“ತ್ರಿವಿಕ್ರಮ’ ತಂಡ ಸೇರಿಕೊಂಡ ತೆಲುಗು ನಟ

ನಾಯಕಿ ತಂದೆಯಾಗಿ ಜಯಪ್ರಕಾಶ್‌ ನಟನೆ

Team Udayavani, Sep 23, 2019, 3:02 AM IST

ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ “ತ್ರಿವಿಕ್ರಮ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೇ ಶೇ.40 ರಷ್ಟು ಚಿತ್ರೀಕರಣ ಪೂರೈಸಿರುವ ಚಿತ್ರತಂಡಕ್ಕೆ ಈಗ ತೆಲುಗು ಚಿತ್ರರಂಗದ ನಟರೊಬ್ಬರು ಎಂಟ್ರಿಯಾಗಿದ್ದಾರೆ. ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳಲ್ಲಿ ನಟಿಸುವ ಮೂಲಕ ಬಿಝಿ ನಟ ಎನಿಸಿಕೊಂಡಿರುವ ಜಯಪ್ರಕಾಶ್‌, “ತ್ರಿವಿಕ್ರಮ’ ಚಿತ್ರತಂಡ ಸೇರಿದ್ದಾರೆ.

ಈ ಚಿತ್ರದಲ್ಲಿ ಅವರದು ನಾಯಕಿ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನಿರ್ದೇಶಕ ಸಹನಮೂರ್ತಿ ಅವರು ಕಳೆದ ಐದು ದಿನಗಳಿಂದಲೂ ಅವರ ಭಾಗದ ಕೆಲ ಮುಖ್ಯ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಅಂದಹಾಗೆ, ಜಯಪ್ರಕಾಶ್‌ ಅವರಿಗೆ “ತ್ರಿವಿಕ್ರಮ’ ಎರಡನೇ ಚಿತ್ರ. ಈ ಹಿಂದೆ ಅವರು, ಶಿವರಾಜಕುಮಾರ್‌ ಅಭಿನಯದ “ಕವಚ’ ಚಿತ್ರದಲ್ಲಿ ನಟಿಸಿದ್ದರು.

ಈಗ “ತ್ರಿವಿಕ್ರಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಕಾಲೇಜ್‌ ಭಾಗದ ಚಿತ್ರೀಕರಣ ಮುಗಿಸಲು ಸಜ್ಜಾಗಿರುವ ಚಿತ್ರತಂಡ, ಅದನ್ನು ಪೂರೈಸಿ, ರಾಜಸ್ಥಾನಕ್ಕೆ ಹೊರಡಲಿದ್ದಾರೆ. ಅದಾದ ಬಳಿಕ ಉಳಿದ ಮಾತಿನ ಭಾಗದ ಚಿತ್ರೀಕರಣ ಮುಗಿಸುವ ಯೋಜನೆ ಹಾಕಿಕೊಂಡಿದೆ. ಹಾಡುಗಳಿಗೆ ಗೋವಾ, ದೂದ್‌ಸಾಗರ್‌ ಹಾಗು ಬ್ಯಾಂಕಾಕ್‌ಗೆ ಹೋಗುವ ಪ್ಲಾನ್‌ ಮಾಡಿಕೊಂಡಿದೆ. ಚಿತ್ರದಲ್ಲಿ ಆಕಾಂಕ್ಷ ನಾಯಕಿಯಾದರೆ,

ಅಕ್ಷರಗೌಡ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಪಕ್ಕಾ ಲವ್‌ಸ್ಟೋರಿ ಹೊಂದಿದ್ದು, ತಾಯಿ ಸೆಂಟಿಮೆಂಟ್‌, ಎಮೋಷನ್ಸ್‌ ಹಾಗು ಒಂದಷ್ಟು ಗೆಳೆತನ ಇತ್ಯಾದಿ ಅಂಶಗಳು ಚಿತ್ರದಲ್ಲಿವೆ. ಉಳಿದಂತೆ ಚಿತ್ರದಲ್ಲಿ ಸಾಧುಕೋಕಿಲ, ತುಳಸಿ ಶಿವಮಣಿ, ಚಿಕ್ಕಣ್ಣ, ಸುಚೇಂದ್ರಪ್ರಸಾದ್‌ ಇತರರು ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯಾ ಆರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ