ಮಾಸ್ ಆಡಿಯನ್ಸ್ಗೆ ಟೀಸರ್ನಲ್ಲೇ “ಟಕ್ಕರ್’
ದಾಸನ ಹುಡುಗನ ಸಿನಿಮಾ
Team Udayavani, Apr 23, 2019, 3:23 AM IST
ಕಳೆದ ವರ್ಷ ಅದ್ಧೂರಿಯಾಗಿ ಸೆಟೇರಿದ್ದ “ಟಕ್ಕರ್’ ಚಿತ್ರ ಸದ್ಯ ತೆರೆಗೆ ಬರೋದಕ್ಕೆ ತೆರೆಮರೆಯಲ್ಲಿ ರೆಡಿಯಾಗಿದೆ. ಸದ್ಯ ಚಿತ್ರದ ಪ್ರಮೋಷನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ “ಟಕ್ಕರ್’ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಿದೆ.
ನಟ ದರ್ಶನ್ ಅವರ ಸೋದರ ಸಂಬಂಧಿ ಮನೋಜ್ ಅವರು “ಟಕ್ಕರ್’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಹೆಸರೇ ಹೇಳುವಂತೆ “ಟಕ್ಕರ್’ ಔಟ್ ಆ್ಯಂಡ್ ಔಟ್ ಮಾಸ್ ಸಬ್ಜೆಕ್ಟ್ ಚಿತ್ರವಾಗಿದ್ದು, ಚಿತ್ರದ ಪ್ರಾರಂಭದಲ್ಲಿಯೇ ಚಿತ್ರತಂಡ ತಿಳಿಸಿದಂತೆ ಭರ್ಜರಿ ಆ್ಯಕ್ಷನ್ ಸೀನ್ಗಳು ಚಿತ್ರದ ಟೀಸರ್ನಲ್ಲೂ ಕಾಣುತ್ತಿದೆ.
“ನೀನು ಟಕ್ಕರ್ ಕೊಡಲು ಬಂದಿರೋದು ದಾಸನ ಗರಡಿ ಹುಡುಗನ ಜೊತೆ’ ಎಂಬ ಪಂಚಿಂಗ್ ಡೈಲಾಗ್ ಮೂಲಕ ಪ್ರಾರಂಭವಾಗುವ ಟೀಸರ್, ನಿಧಾನವಾಗಿ ಮಾಸ್ ಆಡಿಯನ್ಸ್ ಗಮನ ಸೆಳೆಯುತ್ತಿದೆ. ಆ್ಯಕ್ಷನ್ ಜೊತೆ ಸಿನಿಮಾದ ನವಿರಾದ ಪ್ರೇಮ ಕಥೆಯನ್ನು ಹೊಂದಿರುವ “ಟಕ್ಕರ್’ ಚಿತ್ರದಲ್ಲಿ, ನಾಯಕ ಮನೋಜ್ಗೆ ಜೋಡಿಯಾಗಿ “ಪುಟ್ಟ ಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದಾರೆ.
ವಿ.ರಘು ಶಾಸ್ತ್ರಿ ನಿರ್ದೇಶನದಲ್ಲಿ “ಟಕ್ಕರ್’ ಮೂಡಿ ಬಂದಿದ್ದು, ಕೆ.ಎನ್ ನಾಗೇಶ್ ಕೋಗಿಲು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ ಮಾಸ್ “ಟಕ್ಕರ್’ ತೆರೆಮೇಲೆ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರ ಬಿಡುಗಡೆ ಆದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ