ಟಗರು ಹವಾ ಶುರು!

Team Udayavani, Feb 20, 2018, 11:01 AM IST

ಶಿವರಾಜಕುಮಾರ್‌ ಅಭಿಮಾನಿಗಳು ಶುಕ್ರವಾರಕ್ಕೆ ಕಾಯುತ್ತಿದ್ದಾರೆ. ಕುತೂಹಲದಿಂದ ಕಾಯುತ್ತಿದ್ದ ಸಿನಿಮಾವನ್ನು ಬೆಳ್ಳಂಬೆಳಗೆ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಷ್ಟು ಹೇಳಿದ ಮೇಲೆ ಯಾವ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ ಎಂದು ನಿಮಗೆ ಗೊತ್ತಾಗಿರಬಹುದು. ಹೌದು, ನಾವು ಹೇಳುತ್ತಿರೋದು “ಟಗರು’ ಸಿನಿಮಾ ಬಗ್ಗೆ. ಟ್ರೇಲರ್‌ ಹಾಗೂ ಹಾಡುಗಳ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ “ಟಗರು’ ಚಿತ್ರ ಈ ವಾರ (ಫೆ.23) ತೆರೆಕಾಣುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಶಿವರಾಜಕುಮಾರ್‌ ಚಿತ್ರವೆಂದರೆ ಅದು “ಟಗರು’. ಸೂರಿ ನಿರ್ದೇಶನದ ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ನಿರ್ಮಿಸಿದ್ದಾರೆ. ಮಾನ್ವಿತಾ ಹರೀಶ್‌ ಹಾಗೂ ಭಾವನಾ ನಾಯಕಿಯರು. “ಟಗರು’ ಚಿತ್ರ ಪ್ರದರ್ಶನ ಶುಕ್ರವಾರ ಮುಂಜಾನೆ 5.45 ರಿಂದಲೇ ಆರಂಭವಾಗಲಿದ್ದು, ಚಿತ್ರಮಂದಿರಗಳಲ್ಲಿ ದಿನಕ್ಕೆ 6 ಶೋಗಳ ಪ್ರದರ್ಶನ ಕಾಣಲಿದೆ. ಸಾಮಾನ್ಯವಾಗಿ ಬಳ್ಳಾರಿ, ಹೊಸಪೇಟೆಗಳಲ್ಲಿ ಕನ್ನಡ ಚಿತ್ರಗಳು ಮುಂಜಾನೆ ಪ್ರದರ್ಶನ ಕಾಣುತ್ತಿದ್ದವು.

ಆದರೆ, “ಟಗರು’ ಚಿತ್ರ ಕೇವಲ ಬಳ್ಳಾರಿ, ಹೊಸಪೇಟೆಯಷ್ಟೇ ಅಲ್ಲದೇ, ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಮುಂಜಾನೆ ಪ್ರದರ್ಶನ ಕಾಣುತ್ತಿರೋದು ವಿಶೇಷ. ಇನ್ನು, ಅಭಿಮಾನಿಗಳು ಕೂಡಾ ತಮ್ಮದೇ ಶೈಲಿಯಲ್ಲಿ “ಟಗರು’ ಸಂಭ್ರವನ್ನು ಆಚರಿಸಲಿದ್ದಾರೆ. ಮೆರವಣಿಗೆ, ಅನ್ನದಾನ ಸೇರಿದಂತೆ ಶಿವರಾಜಕುಮಾರ್‌ ಅಭಿಮಾನಿ ಸಂಘಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್‌ ಕೂಡಾ ಆರಂಭವಾಗಿದ್ದು, ಬುಕ್ಕಿಂಗ್‌ನಲ್ಲೂ “ಟಗರು’ ಹವಾ ಜೋರಾಗಿದೆ.  300 ರಿಂದ 400 ಚಿತ್ರಮಂದಿರಗಳಲ್ಲಿ “ಟಗರು’ ಬಿಡುಗಡೆಯಾಗುತ್ತಿದ್ದು, ಕೇವಲ ಕರ್ನಾಟಕವಷ್ಟೇ ಅಲ್ಲದೇ, ಹೊರರಾಜ್ಯಗಳಲ್ಲೂ ಫೆ.23 ರಂದೇ ಬಿಡುಗಡೆಯಾಗುತ್ತಿದೆ. ಚೆನ್ನೈ, ಪುಣೆ, ಮುಂಬೈ, ಗೋವಾ, ಅಹಮದಾಬಾದ್‌, ಹೈದರಾಬಾದ್‌, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ “ಟಗರು’ ಚಿತ್ರ ಬಿಡುಗಡೆಯಾಗುತ್ತಿದೆ.

ಚಿತ್ರದ ಬಗೆಗಿನ ಕ್ರೇಜ್‌ ಕಂಡು ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಖುಷಿಯಾಗಿದ್ದಾರೆ. “ಅಭಿಮಾನಿಗಳು ಗುರುವಾರ ಮಧ್ಯರಾತ್ರಿಯೇ ಸಿನಿಮಾ ಪ್ರದರ್ಶನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ನಾವೇ ಬೇಡ ಎಂದು ಶುಕ್ರವಾರ ಮುಂಜಾನೆಯಿಂದ ಪ್ರದರ್ಶನ ಆರಂಭಿಸುತ್ತಿದ್ದೇವೆ. ಶಿವಣ್ಣ ಅಭಿಮಾನಿಗಳು “ಟಗರು’ ಸಂಭ್ರಮವನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದೇವೆ. “ಜೋಗಿ’, “ಜೋಗಯ್ಯ’ ನಂತರ ಈಗ “ಟಗರು’ಗೆ ಈ ಮಟ್ಟದ ಕ್ರೇಜ್‌ ಹುಟ್ಟಿದೆ’ ಎನ್ನುವುದು ಶ್ರೀಕಾಂತ್‌ ಮಾತು. 

* ಮುಂಜಾನೆ 5.45 ರಿಂದ ಪ್ರದರ್ಶನ ಆರಂಭ
* ಮೆರವಣಿಗೆ, ಅನ್ನದಾನ ಮೂಲಕ ಅಭಿಮಾನಿಗಳ ಸಂಭ್ರಮ
* ಹೊರರಾಜ್ಯಗಳಲ್ಲೂ ಫೆ.23ರಂದೇ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು

  • ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಚೇಸ್. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟೀಸರ್...

  • "ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್‌, ನೀವು ಸುಮ್ಮನೆ...

  • ದರ್ಶನ್‌ ಅಭಿನಯದ "ಒಡೆಯ' ಚಿತ್ರದ ಆರ್ಭಟ ಜೋರಾಗಿದೆ. ಅದರಲ್ಲೂ ದರ್ಶನ್‌ ಅಭಿಮಾನಿಗಳಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಅಂಶಗಳು "ಒಡೆಯ'ದಲ್ಲಿರುವುದರಿಂದ...

  • ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳನ್ನು ಒಪ್ಪಿಕೊಳ್ಳುವ ನಾಯಕ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಹಳಬರು ಮತ್ತು ಹೊಸಬರು ಎನ್ನದೆ ಎಲ್ಲ...

  • ಸುಮಾರು ಹದಿನೆಂಟು ವರ್ಷಗಳ ಹಿಂದೆ "ಗಟ್ಟಿಮೇಳ' ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್‌. ಮಹೇಂದರ್‌, ಈಗ "ಶಬ್ಧ' ಚಿತ್ರದಲ್ಲಿ ಮತ್ತೂಮ್ಮೆ...

ಹೊಸ ಸೇರ್ಪಡೆ