ಸುರೇಶ್‌ ಹೆಬ್ಳೀಕರ್‌ ಆನ್‌ಲೈನ್‌ ಹ್ಯಾಕ್‌

ಸ್ನೇಹಿತರಿಗೆ ಹಣದ ಬೇಡಿಕೆ ಇಟ್ಟ ವಂಚಕರು

Team Udayavani, Aug 21, 2019, 3:00 AM IST

ಆನ್‌ಲೈನ್‌ನಲ್ಲಿ ಆಗಾಗ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಸೆಲೆಬ್ರಿಟಿಗಳ ಹೆಸರಲ್ಲಿ ಹಲವು ಪ್ರಕರಣಗಳು ನಡೆದಿರುವುದುಂಟು. ಈಗ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಸುರೇಶ್‌ ಹೆಬ್ಳೀಕರ್‌ ಅವರಿಗೂ ಅಂಥದ್ದೊಂದು ಘಟನೆ ಅಚ್ಚರಿ ಮೂಡಿಸಿದೆ.

ಅಷ್ಟಕ್ಕೂ ಏನಿದು ಪ್ರಕರಣ: ವಿಷಯವಿಷ್ಟೇ, ಹಿರಿಯ ನಟ ಮತ್ತು ನಿರ್ದೇಶಕ ಸುರೇಶ್‌ ಹೆಬ್ಳೀಕರ್‌ ಹೆಸರಿನಲ್ಲಿ ಹಣ ಕೇಳಲಾಗುತ್ತಿದೆ ಎಂಬುದೇ ಈ ಸುದ್ದಿಯ ವಿಶೇಷ. ಹೌದು, ಸುರೇಶ್‌ ಹೆಬ್ಳೀಕರ್‌ ಹೆಸರಲ್ಲಿ ಅವರ ಗೆಳೆಯರ ಹಾಗೂ ಹಿತೈಷಿಗಳ ಬಳಿ ಹಣ ಕೇಳಲಾಗುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಹೌದು, ಫೇಸ್‌ಬುಕ್‌, ಇಮೇಲ್‌ ಮೂಲಕ ಸುರೇಶ್‌ ಅವರ ಕಾಂಟ್ಯಾಕ್ಟ್‌ನಲ್ಲಿರುವ ಜನರಿಗೆಲ್ಲ ಸಂದೇಶಗಳನ್ನು ಕಳುಹಿಸಿ, ಹಣ ಕೊಡಿ ಎಂದು ಕೇಳಲಾಗುತ್ತಿದೆ.

ಈ ವಿಷಯ ಸ್ವತಃ ಸುರೇಶ್‌ ಹೆಬ್ಳೀಕರ್‌ ಅವರಿಗೆ ಗೊತ್ತಾಗುತ್ತಿದ್ದಂತೆಯೇ ಅವರು, ತಮ್ಮ ವಾಟ್ಸಾಪ್‌ ಮೂಲಕ ಸಂದೇಶ ಕಳುಹಿಸಿ, “ಯಾರೋ ನನ್ನ ಜಿ ಮೆಲ್‌, ರೆಡಿಫ್ ಅಕೌಂಟ್‌ ಹ್ಯಾಕ್‌ ಮಾಡಿದ್ದಾರೆ. ಆ ಮೂಲಕ ನನ್ನ ಕಾಂಟ್ಯಾಕ್ಟ್‌ನಲ್ಲಿರುವ ಜನರಿಗೆಲ್ಲ ಹಣ ಕೊಡಿ ಎಂದು ಸಂದೇಶ ಕಳುಹಿಸಿದ್ದಾರೆ. ಇಂಥದ್ದೊಂದು ಸಂದೇಶ ನನ್ನ ಪರಿಚಯದವರಿಗೆ, ಗೆಳೆಯರಿಗೆಲ್ಲಾ ಹೋಗಿದೆ. ನನ್ನ ಆಕೌಂಟ್‌ ಹ್ಯಾಕ್‌ ಆಗಿರುವುದರಿಂದ. ಎಲ್ಲರೂ ಆ ರೀತಿಯ ಸಂದೇಶ ಬಂದರೆ, ನಿರ್ಲಕ್ಷಿಸಿ’ ಎಂದು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ