ಟೀ ಕಪ್‌ ನಿಮ್ಗೆ, ವರ್ಲ್ಡ್ ಕಪ್ ನಮ್ಗೆ …

ಪಾಕ್‌ಗೆ ಪಾರುಲ್‌ ಟಾಂಗ್‌

Team Udayavani, Jun 18, 2019, 3:00 AM IST

ಕೆಲ ದಿನಗಳ ಹಿಂದೆ ಪಾಕಿಸ್ತಾನದ ಟಿವಿ ಮಾಧ್ಯಮವೊಂದು ಭಾರತವನ್ನು ಅವಹೇಳನ ಮಾಡುವಂತ ಜಾಹೀರಾತೊಂದನ್ನು ಪ್ರಸಾರ ಮಾಡಿತ್ತು. ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್‌ನಲ್ಲಿ ಏರ್‌ಸ್ಟ್ರೈಕ್‌ ನಡೆಸಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಹೋಲುವ ವ್ಯಕ್ತಿಯನ್ನು ಬಳಸಿಕೊಂಡು, ಭಾರತವನ್ನು ಹೀಯಾಳಿಸುವ ರೀತಿ ಜಾಹೀರಾತಿನಲ್ಲಿ ಬಿಂಬಿಸಲಾಗಿತ್ತು.

ಇದು ಭಾರತಕ್ಕೆ ಮತ್ತು ವೀರ ಯೋಧ ಅಭಿನಂದನ್‌ ವರ್ಧಮಾನ್‌ ಅವರಿಗೆ ಮಾಡಿದ ಅವಮಾನ ಎಂದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಪಾಕ್‌ ಮಾಡಿದ ಅವಮಾನಕ್ಕೆ ಸರಿಯಾದ ಉತ್ತರ ಎನ್ನುವಂತೆ ನಟಿ ಪಾರುಲ್‌ ತಮ್ಮದೇ ಸ್ಟೈಲ್‌ನಲ್ಲಿ ಪಂಚ್‌ ನೀಡಿದ್ದಾರೆ. ಹೌದು, ಸೋಮವಾರ ನಡೆದ ಕ್ರಿಕೆಟ್‌ ವರ್ಲ್ಡ್ ಕಪ್‌ನ ಹೈ ವೋಲ್ಟೆಜ್‌ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ದ ಭರ್ಜರಿ ಜಯ ಸಾಧಿಸಿದೆ.

ಇನ್ನು ತಮ್ಮ ಸ್ನೇಹಿತರ ಜೊತೆ ಗೂಡಿ ಈ ಪಂದ್ಯವನ್ನು ತುಂಬಾ ಎಂಜಾಯ್‌ ಮಾಡಿದ ನಟಿ ಪಾರುಲ್‌ಗೆ ಪಾಕ್‌ ವಿರುದ್ದ ಭಾರತ ಗೆದ್ದಿದ್ದು ಅವರಿಗೆ ತುಂಬ ಖುಷಿ ನೀಡಿದೆ. ಈ ವಿಜಯೋತ್ಸವದಲ್ಲಿ ನಟಿ ಪಾರುಲ್‌, “ಟೀ ಕಪ್‌ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ಕಪ್‌ ಗೆಲ್ಲುತ್ತೇವೆ’ ಎಂದು ಅಭಿನಂದನ್‌ ಅವರ ರೀತಿಯ ಮೀಸೆ ಧರಿಸಿ ಅದೇ ಜಾಹೀರಾತಿನ ಮೂಲಕ ಪಾಕಿಸ್ತಾನದ ಕಾಲೆಳೆದಿದ್ದಾರೆ.

ಸದ್ಯ ಪಾಕ್‌ಗೆ ಪಾರುಲ್‌ ಕೊಟ್ಟಿರುವ ಟಾಂಗ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಅನೇಕರು ಪಾರುಲ್‌ ಕೆಲಸಕ್ಕೆ ಭೇಷ್‌ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ