ಕಿಚ್ಚನಿಗೆ ಸುನೀಲ್ ಶೆಟ್ಟಿ ಸಾಥ್
ಹೊರಬಿತ್ತು ಪೈಲ್ವಾನ್ ಚಿತ್ರ ಮತ್ತೂಂದು ಪೋಸ್ಟರ್
Team Udayavani, May 23, 2019, 4:50 PM IST
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಯಾವಾಗ ತೆರೆಗೆ ಬರಬಹುದು ಎಂಬ ಲೆಕ್ಕಚಾರದಲ್ಲಿ ಸುದೀಪ್ ಅಭಿಮಾನಿಗಳಿದ್ದಾರೆ. ಮತ್ತೂಂದೆಡೆ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿ ಮಾಡುವಂತೆ ಪೈಲ್ವಾನ್ ಚಿತ್ರತಂಡ ಕೂಡ ಒಂದರ ಹಿಂದೊಂದು ಸರ್ಪ್ರೈಸ್ ಸುದ್ದಿಗಳನ್ನು ನೀಡುತ್ತಿದೆ. ಈಗ ಚಿತ್ರತಂಡ ಮತ್ತೂಂದು ಸರ್ಪ್ರೈಸ್ ನೀಡಿದೆ. ಅದು ಸುನೀಲ್ ಶೆಟ್ಟಿ.
ಹೌದು, ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಜೊತೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಗಿದ್ದರೂ, ಚಿತ್ರದಲ್ಲಿ ಅವರ ಪಾತ್ರವೇನು, ಗೆಟಪ್ ಹೇಗಿರಲಿದೆ ಎಂಬ ಯಾವ ಮಾಹಿತಿಯೂ ಹೊರಬಿದ್ದಿರಲಿಲ್ಲ. ಇಲ್ಲಿಯವರೆಗೆ ಸುನೀಲ್ ಶೆಟ್ಟಿ ಅವರ ಗೆಟಪ್ ಬಗ್ಗೆ ಎಲ್ಲೂ ಮಾಹಿತಿ ಬಿಟ್ಟುಕೊಡದ ಚಿತ್ರತಂಡ, ಇದೀಗ ಪೈಲ್ವಾನ್ ಪ್ರಮೋಶನ್ ಭಾಗವಾಗಿ ಚಿತ್ರದಲ್ಲಿ ಸುನೀಲ್ ಶೆಟ್ಟಿ ಅವರ ಫಸ್ಟ್ಲುಕ್ ಅನ್ನು ಬಿಡುಗಡೆಗೊಳಿಸಿದೆ. ಇನ್ನು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುನೀಲ್ ಶೆಟ್ಟಿ ಅವರ ಹೊಸಲುಕ್ ಫೋಟೋವನ್ನು ಶೇರ್ ಮಾಡಿದ್ದು, ಚಿತ್ರತಂಡದ ಪರವಾಗಿ ಸುನೀಲ್ ಸ್ವಾಗತ ಕೋರಿದ್ದಾರೆ.