ಲವ್‌ ಮಾಕ್ಟೇಲ್‌ ಮೊದಲ ಟಿಕೆಟ್‌ಗೆ ಕಿಚ್ಚ ಸ್ಪರ್ಶ

Team Udayavani, Jan 19, 2020, 7:02 AM IST

ಮದರಂಗಿ ಕೃಷ್ಣ ಚೊಚ್ಚಲ ಬಾರಿಗೆ ನಿರ್ದೇಶಿಸಿ, ನಾಯಕ ನಟನಾಗಿ ಕಾಣಿಸಿಕೊಂಡಿರುವ “ಲವ್‌ ಮಾಕ್ಟೇಲ್‌’ ಚಿತ್ರದ ಮೊದಲ ಟಿಕೆಟ್‌ ಅನ್ನು ನಟ ಕಿಚ್ಚ ಸುದೀಪ್‌ ಖರೀದಿಸಲಿದ್ದಾರೆ. ಹೌದು, ಆರಂಭದಿಂದಲೂ “ಲವ್‌ ಮಾಕ್ಟೇಲ್‌’ ಚಿತ್ರ ತಂಡಕ್ಕೆ ಸಾಥ್‌ ನೀಡುತ್ತ ಬಂದಿರುವ ಸುದೀಪ್‌, ಚಿತ್ರದ ಟ್ರೇಲರ್‌ಗೂ ತಮ್ಮ ಧ್ವನಿ ನೀಡುವ ಮೂಲಕ ಮದರಂಗಿ ಕೃಷ್ಣ ಆ್ಯಂಡ್‌ ಟೀಮ್‌ಗೆ ಬೆನ್ನುತಟ್ಟಿದ್ದರು. ಇದೀಗ “ಲವ್‌ ಮಾಕ್ಟೇಲ್‌’ ಚಿತ್ರದ ಮೊದಲ ಟಿಕೆಟ್‌ ಅನ್ನು ಕೂಡ ತಾನೇ ಖರೀದಿಸುವುದಾಗಿ ಸುದೀಪ್‌ ಘೋಷಿಸಿದ್ದಾರೆ.

ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ, ತೆರೆಗೆ ಬರಲು ತಯಾರಿ ನಡೆಸುತ್ತಿರುವ “ಲವ್‌ ಮಾಕ್ಟೇಲ್‌’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋವನ್ನು ಅದ್ಧೂರಿಯಾಗಿ ಹೊರತಂದಿದೆ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿಚ್ಚ ಸುದೀಪ್‌ ಹಾಡುಗಳನ್ನು ಬಿಡುಗಡೆಗೊಳಿಸಿ, ಚಿತ್ರದ ಮೊದಲ ಟಿಕೆಟ್‌ ಅನ್ನು ಕೂಡ ತಾನೇ ಖರೀದಿಸುವುದಾಗಿ ಘೋಷಿಸಿದ್ದಾರೆ. “ಕೃಷ್ಣ ನನ್ನ ಸೋದರನಿದ್ದಂತೆ. ಎಲ್ಲದಕ್ಕಿಂತ ಹೆಚ್ಚಾಗಿ ಒಳ್ಳೆಯ ಮನಸ್ಸಿನ ಹುಡುಗ.

ಸಿನಿಮಾದದಲ್ಲಿ ಏನಾದ್ರೂ ಸಾಧಿಸಬೇಕೆಂಬ ಛಲ ಅವರಲ್ಲಿದೆ. ಸಿನಿಮಾದ ಕಡೆಗೆ ಅವರಿಗಿರುವ ಪ್ಯಾಷನ್‌ ನನಗೆ ಇಷ್ಟವಾಯ್ತು. ಒಂದೊಳ್ಳೆಯ ಸಿನಿಮಾ ಮಾಡಿದ್ದಾರೆ ಅನ್ನೋ ನಂಬಿಕೆ ನನಗಿದೆ. ಟ್ರೇಲರ್‌, ಹಾಡುಗಳು ಎಲ್ಲವೂ ಪ್ರಾಮಿಸಿಂಗ್‌ ಆಗಿದೆ’ ಎಂದಿರುವ ಸುದೀಪ್‌, “ಒಂದು ಒಳ್ಳೆಯ ಸಿನಿಮಾ ಮಾಡೋದಷ್ಟೆ ನಮ್ಮ ಕೆಲಸ. ಅದರ ಗೆಲುವು-ಸೋಲು ಯಾವುದು ನಮ್ಮ ಕೈಯಲ್ಲಿ ಇಲ್ಲ. ಜನರಿಗೆ ಇಷ್ಟವಾದ್ರೆ, ಜನ ಇಷ್ಟಪಟ್ಟರೆ ಸಿನಿಮಾ ಖಂಡಿತಯ ಗೆಲ್ಲುತ್ತದೆ. ಇಡೀ ಸಿನಿಮಾ ಟೀಮ್‌ಗೆ ಒಳ್ಳೆಯದಾಗಲಿ’ ಎಂದು “ಲವ್‌ ಮಾಕ್ಟೇಲ್‌’ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ

  • ಯಾವುದೇ ಸಾಧಕರನ್ನು ಯಶಸ್ಸನ್ನು ಗಮನಿಸಿ ನೋಡಿ. ಪರಿಶ್ರಮ, ಏಕಾಗ್ರತೆ ಜತೆಗೆ ಅವರು ಸಮಯವನ್ನು ಸದುಪಯೋಗಿಸಿಕೊಂಡಿರುವುದು ಸಾಧನೆಗೆ ಮುಖ್ಯ ಕಾರಣವಾಗಿರುತ್ತದೆ....

  • ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ...

  • ವರ್ಷಗಳ ಹಿಂದೆ ಪ್ರಮುಖ ಬ್ಯಾಂಕ್‌ಗಳ ಹಲವಾರು ಗ್ರಾಹಕರು ಎಟಿಎಂನಲ್ಲಿ ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಂಡ ಕುರಿತು ವರದಿಯಾಗಿತ್ತು. ತನಿಖೆ ನಡೆಸಿದಾಗ...

  • ಕಂಬದ ಮೇಲೆ ತೊಲೆಗಳು ಬರುವುದು ಎಲ್ಲೆಡೆ ಕಂಡುಬರುವ ಸಾಮಾನ್ಯ ಸಂಗತಿ. ಆದರೆ, ತೊಲೆಗಳ ಮೇಲೆ ಕಂಬಗಳನ್ನು ಹೊರಿಸಬೇಕು ಎಂದರೆ ಸ್ವಲ್ಪ ಹುಷಾರಾಗಿ ಮುಂದುವರಿಯಬೇಕಾಗುತ್ತದೆ....

  • 26 ಡಿಸೆಂಬರ್‌ 2019ರಂದು ರಾಜಸ್ಥಾನದ ಬಾರ್ಮೆರಿನ ರೈತ ಜುಗ್ತಾ ರಾಮ್‌ ಆಕಾಶದಲ್ಲಿ ಮಿಡತೆಗಳ ಬೃಹತ್‌ ಸೈನ್ಯ ಕಂಡು ಬೆಕ್ಕಸ ಬೆರಗಾದ. ಅದು ಲಕ್ಷಾಂತರ ಮಿಡತೆಗಳ ಹಿಂಡು....