ಉಪೇಂದ್ರ ಅಭಿನಯದ ಕಬ್ಜ ಚಿತ್ರದ ವಿಶೇಷ ಪಾತ್ರದಲ್ಲಿ ಸುದೀಪ್
Team Udayavani, Jan 13, 2021, 7:45 AM IST
ಆರ್. ಚಂದ್ರ ನಿರ್ದೇಶನದ ‘ಕಬ್ಜ’ ಚಿತ್ರದಿಂದ ಒಂದು ಭರ್ಜರಿ ಸುದ್ದಿ ಬಂದಿದೆ. ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಸುದೀಪ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.ಈ ಸಂಕ್ರಾಂತಿಗೆ ಒಂದು ಭರ್ಜರಿ ಸುದ್ದಿ ಕೊಡುವು ದಾಗಿ ಆರ್. ಚಂದ್ರು ಘೋಷಿಸಿದ್ದರು.
ಈ ಬಾರಿ ನಾಯಕಿಯ ಘೋಷಣೆ ಯಾಗಲಿದೆ, ಪರಭಾಷೆಯ ದೊಡ್ಡ ನಟರೊಬ್ಬರು ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹರಿದಾಡುತ್ತಿರುವಾಗಲೇ, ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವ ಸುದ್ದಿ ಬಂದಿದೆ.
ಸದ್ಯಕ್ಕೆ ಸುದೀಪ್ ಅವರ ಪಾತ್ರವೇನು ಮತ್ತು ಅವರ ಗೆಟಪ್ ಹೇಗಿರುತ್ತದೆ ಎಂಬುದನ್ನು ಚಂದ್ರು ಬಹಿರಂಗಪಡಿಸಿಲ್ಲ. ಮುಂಚೆ ನಿಗದಿಯಾದಂತೆ ಸಂಕ್ರಾಂತಿ ಹಬ್ಬದಂದು (ಗುರುವಾರ) ಸುದೀಪ್ ಅವರ ಲುಕ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಆರ್. ಚಂದ್ರು ಅವರ ಮಹತ್ವಾಕಾಂಕ್ಷೆಯ ಚಿತ್ರವಾದ ‘ಕಬ್ಜ’, ಕಳೆದ ವರ್ಷದ ಆರಂಭದಲ್ಲೇ ಪ್ರಾರಂಭವಾಗಿತ್ತು. ಕನ್ನಡವಷ್ಟೇ ಅಲ್ಲ ಆಂಧ್ರದಲ್ಲೂ ತೆಲುಗು ಅವತರಣಿಕೆಯ ಮುಹೂರ್ತವಾಗಿತ್ತು. ಈ ಚಿತ್ರವನ್ನು ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು ಚಂದ್ರು ಆಸೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ವಿಶೇಷ ಸೆಟ್‌ಗಳನ್ನು ನಿರ್ಮಿಸಿ ಅದರಲ್ಲಿ ಚಿತ್ರೀಕರಣ ಮಾಡಿದ್ದರು. ಅಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಚಿತ್ರೀಕರಣ ನಿಂತಿತ್ತು. ಇದೀಗ ಜನವರಿಯ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
‘ಕಬ್ಜ’ ಚಿತ್ರವನ್ನು ಆರ್ ಚಂದ್ರ, ಶ್ರೀ ಸಿದ್ಧೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್‌ನಡಿ ನಿರ್ಮಿಸುತ್ತಿದ್ದು, ಉಪೇಂದ್ರ ಮತ್ತು ಸುದೀಪ್ ಅವರ ಜೊತೆಗೆ ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್ ರಾವ್ ಮುಂತಾದವರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444