ರೆಮೋಗೆ ಬಂದ ಶರತ್‌ ಕುಮಾರ್‌

Team Udayavani, Nov 21, 2019, 3:42 PM IST

ನಿರ್ದೇಶಕ ಪವನ್‌ ಒಡೆಯರ್‌ “ನಟಸಾರ್ವಭೌಮ’ ಚಿತ್ರದ ನಂತರ ಸಿ.ಆರ್‌. ಮನೋಹರ್‌ ನಿರ್ಮಾಣದಲ್ಲಿ ಅವರ ಸಹೋದರ ಇಶಾನ್‌ ಅವರಿಗೆ “ರೆಮೋ’ ಚಿತ್ರವನ್ನು
ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ.

ಈಗಾಗಲೇ ಚಿತ್ರೀಕರಣ ಜೋರಾಗಿ ಸಾಗುತ್ತಿದ್ದು, ಚಿತ್ರತಂಡಕ್ಕೆ ತಮಿಳು ಚಿತ್ರರಂಗದ ಸ್ಟಾರ್‌ನಟ ಶರತ್‌ಕುಮಾರ್‌ ಆಗಮನವಾಗಿದೆ. ಹಾಗಂತ, ಶರತ್‌ಕುಮಾರ್‌ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶರತ್‌ಕುಮಾರ್‌, “ರಾಜಕುಮಾರ’ ಚಿತ್ರದ ಬಳಿಕ ಪುನಃ ಕನ್ನಡಕ್ಕೆ ಬಂದಿದ್ದಾರೆ.

ಹೌದು, ಪವನ್‌ ಒಡೆಯರ್‌ ನಿರ್ದೇಶಿಸುತ್ತಿರುವ “ರೆಮೋ’ ಚಿತ್ರದಲ್ಲಿ ಶರತ್‌ ಕುಮಾರ್‌ ನಟಿಸುತ್ತಿದ್ದಾರೆ. ಚಿತ್ರದ ನಾಯಕರಾಗಿರುವ ಇಶಾನ್‌ ಅವರ ತಂದೆ ಪಾತ್ರದಲ್ಲಿ ಶರತ್‌ ನಟಿಸುತ್ತಿದ್ದು, ಅದೊಂದು ವಿಭಿನ್ನ ಪಾತ್ರವಾಗಿದೆ. ಕರ್ನಾಟಕದ ಅತೀ ಶ್ರೀಮಂತ ವ್ಯಕ್ತಿಯ ಪಾತ್ರದಲ್ಲಿ ಶರತ್‌ಕುಮಾರ್‌ ಅಭಿನಯಿಸುತ್ತಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಶ್ರೀಮಂತ ವ್ಯಕ್ತಿಯಾಗಿ ಅವರಿಲ್ಲಿ ವಿಭಿನ್ನ ಗೆಟಪ್‌ ಮೂಲಕ
ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು, ಚಿತ್ರದಲ್ಲಿ ಈಗಾಗಲೇ ದೊಡ್ಡ ಬಜೆಟ್‌ನಲ್ಲಿ ಗಾಜಿನ ಸೆಟ್‌ವೊಂದನ್ನು ನಿರ್ಮಿಸಿ, ಚಿತ್ರೀಕರಿಸಿರುವುದು ವಿಶೇಷತೆಗಳಲ್ಲೊಂದು. ಚಿತ್ರದ ಹೀರೋ ಪಾತ್ರವನ್ನು ವಿವರಿಸುವಂತಹ ಗಾಜಿನ ಕಚೇರಿಯ ಸೆಟ್‌ವೊಂದು ಚಿತ್ರದ ಪ್ರಮುಖ ಆಕರ್ಷಣೆ ಈ ಚಿತ್ರದಲ್ಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ