Udayavni Special

ಹೊಸ ಚಿತ್ರಕ್ಕೆ ಸುದೀಪ್‌ ರೆಡಿ

ಅನೂಪ್‌ ಭಂಡಾರಿ ನಿರ್ದೇಶನದ ಚಿತ್ರ ಫೆಬ್ರವರಿಗೆ ಶುರು

Team Udayavani, Feb 6, 2020, 7:06 AM IST

Sudeep

ಸುದೀಪ್‌ ಅಭಿನಯದ “ಕೋಟಿಗೊಬ್ಬ 3′ ಚಿತ್ರ ಮುಗಿಸಿದ್ದಾರೆ. ಅತ್ತ, “ಬಿಗ್‌ಬಾಸ್‌’ ಸೀಸನ್‌-7 ರಿಯಾಲಿಟಿ ಶೋ ಕೂಡ ಮುಗಿದಿದೆ. ಸುದೀಪ್‌ ಈಗ ಮುಂದಿನ ಚಿತ್ರದತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೌದು, ಸುದೀಪ್‌ ಮುಂದಿನ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ. ಅಂದಹಾಗೆ, ಸುದೀಪ್‌ ಈಗ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಅನೂಪ್‌ ಭಂಡಾರಿ ನಿರ್ದೇಶನದ ಚಿತ್ರ.

ಈಗಾಗಲೇ ಸುದ್ದಿಯಾಗಿರುವಂತೆ, ಜಾಕ್‌ ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರ ಕೂಡ ಪ್ಯಾನ್‌ ಇಂಡಿಯಾ ಆಗಲಿದೆ. ಅಂದಹಾಗೆ, ಚಿತ್ರದಲ್ಲಿ ನಿರೂಪ್‌ ಭಂಡಾರಿ ನಟಿಸುತ್ತಿದ್ದಾರೆ ಎನ್ನುವುದು ಬಿಟ್ಟರೆ, ಚಿತ್ರದಲ್ಲಿ ಯಾರೆಲ್ಲ ಇರುತಾರೆ, ತಂತ್ರಜ್ಞರು ಯಾರ್ಯಾರು ಎಂಬ ಬಗ್ಗೆ ಅಧಿಕೃತ ಮಾಹಿತಿಯನ್ನು ಸುದೀಪ್‌ ಅವರಿಂದಲೇ ಕೇಳಬೇಕು ಎಂಬುದು ನಿರ್ದೇಶಕ ಅನೂಪ್‌ ಭಂಡಾರಿ ಮಾತು. ಈ ಕುರಿತು ಹೇಳಿಕೊಳ್ಳುವ ಅನೂಪ್‌ ಭಂಡಾರಿ, “ಚಿತ್ರಕ್ಕೆ ಎಲ್ಲಾ ತಯಾರಿ ನಡೆದಿದೆ.

ಇದೇ ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ. ಸದ್ಯಕ್ಕೆ ಹೈದರಾಬಾದ್‌ನಲ್ಲಿ ಸೆಟ್‌ ಹಾಕಿ ಒಂದಷ್ಟು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಉಳಿದದ್ದು ಬೇರೆ ಕಡೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಯಾವ ದಿನದಿಂದ ಚಿತ್ರೀಕರಣ ನಡೆಯಲಿದೆ ಎಂಬುದನ್ನು ಸುದೀಪ್‌ ಅವರ ಜೊತೆ ಚರ್ಚಿಸಿ ಪಕ್ಕಾ ಮಾಡಿಕೊಳ್ಳಲಾಗುವುದು ಸದ್ಯಕ್ಕೆ ಸ್ಕ್ರಿಪ್ಟ್ ಮುಗಿದಿದೆ. ತಾಂತ್ರಿಕ ವರ್ಗ ಸೇರಿದಂತೆ ಇನ್ನಿತರೆ ಕಲಾವಿದರ ಆಯ್ಕೆ ಬಗ್ಗೆಯೂ ಸುದೀಪ್‌ ಅವರೇ ಅನೌನ್ಸ್‌ ಮಾಡಲಿದ್ದಾರೆ.

ಈಗಾಗಲೇ ಚಿತ್ರಕ್ಕೆ “ಫ್ಯಾಂಟಮ್‌’ ಎಂಬ ಹೆಸರಿಡಲಾಗಿದೆ ಎಂಬ ಸುದ್ದಿ ಬಗ್ಗೆ ಹೇಳುವ ಅನೂಪ್‌ ಭಂಡಾರಿ, ಆ ಬಗ್ಗೆಯೂ ಸುದೀಪ್‌ ಅವರೇ ಸ್ಪಷ್ಟಪಡಿಸಲಿದ್ದಾರೆ. ಸದ್ಯಕ್ಕೆ ಚಿತ್ರದ ಮಾಹಿತಿಯನ್ನು ಅವರೇ ಹೇಳಲಿದ್ದಾರೆ. ಇನ್ನು, ನಾಯಕಿ ಸಮಂತಾ ಬರುತ್ತಾರಂತೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಅದರ ಬಗ್ಗೆಯೂ ಇಷ್ಟರಲ್ಲೇ ಮಾಹಿತಿ ಕೊಡುತ್ತೇವೆ. ನಾಯಕಿ ಯಾರಾಗಬೇಕೆಂಬ ಕುರಿತು ಮಾತುಕತೆ ನಡೆಯುತ್ತಿದೆ’ ಎಂದಷ್ಟೇ ಹೇಳುತ್ತಾರೆ ಅನೂಪ್‌ ಭಂಡಾರಿ.

ಇದೇ ಮೊದಲ ಸಲ ಸುದೀಪ್‌ ಅವರಿಗೆ ನಿರ್ದೇಶನ ಮಾಡುತ್ತಿರುವ ಅನೂಪ್‌ ಭಂಡಾರಿ, ಒಳ್ಳೆಯ ಕಥೆ ರೆಡಿಮಾಡಿಕೊಂಡಿದ್ದು, ಹೊಸ ಬಗೆಯ ನಿರೂಪಣೆ ಮೂಲಕ ಸುದೀಪ್‌ ಅಭಿಮಾನಿಗಳು ಸೇರಿದಂತೆ ಕನ್ನಡದ ಬಹುತೇಕ ಸಿನಿಪ್ರೇಮಿಗಳನ್ನು ರಂಜಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅದೇನೆ ಇರಲಿ, ಸುದೀಪ್‌ಗಾಗಿಯೇ ವಿಶೇಷ ಪಾತ್ರ ಕಟ್ಟಿಕೊಟ್ಟಿರುವ ನಿರ್ದೇಶಕರು, ಆ ಪಾತ್ರ ಹೇಗೆಲ್ಲಾ ಇರಲಿದೆ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು ಎನ್ನುತ್ತಾರೆ.

ಟಾಪ್ ನ್ಯೂಸ್

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು

ತಾಲೂಕು ಕೇಂದ್ರವಾದರೂ ಕಡಬಕ್ಕಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ

ತಾಲೂಕು ಕೇಂದ್ರವಾದರೂ ಕಡಬಕ್ಕಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೆಬ್‌ ಸೀರಿಸ್‌ ಆಯ್ತು ‘ನಮ್ಮ ಊರಿನ ರಸಿಕರು’

ವೆಬ್‌ ಸೀರಿಸ್‌ ಆಯ್ತು ‘ನಮ್ಮ ಊರಿನ ರಸಿಕರು’

only-Kannada

ಕನ್ನಡಕ್ಕಾಗಿ ‘ಓನ್ಲಿ ಕನ್ನಡ’:  ಹೊಸ ಓಟಿಟಿ ವೇದಿಕೆ

14

ಕನ್ನಡದ ಹಿರಿಯ ನಟ ಶಂಕರ್ ರಾವ್ ವಿಧಿವಶ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ಸರ್ದಾರ್‌ ಪಟೇಲರ ಬಗ್ಗೆ ಕೈ ಆಕ್ಷೇಪಾರ್ಹ ಮಾತು

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ದೀಪಾವಳಿಗೆ ಬೇರೆ ಹೆಸರಿಟ್ಟ ಫ್ಯಾಬ್‌ಇಂಡಿಯಾ!

ಬಿಪಿಎಲ್‌ ಎಪಿಎಲ್‌ ಆದಾಗ ಹಲವರಿಗೆ ಪಿಂಚಣಿ ಸೌಲಭ್ಯ ಸ್ಥಗಿತ!

ಬಿಪಿಎಲ್‌ ಎಪಿಎಲ್‌ ಆದಾಗ ಹಲವರಿಗೆ ಪಿಂಚಣಿ ಸೌಲಭ್ಯ ಸ್ಥಗಿತ!

ಕೋಡಿ: ಹೈಮಾಸ್ಟ್‌ ವಿದ್ಯುತ್‌ ದೀಪವೇ ಪರಿಹಾರ

ಕೋಡಿ: ಹೈಮಾಸ್ಟ್‌ ವಿದ್ಯುತ್‌ ದೀಪವೇ ಪರಿಹಾರ

ದುರಸ್ತಿಯಾಯಿತು ರಸ್ತೆ, ಬೆಳಗಿತು ದೀಪ

ದುರಸ್ತಿಯಾಯಿತು ರಸ್ತೆ, ಬೆಳಗಿತು ದೀಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.