ಸುಂದ್ರಿ ಸುಮನ್‌ ಹೇಳಿದ “ದಂಡುಪಾಳ್ಯ’ ಕಥೆ

ನ.1 ರಂದು ಚಿತ್ರ ತೆರೆಗೆ

Team Udayavani, Oct 29, 2019, 3:03 AM IST

Suman-Ranganath

“ನಾನು ಈ ಹಿಂದೆ ಯಾವತ್ತೂ ಈ ಥರದ ಕ್ಯಾರೆಕ್ಟರ್‌ ಮಾಡಿಲ್ಲ. ಆದ್ರೆ ಚಿತ್ರದ ಸ್ಟೋರಿ ಮತ್ತು ಅದರಲ್ಲಿ ಬರುವ ಕ್ಯಾರೆಕ್ಟರ್‌ ಕೇಳಿದ ಮೇಲೆ ಮಾಡೋದಕ್ಕೆ ಒಪ್ಪಿಕೊಂಡೆ. ನಾನೊಬ್ಬಳು ಆರ್ಟಿಸ್ಟ್‌ ಆಗಿ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಚಿತ್ರ ನೋಡಿದವರಿಗೆ ನನ್ನ ಕ್ಯಾರೆಕ್ಟರ್‌ ಇಷ್ಟವಾಗುತ್ತೆ ಅನ್ನೋದು ನನ್ನ ನಂಬಿಕೆ. ಅದರಿಂದಾಚೆಗೆ ನನ್ನ ಆ್ಯಕ್ಟಿಂಗ್‌ ಬಗ್ಗೆ ಬರುವ ಎಲ್ಲ ಕಾಮೆಂಟ್‌ಗಳನ್ನ ಮುಕ್ತವಾಗಿ ಸ್ವೀಕರಿಸುತ್ತೇನೆ’ ಇದು ಕನ್ನಡದ ಚಿರ ಯೌವನೆ ಖ್ಯಾತಿಯ ನಟಿ ಸುಮನ್‌ ರಂಗನಾಥ್‌ ಅವರ ಮಾತು.

ಅಂದಹಾಗೆ, ಸುಮನ್‌ ರಂಗನಾಥ್‌ ಈ ಮಾತು ಹೇಳಲು ಕಾರಣ ಅವರ ಮುಂಬರುವ “ದಂಡುಪಾಳ್ಯಂ-4′ ಚಿತ್ರ. ಇಲ್ಲಿಯವರೆಗೆ ಗ್ಲಾಮರಸ್‌ ಲುಕ್‌ನಲ್ಲಿ ಕನ್ನಡ ಸಿನಿಪ್ರಿಯರ ಮನಗೆದ್ದಿರುವ ಸುಮನ್‌ ರಂಗನಾಥ್‌ ಮೊದಲ ಬಾರಿಗೆ “ದಂಡುಪಾಳ್ಯಂ-4′ ಚಿತ್ರದಲ್ಲಿ ಡಿ-ಗ್ಲಾಮರಸ್‌ ಲುಕ್‌ನಲ್ಲಿ ಸುಂದ್ರಿ ಎನ್ನುವ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮನ್‌ ಈ ಥರ ಕಾಣೋದಕ್ಕೆ ಕಾರಣವಾಗಿದ್ದು, “ದಂಡುಪಾಳ್ಯಂ-4′ ಚಿತ್ರದ ಕಥೆ ಮತ್ತು ಅದರಲ್ಲಿ ಬರುವ ಸುಂದ್ರಿ ಪಾತ್ರವಂತೆ.

“ನಾನು ಇಲ್ಲಿಯವರೆಗೆ ಮಾಡಿರುವ ಎಲ್ಲ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಈ ಚಿತ್ರದಲ್ಲಿದೆ. ಇಲ್ಲಿಯವರೆಗಿನ ನನ್ನ ಸಿನಿಮಾ ಕೆರಿಯರ್‌ನಲ್ಲಿ ಇಂಥದ್ದೊಂದು ಪಾತ್ರ ಸಿಕ್ಕಿದ್ದು ಬಹುಶಃ ಇದೇ ಮೊದಲು. ಇದರಲ್ಲಿ ನನ್ನ ಪಾತ್ರದ ಹೆಸರು ಸುಂದ್ರಿ ಅಂತ. ಹಾಗಂತ ಚಿತ್ರದಲ್ಲಿ ನಾನೆಲ್ಲೂ ಸುಂದರವಾಗಿ ಕಾಣಿಸಿಕೊಳ್ಳೋದೆ ಇಲ್ಲ. ತುಂಬ ರಫ್ ಆ್ಯಂಡ್‌ ಟಪ್‌ ಆಗಿರುವ ಪಾತ್ರವದು. ಎಲ್ಲೆಂದರಲ್ಲಿ ಮಲಗುವ, ಎಲ್ಲೆಂದರಲ್ಲಿ ಊಟ ಮಾಡುವ, ಬೀಡಿ ಸೇದುವ, ತಂಬಾಕು ಹಾಕುವ, ತನಗೆ ಬೇಕಾದಂತೆ ಇರುವ, ಯಾರಿಗೂ ಕೇರ್‌ ಮಾಡದ ಕ್ಯಾರೆಕ್ಟರ್‌ ಅವಳದ್ದು.

ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ ನಮ್ಮಸುತ್ತ ಮುತ್ತ ಎಲ್ಲೂ ನೋಡೋದಕ್ಕೆ ಸಿಗದಂಥ ವಿಚಿತ್ರ ಸ್ವಭಾವದವಳು ಅವಳು. ಇಂಥ ಪಾತ್ರಗಳು ನಿರ್ವಹಿಸುವುದು ಅಂದ್ರೆ ಕಲಾವಿದರಿಗೆ ಯಾವಾಗಲೂ ತುಂಬ ಚಾಲೆಂಜಿಂಗ್‌ ಆಗಿರುತ್ತೆ. ಆರಂಭದಲ್ಲಿ ನನಗೂ ಸ್ವಲ್ಪ ಕಷ್ಟ ಅನಿಸಿತು. ಕೊನೆಗೆ ಒಂದಷ್ಟು ಸಮಯ ತೆಗೆದುಕೊಂಡು ಪ್ರಿಪರೇಷನ್‌ ಮಾಡಿಕೊಂಡು ಅಭಿನಯಿಸಿದೆ’ ಎನ್ನುತ್ತಾರೆ ಸುಮನ್‌ ರಂಗನಾಥ್‌.

ಇನ್ನೊಂದು ವಿಷಯ ಅಂದ್ರೆ, ಸುಮನ್‌ ರಂಗನಾಥ್‌ ಈ ಹಿಂದೆ ಬಂದಿರುವ “ದಂಡುಪಾಳ್ಯ’ ಸರಣಿಯ ಯಾವ ಚಿತ್ರಗಳಲ್ಲೂ ಇಲ್ಲಿಯವರೆಗೂ ನೋಡಿಲ್ಲವಂತೆ! “ಕಾರಣಾಂತರಗಳಿಂದ ಈ ಹಿಂದಿನ ದಂಡುಪಾಳ್ಯ ಸೀರಿಸ್‌ ಸಿನಿಮಾಗಳನ್ನು ನೋಡಲು ಆಗಿರಲಿಲ್ಲ. ಇದೇ ಸೀರಿಸ್‌ನಲ್ಲಿ ನಾನೂ ಕೂಡ ಅಭಿನಯಿಸುತ್ತೇನೆ ಅಂತಾನೂ ಅಂದುಕೊಂಡಿರಲಿಲ್ಲ. ಮೊದಲಿಗೆ ಈ ಚಿತ್ರದಲ್ಲಿ ಇಂಥದ್ದೊಂದು ಕ್ಯಾರೆಕ್ಟರ್‌ ಮಾಡೋದಕ್ಕೆ ಆಫ‌ರ್‌ ಬಂದಾಗ ಶಾಕ್‌ ಆಗಿದ್ದೆ.

ಆಮೇಲೆ ದಂಡುಪಾಳ್ಯ ಹಿಂದಿನ ಸಿನಿಮಾಗಳನ್ನು ನೋಡೋಣವೆಂದರೆ, ಆ ಸಿನಿಮಾಗಳು ನಾನು ಮಾಡುವ ಈ ಸೀರಿಸ್‌ನ ಕ್ಯಾರೆಕ್ಟರ್‌ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ನೋಡಲಿಲ್ಲ. ಒಟ್ಟಾರೆ ಈ ಚಿತ್ರದ ಸ್ಟೋರಿ ಮತ್ತು ಕ್ಯಾರೆಕ್ಟರ್‌ ನನ್ನನ್ನು ಒಂದಷ್ಟು ಸಮಯ ಕಾಡಿದ್ದು, ಡಿಸ್ಟರ್ಬ್ ಮಾಡಿದ್ದಂತೂ ಸುಳ್ಳಲ್ಲ’ ಎಂದು ವಿವರಣೆ ಕೊಡುತ್ತಾರೆ ಸುಮನ್‌ ರಂಗನಾಥ್‌. ಸದ್ಯ “ದಂಡುಪಾಳ್ಯಂ-4′ ಚಿತ್ರ ಇದೇ ನವೆಂಬರ್‌ ಮೊದಲ ವಾರ ತೆರೆಗೆ ಬರುತ್ತಿದೆ.

ಈಗಾಗಲೇ ಬಿಡುಗಡೆಯಾಗಿರುವ “ದಂಡುಪಾಳ್ಯಂ-4′ ಹಾಡುಗಳು ಮತ್ತು ಟ್ರೇಲರ್‌ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿವೆ. ಇನ್ನು “ದಂಡುಪಾಳ್ಯಂ-4’ನಲ್ಲಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಸುಮನ್‌ ರಂಗನಾಥ್‌ ಬಗ್ಗೆಯೂ ಪ್ರೇಕ್ಷಕರು ಒಂದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇಲ್ಲಿಯವರೆಗೆ ಸುಂದರಿಯಾಗಿ ತೆರೆಮೇಲೆ ಮಿಂಚಿರುವ ಸುಮನ್‌ ರಂಗನಾಥ್‌, ಈಗ ಸುಂದ್ರಿ ಪಾತ್ರದಲ್ಲಿ ಹೇಗೆ ಮಿಂಚಲಿದ್ದಾರೆ ಅನ್ನೋದು ಶೀಘ್ರದಲ್ಲಿಯೇ ಗೊತ್ತಾಗಲಿದೆ.

ಅಂದಹಾಗೆ, ಚಿತ್ರ ನವೆಂಬರ್‌ 1 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಹೇಳುವಂತೆ ಒಟ್ಟು ಹತ್ತು ಭಾಷೆಗಳಲ್ಲಿ ತೆರೆಕಾಣುತ್ತಿದೆಯಂತೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಭೋಜ್‌ಪುರಿ, ಗುಜರಾತಿ, ಬಂಗಾಳಿ, ಮರಾಠಿ … ಹೀಗೆ ಒಟ್ಟು 10 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಿದೆಯಂತೆ ಚಿತ್ರತಂಡ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.