿರಕಿ ಹೊಡೆಯುತ್ತಿರುವುದಂತೂ ನಿಜ. ಅಷ್ಟಕ್ಕೂ ದರ್ಶನ್ ಮಾತಿನ ಅರ್ಥ ಏನಾಗಿತ್ತು? ಎಂಬುದೇ ಈಗ ಉಳಿದಿರುವ ಪ್ರಶ್ನೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Bridge-Singh

ಸೇನೆಗೆ ಸೇತುವೆ ಬಲ ; ಕಾಶ್ಮೀರದ 6 ಸುಸಜ್ಜಿತ ಸೇತುವೆ ರಾಷ್ಟ್ರಕ್ಕೆ ಸಮರ್ಪಣೆ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಸಂದರ್ಶನ: ದೇಶವನ್ನು ಮೊಬೈಲ್‌ ಹ್ಯಾಂಡ್‌ಸೆಟ್‌ ಹಬ್‌ ಆಗಿಸುವ ಗುರಿ

ಸಂದರ್ಶನ: ದೇಶವನ್ನು ಮೊಬೈಲ್‌ ಹ್ಯಾಂಡ್‌ಸೆಟ್‌ ಹಬ್‌ ಆಗಿಸುವ ಗುರಿ

ಪತ್ರ ಬಟವಾಡೆಗೆ 30 ವರ್ಷ ಕಾಡಿನಲ್ಲಿ ನಡೆದ ಶಿವನ್‌

ಪತ್ರ ಬಟವಾಡೆಗೆ 30 ವರ್ಷ ಕಾಡಿನಲ್ಲಿ ನಡೆದ ಶಿವನ್‌

ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಸಿದ್ಧ

ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಸಿದ್ಧ

ಸಮರ್ಪಕ ದಾಸ್ತಾನು ಜಾಲ ಬಲಗೊಳ್ಳಬೇಕು ; ಸರಕಾರ ಏನು ಮಾಡಬೇಕು?

ಸಮರ್ಪಕ ದಾಸ್ತಾನು ಜಾಲ ಬಲಗೊಳ್ಳಬೇಕು ; ಸರಕಾರ ಏನು ಮಾಡಬೇಕು?





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ock-venkatesh

ರಾಕ್‌ಲೈನ್‌ ವೆಂಕಟೇಶ್‌ಗೆ ಕೋವಿಡ್‌ 19 ಸೋಂಕು

ಶ್ರೀ ಕೃಷ್ಣ ಶರ್ಮ ಅವರ ವಿನೂತನ ಪ್ರಯತ್ನ ಪುಟ್ಟಣ್ಣ

ಶ್ರೀ ಕೃಷ್ಣ ಶರ್ಮ ಅವರ ವಿನೂತನ ಪ್ರಯತ್ನ ಪುಟ್ಟಣ್ಣ

bhavana-insta

“ರೋಮಿಯೋ’ ಚಿತ್ರಕ್ಕೆ 8, ನಮ್ಮ ಪ್ರೀತಿಗೆ 9: ಭಾವನಾ ಹೇಳಿದ್ದೇನು?

doddhanna-home

ಕೋವಿಡ್ 19 ಆತಂಕದಿಂದ ಹೋಮ್‌ ಕ್ವಾರಂಟೈನ್ ಆದ ದೊಡ್ಡಣ್ಣ

sudeep-tweet

ಕಿಚ್ಚ ಸುದೀಪ್‌ ಟ್ವೀಟ್‌ಗೆ ಬೆರಗಾದ ಅಭಿಮಾನಿಗಳು!

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani



ಹೊಸ ಸೇರ್ಪಡೆ

ಮಕ್ಕಳಿದ್ದೂ ಅನಾಥೆಯಾದ ತಾಯಿ ; ಸಾಮಾಜಿಕ ಕಾರ್ಯಕರ್ತರಿಂದ ಅಂತ್ಯಕ್ರಿಯೆ

ಮಕ್ಕಳಿದ್ದೂ ಅನಾಥೆಯಾದ ತಾಯಿ ; ಸಾಮಾಜಿಕ ಕಾರ್ಯಕರ್ತರಿಂದ ಅಂತ್ಯಕ್ರಿಯೆ

Covid-19

ಆಯುಷ್ಮಾನ್‌ನಲ್ಲಿ ಕೋವಿಡ್‌ಗೆ ಚಿಕಿತ್ಸೆ

ಕೊಡಂಬೆಟ್ಟು : ಆಶಾ ಕಾರ್ಯಕರ್ತೆಗೆ ಹಲ್ಲೆ

ಕೊಡಂಬೆಟ್ಟು : ಆಶಾ ಕಾರ್ಯಕರ್ತೆಗೆ ಹಲ್ಲೆ

indu-avishvasa

ಇಂದು ತಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ

ra-vasuli

ಕರ ವಸೂಲಿ ಮಾಡಿ ಗ್ರಂಥಾಲಯ ಅಭಿವೃದ್ಧಿಪಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.