ಲಹರಿ ತೆಕ್ಕೆಗೆ “ಸೈರಾ ನರಸಿಂಹರೆಡ್ಡಿ’

ಎಲ್ಲಾ ಭಾಷೆಯ ಹಾಡಿನ ಹಕ್ಕು ಖರೀದಿಸಿದ ವೇಲು

Team Udayavani, Sep 14, 2019, 3:01 AM IST

syera

ಲಹರಿ ಆಡಿಯೋ ಸಂಸ್ಥೆ ಇದುವರೆಗೆ ಕನ್ನಡ ಸೇರಿದಂತೆ ಪರಭಾಷೆಯ ಬಿಗ್‌ಬಜೆಟ್‌ ಸಿನಿಮಾಗಳ ಆಡಿಯೋ ಹಕ್ಕು ಖರೀದಿಸಿರುವುದು ಗೊತ್ತೇ ಇದೆ. ಈಗ ತೆಲುಗಿನ ಬಹುನಿರೀಕ್ಷಿತ ಚಿತ್ರ ಚಿರಂಜೀವಿ ಅಭಿನಯದ “ಸೈರಾ ನರಸಿಂಹರೆಡ್ಡಿ’ ಚಿತ್ರ ಹೊಸ ಸೇರ್ಪಡೆ. ಹೌದು, ಈ ಚಿತ್ರದ ಎಲ್ಲಾ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಆಡಿಯೋ ಸಂಸ್ಥೆ ಪಡೆದುಕೊಂಡಿದೆ ಎಂಬುದು ವಿಶೇಷ. ಈ ಬಗ್ಗೆ ಸ್ವತಃ ಲಹರಿ ಆಡಿಯೋ ಸಂಸ್ಥೆಯ ಮುಖ್ಯಸ್ಥ ವೇಲು ಸ್ಪಷ್ಟಪಡಿಸಿದ್ದಾರೆ.

“ಸೌತ್‌ ಇಂಡಿಯಾದಲ್ಲಿ ಬಹುತೇಕ ದೊಡ್ಡ ಬಜೆಟ್‌ನ ಸಿನಿಮಾಗಳ ಆಡಿಯೋ ಹಕ್ಕು ಪಡೆದ ಹೆಮ್ಮೆ ನಮ್ಮ ಲಹರಿ ಸಂಸ್ಥೆಯದ್ದು. ಈಗಾಗಲೇ “ಬಾಹುಬಲಿ’, “ಬಾಹುಬಲಿ-2′, “ಎಂಟಿಆರ್‌ ಬಯೋಪಿಕ್‌’,”ವಿಶ್ವಾಸಂ’,”ಕೆಜಿಎಫ್’, “ಕುರುಕ್ಷೇತ್ರ’, “ಪೈಲ್ವಾನ್‌’ ಹೀಗೆ ಬಿಗ್‌ಬಜೆಟ್‌ ಸಿನಿಮಾಗಳ ಹಾಡುಗಳು ನಮ್ಮ ಲಹರಿ ಸಂಸ್ಥೆಯ ಮೂಲಕ ಬಿಡುಗಡೆಯಾಗಿವೆ. ಈಗ “ಸೈರಾ’ ಚಿತ್ರದ ಹಾಡುಗಳು ಕೂಡ ನಮ್ಮ ಸಂಸ್ಥೆಯಲ್ಲೇ ಬಿಡುಗಡೆಯಾಗಲಿವೆ. ಬಿಗ್‌ಬಜೆಟ್‌ನಲ್ಲೇ ಈ ಚಿತ್ರದ ಆಡಿಯೋ ಹಕ್ಕು ಪಡೆದಿದ್ದು, ಇಷ್ಟರಲ್ಲೇ ಆಡಿಯೋ ಬಿಡುಗಡೆ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸುವುದಾಗಿ’ ಹೇಳುತ್ತಾರೆ ಲಹರಿ ವೇಲು.

ಅಂದಹಾಗೆ, ಈ ಚಿತ್ರದಲ್ಲಿ ಚಿರಂಜೀವಿ ಅವರು “ಸೈರಾ ನರಸಿಂಹರೆಡ್ಡಿ’ಯಾಗಿ ಕಾಣಿಸಿಕೊಂಡರೆ, ಬಾಲಿವುಡ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ ಕೂಡ ಅವರ ಗುರು ಗೋಸಾಯಿ ವೆಂಕಣ್ಣ ಪಾತ್ರ ನಿರ್ವಹಿಸಿದ್ದಾರೆ. ಇನ್ನು, ಕನ್ನಡದ ನಟ ಸುದೀಪ್‌ ಕೂಡ ಅವುಕು ರಾಜು ಎಂಬ ಪಾತ್ರ ಮಾಡಿದ್ದಾರೆ. ಉಳಿದಂತೆ ಸಿದ್ದಮ್ಮಳಾಗಿ ನಯನಾತಾರಾ, ಲಕ್ಷ್ಮಿಯಾಗಿ ತಮನ್ನಾ, ರಾಜಪಾಂಡಿ ಪಾತ್ರದಲ್ಲಿ ವಿಜಯ್‌ ಸೇತುಪತಿ, ವೀರರೆಡ್ಡಿಯಾಗಿ ಜಗಪತಿಬಾಬು ಅವರ ಕಾಣಿಸಿಕೊಂಡಿದ್ದಾರೆ. ನಿಹಾರಿಕಾ, ರವಿಕಿಶನ್‌ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿದೆ.

ಇದೊಂದು ಸ್ವಾತಂತ್ರ್ಯ ಹೋರಾಟಗಾರ ರಾಯಲಸೀಮೆಯ ಉಯ್ನಾಲವಾಡ ನರಸಿಂಹರೆಡ್ಡಿ ಕುರಿತಾದ ಚಿತ್ರಣವನ್ನು ನಿರ್ದೇಶಕ ಸುರೇಂದ್ರ ರೆಡ್ಡಿ ಅವರು ಕಟ್ಟಿಕೊಟ್ಟಿದ್ದಾರೆ. ರಾಮ್‌ಚರಣ್‌ ನಿರ್ಮಾಣವಿದೆ. ಅಮಿತ್‌ ತ್ರಿವೇದಿ ಮತ್ತು ಜ್ಯುಲಿಯಸ್‌ ಸಂಗೀತವಿದೆ. ರತ್ನವೇಲು ಛಾಯಾಗ್ರಹಣವಿದೆ. ಶ್ರೀಕರ್‌ ಪ್ರಸಾದ್‌ ಚಿತ್ರದ ಸಂಕಲನ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಮತ್ತೂಂದು ಅದ್ಧೂರಿ ಬಜೆಟ್‌ನ ಚಿತ್ರ ಇದಾಗಿದ್ದು, ಅಕ್ಟೋಬರ್‌ 2 ಗಾಂಧಿ ಜಯಂತಿ ದಿನದಂದು ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿವಣ್ಣ

ಪ್ರತಿಭಾವಂತರಿಗೆ ಅವಕಾಶ ಸಿಗಬೇಕು – ಶಿವಣ್ಣ

ಮೂವರು ಸ್ಟಾರ್‌ಗಳ ಡ್ಯಾನ್ಸ್‌- ಟ್ರೆಂಡಿಂಗ್‌ ನಲ್ಲಿ ‘ಭಜರಂಗಿ-2’

ಮೂವರು ಸ್ಟಾರ್‌ಗಳ ಡ್ಯಾನ್ಸ್‌- ಟ್ರೆಂಡಿಂಗ್‌ ನಲ್ಲಿ ‘ಭಜರಂಗಿ-2’

ಸ್ನೇಹಿತರ ವಿರುದ್ಧ ವೇ ನಟಿ ಸಂಜನಾ ದೂರು

ಸ್ನೇಹಿತರ ವಿರುದ್ಧವೇ ನಟಿ ಸಂಜನಾ ದೂರು

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.