Udayavni Special

ಕಬ್ಜ ಚಿತ್ರದಲ್ಲಿ ಸುದೀಪ್‌ ಗೆಟಪ್‌ಗೆ ಫ್ಯಾನ್ಸ್‌ ಫಿದಾ


Team Udayavani, Jan 15, 2021, 3:38 PM IST

ಕಬ್ಜ ಚಿತ್ರದಲ್ಲಿ ಸುದೀಪ್‌ ಗೆಟಪ್‌ಗೆ ಫ್ಯಾನ್ಸ್‌ ಫಿದಾ

ಆರ್‌.ಚಂದ್ರು ನಿರ್ದೇಶನದ “ಕಬ್ಜ’ ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಕನ್ನಡ ಚಿತ್ರರಂಗದಿಂದ ತಯಾರಾಗುತ್ತಿರುವ ಮತ್ತೂಂದು ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ದಿನದಿಂದ ದಿನಕ್ಕೆ ಸಿನಿಮಾಪ್ರೇಮಿಗಳ ಗಮನ ಸೆಳೆಯುತ್ತಿದ್ದ “ಕಬ್ಜ’ಗೆ ಮತ್ತೂಬ್ಬ ಸ್ಟಾರ್‌ ನಟನ ಎಂಟ್ರಿಯಾಗಿರೋದು ನಿಮಗೆ ಗೊತ್ತೇ ಇದೆ. ಅದು ಸುದೀಪ್‌. ಈ ಮೂಲಕ ಸಿನಿಮಾದ ಕ್ರೇಜ್‌ ಕೂಡಾ ದುಪ್ಪಟ್ಟಾಗಿದೆ.

ಸುದೀಪ್‌ “ಕಬ್ಜ’ ಚಿತ್ರಕ್ಕೆ ಎಂಟ್ರಿಕೊಡುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಎದ್ದ ಪ್ರಶ್ನೆ ಎಂದರೆ, ಸುದೀಪ್‌ ಅವರ ಗೆಟಪ್‌ ಹೇಗಿರಬಹುದು ಎಂದು. ಈಗ ನಿರ್ದೇಶಕ, ನಿರ್ಮಾಪಕ ಆರ್‌. ಚಂದ್ರು ಆ ಕುತೂಹಲ ತಣಿಸಿದ್ದಾರೆ. ಸಂಕ್ರಾಂತಿ ದಿನ “ಕಬ್ಜ’ ಚಿತ್ರದಲ್ಲಿನ ಸುದೀಪ್‌ ಅವರ ಗೆಟಪ್‌ನ ಸ್ಕೆಚ್‌ ಬಿಡುಗಡೆ ಮಾಡಿದ್ದಾರೆ. ಸುದೀಪ್‌ ಈ ಹಿಂದೆ ಕಾಣಿಸಿಕೊಳ್ಳದಂತಹ ರೀತಿಯ ಪಾತ್ರ ಇದಾಗಿದ್ದು, ಸ್ಕೆಚ್‌ ನೋಡಿದ ಅಭಿಮಾನಿಗಳ ನಿರೀಕ್ಷೆಯ ಮಟ್ಟ ಹೆಚ್ಚಿದೆ.

ಚಿತ್ರದಲ್ಲಿ ಸುದೀಪ್‌ ಅವರ ಹೇರ್‌ ಸ್ಟೈಲ್‌ನಿಂದ ಹಿಡಿದು ಸಂಪೂರ್ಣ ಲುಕ್‌ ಬದಲಾಗಲಿದೆ. ಚಿತ್ರದಲ್ಲಿ ಸುದೀಪ್‌ ಭಾರ್ಗವ್‌ ಭಕ್ಷಿ ಎಂಬ ಪಾತ್ರದಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದು, 1947ರಿಂದ 1986ರ ಕಾಲಘಟ್ಟದ ಪಾತ್ರವಾ ಗಿದ್ದು, ಮಾಫಿಯಾ ಕೊನೆಗೊಳಿಸಲು ಭಕ್ಷಿ ಹೊರಡುತ್ತಾನೆ ಎಂಬ ಕ್ಯಾಪ್ಶನ್‌ ಅನ್ನು “ಕಬ್ಜ’ ಚಿತ್ರದ ಪೋಸ್ಟರ್‌ನಲ್ಲಿ ನೀಡಲಾಗಿದೆ.

ಈಗಾಗಲೇ ಸುದೀಪ್‌ ಹಾಗೂ ಉಪೇಂದ್ರ “ಮುಕುಂದ ಮುರಾರಿ’ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈಗ “ಕಬ್ಜ’ದಲ್ಲಿ ಮತ್ತೂಮ್ಮೆ ನಟಿಸುತ್ತಿದ್ದಾರೆ. “ಕಬ್ಜ’ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸ್ವತಃ ಸುದೀಪ್‌ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇನ್ನು, ಉಪೇಂದ್ರ ಕೂಡಾ ಸುದೀಪ್‌ ಅವರನ್ನು “ಕಬ್ಜ’ ತಂಡದ ಭಾಗವಾಗುತ್ತಿರುವುದಕ್ಕೆ ಸ್ವಾಗತಿಸಿದ್ದಾರೆ.

ಈ ಚಿತ್ರವನ್ನು ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು ಚಂದ್ರು ಆಸೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ ನಲ್ಲಿ ವಿಶೇಷ ಸೆಟ್ ಗಳನ್ನು ನಿರ್ಮಿಸಿ ಅದರಲ್ಲಿ ಚಿತ್ರೀಕರಣ ಮಾಡಿದ್ದರು. ಅಷ್ಟರಲ್ಲಿ ಲಾಕ್ಡೌನ್‌ ಘೋಷಣೆಯಾಗಿದ್ದರಿಂದ ಚಿತ್ರೀಕರಣ ನಿಂತಿತ್ತು. ಇದೀಗ ಜನವರಿಯ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರವನ್ನು ಆರ್‌ ಚಂದ್ರ, ಶ್ರೀಸಿದ್ಧೇಶ್ವರ ಎಂಟರ್ ಪ್ರೈಸಸ್‌ ಬ್ಯಾನರ್‌ನಡಿ ನಿರ್ಮಿಸುತ್ತಿದ್ದು, ಉಪೇಂದ್ರ ಮತ್ತು ಸುದೀಪ್‌ ಅವರ ಜೊತೆಗೆ ಜಗಪತಿ ಬಾಬು, ರಾಹುಲ್‌, ಅನೂಪ್‌ ರೇವಣ್ಣ, ಜಾನ್‌ ಕೊಕ್ಕಿನ್‌, ರಾಹುಲ್‌ ದೇವ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

ಬಹುನಿರೀಕ್ಷಿತ ಕಬ್ಜ ಚಿತ್ರತಂಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಸೇರ್ಪಡೆಗೊಂಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಆತ್ಮೀಯ ಸುಸ್ವಾಗತ.

ಉಪೇಂದ್ರ, ನಟ

ನಟರಾಗಿ ನಾವೆಲ್ಲರೂ ಒಂದೊಳ್ಳೆಯ ಕಥೆಯನ್ನು ವಿಭಿನ್ನವಾಗಿ ಹೇಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುತ್ತೇವೆ. ಕೆಲವೊಮ್ಮೆ ಬೇರೆಯವರ ಕನಸಿನಲ್ಲಿ ಭಾಗವಾಗುವುದು ಕೂಡಾ ಕುಟುಂಬವನ್ನು ಸೇರಿದಷ್ಟೇ ಖುಷಿ. “ಕಬ್ಜ’ ಚಿತ್ರತಂಡದ ಭಾಗವಾಗುತ್ತಿರುವುದಕ್ಕೆ ಹಾಗೂ ಮತ್ತೂಮ್ಮೆ ಉಪೇಂದ್ರ ಅವರ ಜೊತೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಖುಷಿ ಇದೆ.

ಸುದೀಪ್‌, ನಟ

ಕಬ್ಜ ಚಿತ್ರತಂಡಕ್ಕೆ ಭಾರತದ ಮತ್ತೂಬ್ಬ ಸೂಪರ್‌ ಸ್ಟಾರ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಸೇರ್ಪಡೆಗೊಂಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಸುಸ್ವಾಗತ.

 ಆರ್‌.ಚಂದ್ರು, ನಿರ್ದೇಶಕ, ನಿರ್ಮಾಪಕ

ಟಾಪ್ ನ್ಯೂಸ್

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

Facebook BARS App Launched to Give TikTok-Like Experience to Budding Rappers

ಟಿಕ್ ಟಾಕ್ ಅನುಭವ ನೀಡಲಿದೆ ಫೇಸ್ ಬುಕ್ BARS App..!

Kabja movie

ಉಪ್ಪಿಯ ‘ಕಬ್ಜ’ ಕಣಕ್ಕೆ ಬಾಲಿವುಡ್ ನಟ ಎಂಟ್ರಿ…!

Teen Stabbed By Sister’s Stalkers Near South Delhi, Taken To AIIMS: Cops

ಸಹೋದರಿಯ ರಕ್ಷಣೆಗೆ ನಿಂತವನ ಮೇಲೆ ಪುಂಡರಿಂದ ಹಲ್ಲೆ ..!

ಹೊಸಪೇಟೆ: ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರ ಬರ್ಬರ ಹತ್ಯೆ

ಹೊಸಪೇಟೆ: ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರ ಬರ್ಬರ ಹತ್ಯೆ

ಕೆಆರ್ ಎಸ್ ಡ್ಯಾಂ ಮೇಲೆ ಯುವಕನ ಕಾರುಬಾರು! ಪೊಲೀಸ್ ಜೀಪು ಚಲಾಯಿಸಿದ ಯುವಕ: ವಿಡಿಯೋ ವೈರಲ್

ಕೆಆರ್ ಎಸ್ ಡ್ಯಾಂ ಮೇಲೆ ಯುವಕನ ಕಾರುಬಾರು! ಪೊಲೀಸ್ ಜೀಪು ಚಲಾಯಿಸಿದ ಯುವಕ: ವಿಡಿಯೋ ವೈರಲ್

Jagapati Babu

ನಟರು ತುಂಬಾ ಇದ್ದಾರೆ, ಆದರೆ, ದರ್ಶನ್ ರಿಯಲ್ ಹೀರೋ : ಟಾಲಿವುಡ್ ನಟ ಜಗಪತಿ ಬಾಬುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kabja movie

ಉಪ್ಪಿಯ ‘ಕಬ್ಜ’ ಕಣಕ್ಕೆ ಬಾಲಿವುಡ್ ನಟ ಎಂಟ್ರಿ…!

Jagapati Babu

ನಟರು ತುಂಬಾ ಇದ್ದಾರೆ, ಆದರೆ, ದರ್ಶನ್ ರಿಯಲ್ ಹೀರೋ : ಟಾಲಿವುಡ್ ನಟ ಜಗಪತಿ ಬಾಬು

aditya

‘ಮುಂದುವರೆದ ಅಧ್ಯಾಯ’ ಡೈಲಾಗ್‌ ಟೀಸರ್‌ ರಿಲೀಸ್: ಕ್ರೈಂ ಕಥಾಹಂದರದ ಚಿತ್ರದಲ್ಲಿ ಆದಿತ್ಯ

Pogaru

‘ಪೊಗರು’ ವೀಕ್ಷಿಸಿದ ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಹೇಳಿದ್ದೇನು  ?

ಚಿತ್ರೀಕರಣದಲ್ಲಿ ಬಿಝಿಯಾಗಿದೆ ಪೃಥ್ವಿ, ಮಿಲನಾ ನಾಗರಾಜ್ ರ ‘ಫಾರ್‌ ರಿಜಿಸ್ಟ್ರೇಷನ್‌’

ಚಿತ್ರೀಕರಣದಲ್ಲಿ ಬಿಝಿಯಾಗಿದೆ ಪೃಥ್ವಿ, ಮಿಲನಾ ನಾಗರಾಜ್ ರ ‘ಫಾರ್‌ ರಿಜಿಸ್ಟ್ರೇಷನ್‌’

MUST WATCH

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

ಹೊಸ ಸೇರ್ಪಡೆ

400 ಪಿಎಚ್‌ಸಿ ಮೇಲ್ದರ್ಜೆಗೇರಿಸಲು ಚಿಂತನೆ: ಸಚಿವ

400 ಪಿಎಚ್‌ಸಿ ಮೇಲ್ದರ್ಜೆಗೇರಿಸಲು ಚಿಂತನೆ: ಸಚಿವ

ಮಿತನೀರು ಬಳಸುವ ಕೈಗಾರಿಕೆ ಸ್ಥಾಪನೆಯಾಗಲಿ

ಮಿತನೀರು ಬಳಸುವ ಕೈಗಾರಿಕೆ ಸ್ಥಾಪನೆಯಾಗಲಿ

ಗಡಿ ಭಾಗದಲ್ಲಿ  ಮಾತೃಭಾಷೆ ಉಳಿಸಿ ಬೆಳೆಸಿ

ಗಡಿ ಭಾಗದಲ್ಲಿ ಮಾತೃಭಾಷೆ ಉಳಿಸಿ ಬೆಳೆಸಿ

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್

Facebook BARS App Launched to Give TikTok-Like Experience to Budding Rappers

ಟಿಕ್ ಟಾಕ್ ಅನುಭವ ನೀಡಲಿದೆ ಫೇಸ್ ಬುಕ್ BARS App..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.